ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪ

By Staff
|
Google Oneindia Kannada News
  • ಉಗಮ ಶ್ರೀನಿವಾಸ
ನ ನೆನಪು ಬಂದಾಗ
ನನ್ನ ಕಣ್ಣಿಗೆ ಬರುವ
ಚಿತ್ರ ಇದು.

ಆತ ಸಿಂಬಳ ಸೋರುತ್ತಿದ್ದ ನನ್ನನು
ಹೆಗಲ ಮೇಲೆ ಕೂರಿಸಿಕೊಂಡು
ಊರೂರು ಅಲೆಸುತ್ತಿದ್ದು .

ಇಸ್ಪೀಟ್‌ ಎಲೆಯಲ್ಲಿ ಹುದುಗಿದ್ದಾಗ
ತನ್ನ ಪಕ್ಕ ಮಗ ಇದ್ದರೆ
ಗೆಲ್ಲುತ್ತೇನೆಂದು ನಂಬಿ
ಶಾಲೆಗೆ ಚಕ್ಕರ್‌ ಹಾಕಿಸಿ ಕೂರಿಸಿಕೊಳ್ಳುತ್ತಿದ್ದು .

ವರ್ಷಕ್ಕೊಮ್ಮೆ ರಾತ್ರಿ ಪೂರಾ ನಡೆಯುವ
ಜಾತ್ರೆಗೆ ಹೇಗೋ ಹಣ ಕೂಡಾಕಿ
ಹೊತ್ತಲ್ಲದ ಹೊತ್ತಲ್ಲಿ
ಕಾಮತ್‌ರ ಹೋಟೆಲ್‌ನಲ್ಲಿ
ಮಸಾಲೆ ದೋಸೆ ಕೊಡಿಸಿ
ಮಾರನೆ ದಿನ ಊರೆಂಬೊ ಊರಿಗೆ
ದೋಸೆ ಕೊಡಿಸಿದರ ಬಗ್ಗೆ ಹೇಳುತ್ತಿದ್ದು .

ಮೀಸೆ ಚಿಗುರಿದ ವಯಸ್ಸಲ್ಲೂ
ನನ್ನನು ತನ್ನ ಹೊಟ್ಟೆ ಮೇಲೆ
ಮಲಗಿಸಿಕೊಳ್ಳುತ್ತಿದ್ದು .

ಪಾಠವನ್ನು ಉರುಹಚ್ಚಿ ಎಲ್ಲರ ಬಳಿ
ಸೈ ಅನ್ನಿಸಿಕೊಳ್ಳುತ್ತಿದ್ದಾಗ
ಎ ಪ್ಲಸ್‌ ಬಿ ಹೋಲ್‌ ಸ್ಕ್ವೇರ್‌
ಸೂತ್ರ ಕೇಳಿ
ಗೊತ್ತಾಗದೆ ಪೆಚ್ಚಾದ ನನ್ನ
ಮುಖ ನೋಡಿ ಹಿರಿ ಹಿರಿ ಹಿಗ್ಗಿದ್ದು

ಮಾಡಿದ ಮುಖಭಂಗಕ್ಕೆ ಸಿಟ್ಟಾಗಿ
ಮಾತಾಡದೆ ಮುದುರಿ ಕೂತಾಗ
ತನ್ನೆದೆಗೆ ಆನಿಸಿಕೊಳ್ಳುತ್ತಿದ್ದು .

ನಿಜಕ್ಕೂ ಅಮ್ಮನಂತಲ್ಲಾ !
ಆಕೆ ನನ್ನ ಕನಸಿಗೆ ಕಣ್ಣಾಗಿದ್ದರೆ
ಈತ ಬದುಕಿಗೆ ಊರುಗೋಲಾಗಿದ್ದ .
ನ ನೆನಪು ಈಗ ಮಾಸುತ್ತಿದ್ದರೂ
ಆತನ ಸಿಡುಕು, ಅಸೂಯೆ
ಮೊಗೆಯುವ ಜೀವನ ಪ್ರೇಮ
ಎಲ್ಲವೂ ನೆನಪ ಚಪ್ಪರದಲ್ಲಿ ಹಾಯತೊಡಗಿದಾಗ

ಅನ್ನಿಸಿದ್ದು ಒಂದು ಕ್ಷಣೊತ್ತಾದರೂ
ಬದುಕಬೇಕು ನಂತೆ.

ಈ ಕವಿತೆ ಬಗ್ಗೆ ಏನನ್ನಿಸಿತು?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X