ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ಕಣ್ಣ ವಿಸ್ತಾರಕ್ಕೆ...

By Staff
|
Google Oneindia Kannada News
ಪ್ರೀತಿಯೂ ಒಂದು ಮಹಾ ತಪಸ್ಸು
- ಕು.ವೆಂ.ಪು.

ಅಂದು ಮಾರುದ್ದ ಕನಸ ನೇಯ್ದು
ಕಾಮನ ಬಿಲ್ಲು ಹಚ್ಚಿ,
ಎದೆಯ ತಂತಿಗಳ ಮೀಟಿ
ತುಟಿಗೆ ತುಟಿ ಹಚ್ಚಿ,
ಮನಸ ಬಿಚ್ಚಿ
ಕಿವಿಯಲ್ಲಿ ಪಿಸು ನುಡಿದು
ಮೈಯ ತುಂಬೆಲ್ಲಾ ರಂಗೋಲಿ ಚಿತ್ತಾರ
ಬರೆದು,
ಆಕಾಶಕ್ಕೆ ಮೈ ಚಾಚಿ
ನಕ್ಷತ್ರಕ್ಕೆ ಕೈ ಚಾಚಿ-
ಬಿಕ್ಕಿ, ನೇವರಿಸಿ, ಸಾವರಿಸಿ, ಎದೆಗೀರಿ
ಪ್ರೀತಿಯ ಲೆಕ್ಕಗಳ
ಕಳೆದು, ಭಾಗಿಸಿ, ಕೂಡಿಸಿ-ಗುಣಿಸಿ
ತಬ್ಬಿಬ್ಬಾಗಿಸಿ
ಚಿಮ್ಮಿ ಗಿರಿಗಿಟ್ಟೆಯಾಡಿಸಿ
ಸುತ್ತಿ ಸುಳಿಯಾಗಿ,
ಅಲೆದು ಅಲೆಯಾಗಿ
ನಿಂತು ನೀ ನಕ್ಕಾಗ-
ಗೊತ್ತು
ಗೆಳತಿ,
;br/>ನನ್ನ ಪ್ರೀತಿ ಆಪೋಶನ-
ಮನ ತಪೋವನ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X