ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಚಲ ಮನಸ್ಸು

By Staff
|
Google Oneindia Kannada News
  • ಭಾರ್ಗವಿ ಸುಧಾಸಿಂಧು, ವರ್ಜೀನಿಯ
    E-mail : [email protected]
Bhargavi Sudhasindhuಮನಸೊಂದು ಮರ್ಕಟದಂತೆ, ಬಹು ಚಂಚಲ
ದಿಕ್ಕುಗಳನ್ನೆದುರಿಸಿ ಓಡುವ ವೇಗಾತೀತ ವಾಹನ
ಇದರ ವರ್ಣವೇನೊ, ಆಕೃತಿ ಏನೋ,
ಇದರ ಚಾಲಕನು ಮಾನವನೊ, ಆ ದೇವನೊ,
ಇದನ್ನರಿತವರಾರು, ಬಲ್ಲವರಾರು, ತಡೆದವರಾರು

ವಿಜ್ಞಾನಶಾಸ್ತ್ರವನ್ನು ಬದಲಿಸಬಹುದು
ಭೂಚಂದ್ರಲೋಕಕ್ಕೆ ಪ್ರವಾಸಿಸಬಹುದು
ಯಂತ್ರಮಾನವನನ್ನು ಸೃಷ್ಟಿಸಬಹುದು
ಭೂಗೊಳವನ್ನೇ ಸುತ್ತಬಹುದು
ಆತಿವೇಗದಿ ಓಡುವ ಮನಸ್ಸನ್ನು ತಡೆದು ಏರಲಸಾಧ್ಯ

ಶಿಶುನಾಳದಿಂದ ಶಿಶು ಸೃಷ್ಟಿಸಬಹುದು
ಕೃತಕ ಹೃದಯ ಪಡೆಯಬಹುದು
ಕಳೆದ ನೆನಪುಗಳು ಮರಳಿ ನೆನೆಯಬಹುದು
ಮುಖಾರವಿಂದಾವನ್ನು ಮರು ಅಂದಗೊಳಿಸಬಹುದು
ಪುಟಿದುಪುಟಿದೇಳುವ ಮನಸನ್ನರಿಯಲಸಾಧ್ಯ

ಭೋರ್ಗರೆವ ಅಲೆಯನ್ನು ತಡೆಯಬಹುದು
ಭೂಕಂಪ ಅಪಘಾತ ನಿರೀಕ್ಷಿಸಬಹುದು
ಕ್ರೂರಪ್ರಾಣಿಗಳನು ತಡೆಯಬಹುದು
ಆಗ್ನಿ, ವಾಯು, ವರುಣರಿಂದ ರಕ್ಷಿಸಿಕೊಳ್ಳಬಹುದು
ಚಂಚಲ ಮನ್ಸಸ್ಸನ್ನು ತಡೆಯಲಸಾಧ್ಯ.

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X