ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝಂ ಝಂ ಹನಿ : ಕವಿತೆಕೊಡದಿ ಹತ್ತು ಹನಿ !

By Staff
|
Google Oneindia Kannada News
  • ಚಂದ್ರಮ,ಜ್ಯೂರಿಚ್‌, ಸ್ವಿಟ್ಝರ್‌ಲ್ಯಾಂಡ್‌
    Email : [email protected]
Madabhavi Chandrashekharಪ್ರೀತಿಯ ಬೆಲೆ

ನಿನ್ನೆ ನಿನ್ನ ನೋಡಿದೆ
ಕಂಡೆ ನೀನು ಚಂದಿರನಂತೆ
ನಿನ್ನ ಪ್ರೀತಿಸಿದೆ
ನಿನ್ನ ಚಿತ್ರ ಮನೆಯಲ್ಲಿ ತೋರಿದೆ
ಕೇಳಿದರೆಲ್ಲಾ ತರುವಳೇನು ನೋಟಿನ ಕಂತೆ

*

ಆಸ್ತಿ

ಎಲ್ಲರಿಗೂ ಗೊತ್ತು
ಅವನಿಗಿದೆ ತುಂಬಾ ಆಸ್ತಿ
ಅವರಿಗೇನು ಗೊತ್ತು
ಅವನಿಗೆ ಸಂಬಳಕ್ಕಿಂತ
ಗಿಂಬಳವೆ ಜಾಸ್ತಿ

*

ಮೊಟ್ಟೆ - ಹೊಟ್ಟೆ

ದೂರದರ್ಶನದಲ್ಲಿ ಹೇಳುತ್ತಾರೆ
ದಿನಾಲು ತಿನ್ನಿ ಮೊಟ್ಟೆ
ತಿಂದರೆ ಜನ ಕೇಳುತ್ತಾರೆ
ಎಷ್ಟು ತಿಂಗಳ ಹೊಟ್ಟೆ

*

ಕವನ - ಪ್ರಶಸ್ತಿ

ನನ್ನ ಈ ಕವನ
ತುಂಬಾ ಚಿಕ್ಕದು
ಅದಕ್ಕೆ ಈ ಸಲದ ಪ್ರಶಸ್ತಿ
ನನಗೆ ದಕ್ಕದು

*

ಜನಪ್ರಿಯತೆ

ನನ್ನ ಕವಿತೆಗಳಿಗೆ
ತುಂಬಾ ಜನಪ್ರಿಯತೆ
ಅವುಗಳಿಗೆಲ್ಲಾ ಸ್ಫೂರ್ತಿ
ನನ್ನವಳ ಮಾತುಕತೆ

*

ವರಿಸು

ಸೀತೆ ವರಿಸಿದಳು
ರಾಮನನ್ನು
ನನ್ನವಳು ನನ್ನಿಂದ
ಒರೆಸುತ್ತಿದ್ದಾಳೆ
ನೆಲವನ್ನು

*

ಮೇಕಪ್ಪು

ಅಂದ ಕಾಣದಿದ್ದರೆ
ಅವಳದೇನು ತಪ್ಪು
ಎಲ್ಲಾ ತಪ್ಪು
ಅವಳು ಮಾಡಿಕೊಂಡಿರುವ
ಹೆಚ್ಚಿನ ಮೇಕಪ್ಪು

*

ಸಲಹೆ

ಎಲ್ಲಾದರೂ ಇರಿ
ಎಂಥಾದರೂ ಇರಿ
ಬೆಂಗಳೂರಲ್ಲಾದರೂ ಇರಿ
ದಿಲ್ಲಿಯಲ್ಲಾದರೂ ಇರಿ
ಆದರೆ ಆಗಾಗ
ನಿಮ್ಮನು ಆರಿಸಿ ಕಳಿಸಿದ
ಹಳ್ಳಿಯ ಕಡೆ ಬರ್ತಾ ಇರಿ

*

ಮತ - ಹಿತ

ರಾಜಕಾರಣಿಗಳಿಗೆ ಹಿತ
ಸಿಕ್ಕರೆ ಮಾತ್ರ ಮತ
ಇಲ್ಲದಿದ್ದರೆ ಪಕ್ಷರಹಿತ
ಅಥವಾ ಉಚ್ಚಾಟಿತ

*

ಪರಿಸ್ಥಿತಿ

ಆಗ
ಮಗಳಿದ್ದಳು ಆರತಿಗಾಗಿ
ಮಗನಿದ್ದನು ಕೀರುತಿಗಾಗಿ
ಈಗ
ಮಗಳಿದ್ದಾಳೆ ಅಳಿಯನಿಗಾಗಿ
ಮಗನಿದ್ದಾನೆ ಸೊಸೆಗಾಗಿ
ತಂದೆ ತಾಯಿಯಿದ್ದಾರೆ
ಒಂಟಿಯಾಗಿ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X