ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದೊಂದು ದಿನ

By Staff
|
Google Oneindia Kannada News
Asha Balakrishnaಹಳ್ಳಿಹಳ್ಳಿಗಳಲೂ ಬಂತಲ್ಲ ಆಂಗ್ಲ ಮಾಧ್ಯಮ!
ಆಯಿತದೇ ಉತ್ತಮ ಹಣದ ಉದ್ಯಮ.
ಕೊಂಚಕೊಂಚದಲಿ ಕನ್ನಡದ ಹತ್ಯೆಯೇ ಪರಿಣಾಮ,
ಆಗಬಹುದೀ ಕನ್ನಡದ ನಿರ್ನಾಮ.

ಕೆ.ಜಿ.ಯ ಮೊದಲು ನರ್ಸರಿ, ಅದರ ಮೊದಲು ಪ್ರಿನರ್ಸರಿ,
ಹೋಗಲಿ ಮುಕ್ಕೋಟಿ ನವಕೋಟಿ ದೃಷ್ಟಿಯಲೂ ಇದುವೇ ಸರಿ.
ಮೊದಲ ನುಡಿ ತೊದಲ ನುಡಿ ಆಂಗ್ಲ ಭಾಷೆಯೇ ಇರಲಿ,
ಎಂದೂ ಸಮಾಜದಲಿ ಪ್ರತಿಷ್ಠೆಗೆ ಕುಂದಾಗದಿರಲಿ.

ಮತ್ತೆ ಬಂದ ಕನ್ನಡ ಎಂದೂ ಆಗಲಾರದು ಸೋದರ,
ಸಿಗುವುದೆಂದೂ ಇದಕೆ ದಾಯಾದಿಯ ಆದರ.
ಸ್ಪರ್ಧಿಸಲಾರವೆಂದೂ ಆಂಗ್ಲ ಪತ್ರಿಕೆಯಾಡನೆ ಕನ್ನಡವೀಗ,
ಸುಲಭದಲಿ ಓದಲಾಗದೆ(ಆಂಗ್ಲ ಮಾಧ್ಯಮದ ಮಕ್ಕಳಿಗೆ) ಬರುವುದು ತಾತ್ಸಾರವೇ ಬಲು ಬೇಗ.

ಭವಿಷ್ಯವದು ಸಮೀಪವೇ ಇರಬಹುದಲ್ಲ ,
ಪಂಪ, ರನ್ನರ ಬಗ್ಗೆ ಯಾರಿಗೂ ಗೊತ್ತಿಲ್ಲ.
ಕವಿರಾಜ ಮಾರ್ಗವ ಕಂಡವರೇ ಇಲ್ಲ,
ಶಬ್ದಮಣಿ ದರ್ಪಣವ ಕೇಳಿದವರೇ ಇಲ್ಲ,

ವ್ಯಾಕರಣ ಮಾತ್ರೆಗಳ ಬಗ್ಗೆ ನೀವು ಮಾತಾಡಿ.
ಮಾತ್ರೆಗಳೇ ಸ್ವಾಮಿ ತಿನ್ನುವುದಕೆ ನೋಡಿ.
ಅಚ್ಛ ಕಕನ್ನಡ ಸ್ವಚ್ಛ ಕನ್ನಡ ಎಂದೋ ಮುಗಿದ ಕಥೆ,
ಸಂಸ್ಕೃತ ಉಳಿದಷ್ಟೂ ಸಹ ಉಳಿಯಾಲಾರದೆಂಬುದೇ ದೊಡ್ದ ವ್ಯಥೆ.

(ಊರಿಗೆ ಹೋಗಿದ್ದಾಗ ಆಂಗ್ಲ ಮಾಧ್ಯಮದ ಮಕ್ಕಳು ಆಂಗ್ಲ ಭಾಷೆಯಲ್ಲೇ ಮಾತಾಡಿ, ಅವೇ ಕಥೆ ಪುಸ್ತಕಗಳನ್ನೂ, ವೃತ್ತ ಪತ್ರಿಕೆಗಳನ್ನೂ ಓದುವುದನ್ನು ನೋಡಿ ನಾಲ್ಕು ವರ್ಷಗಳ ಹಿಂದೆ ಬರೆದದ್ದು)

ಕವಿತೆಯ ಕುರಿತು ಏನನ್ನಿಸಿತು- ತಪ್ಪದೇ ಬರೆಯಿರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X