• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗವೇ ಕಾಮನಬಿಲ್ಲು ...

By Staff
|
  • ಶ್ರೀವತ್ಸ ದುಗ್ಲಾಪುರ, ಸನ್ನಿವೇಲ್‌
  • Sreevatsa duglapuraವಿಜಯಿ ತಾನೆಂಬಂತೆ ರೊಚ್ಚಿನಲಿ ಅವಡುಗಚ್ಚಿ ।

    ತ್ವರೆಯಿಂದ ಧಾವಿಸುವ ಸ್ಪರ್ಧೆಯಶ್ವವೆ ನಾವು? ।।

    ಬದುಕಿನೋಟದಲಿ ಮೊದಲೇನು? ಕೊನೆಯೇನು? ।

    ವ್ಯವಧಾನದಲಿ ನಡೆಯೆ ಬಾಳು ಹಸನು ।।

    ಬಾಂದಳದ ಅಂಚಿನಲಿ, ಅಗೋ! ಕಾಮನಬಿಲ್ಲು ।

    ಮಳೆ-ಬಿಸಿಲ ಈ ಪ್ರಸವ ಬರಿಯ ಬಾನಿನ ಸ್ವತ್ತೇ? ।।

    ಬಯಸಿದರೆ ಕಾಣಬಹುದದನೆ ಈ ಇಹದೊಳಗೆ ।

    ಪರಿಪರಿಯ ವರ್ಣಗಳ, ಆತ್ಮದಕ್ಷಿಯ ತೆರೆಯೆ ।।

    ಬಯಸಿದರೆ ಕಾಣಬಹುದದನೆ, ಸ್ನೇಹದಲಿ ।

    ನಗಿಪ ಹಸುಳೆಯ ತುಟಿಯಂಚಿನಲಿ, ಕಣ್ಮಿಂಚಿನಲಿ ।।

    ಗುರುಹಿರಿಯರ ಹರಕೆಯಲಿ, ಹೆಣ್ಣಗಂಡೊಲವಿನಲಿ ।

    ಒಳಿತುಗಳ ವರ್ಣಸಂಕುಲವ, ಆತ್ಮದುನ್ನತಿಯಲ್ಲಿ ।।

    ಜಗದಾದಿ ಅಂತ್ಯಗಳ ತಿಳಿಯ ಪೊರಟೆವು ಬಿಡದೆ ।

    ಸೃಷ್ಟಿ-ಮೃತ್ಯುಗಳ ಬಗೆದು ಗುಟ್ಟ ಕೆದಕುವ ಛಲವೆ ।।

    ಪಾಪಪುಣ್ಯದ ಗೊಡವೆ, ಸಗ್ಗನಾಕದ ನಡುವೆ ।

    ಹೃದ್ವರ್ಣ, ಋಣಬಣ್ಣಗಳ ಅರಿವಿಹುದೇ ಮನಕೆ? ।।

    ವರುಣನಾಮೋದವದು; ಅರೆಕ್ಷಣವೆ ಮಳೆಬಿಲ್ಲು ।

    ಮರುಕ್ಷಣಕೆ ಮಾಯವದು! ಅವ ಮುನಿಸಿಕೊಳಲು ।।

    ಕಾಣಬಹುದಾದರೀ ಅದ್ಭುತವ, ಅನುಕ್ಷಣವು ನಮ್ಮೊಳಗೆ ।

    amp;#3218;ಳಿತುಗಳದರ ಬಣ್ಣಗಳು ।।

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more