ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

By Staff
|
Google Oneindia Kannada News
  • ರವಿ ಬಿ.ಎನ್‌. ಮೂರ್ನಾಡು,
    ಕೇರಾಫ್‌ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ - 571 201.
bEda Krishna ranginAta...ಕೃಷ್ಣಾ ...
ನಿನ್ನೊಡನಿದ್ದ ಹದಿನಾರು ಸಾವಿರ ಹೆಂಡತಿಯರು
ಏನಾದರು ಗೊತ್ತಾ ?

ನಿನ್ನಲಂಕೃತ ಶಯ್ಯಾಗಾರದಲ್ಲಿ
ಒಬ್ಬರಿಗೊಬ್ಬರು ಮೈಮರೆತಿದ್ದವರು
ಸದ್ದಿಲ್ಲದೆ ಮುಂಜಾನೆ ಮಂಚದಿಂದೆದ್ದು
ನದಿಯ ಸ್ನಾನಕ್ಕೆಂದು ಹೋದವರು
ಹಿಂತಿರುಗಿ ಬರಲಿಲ್ಲ ಎಂಬುವುದು
ಈಗ ದೊಡ್ಡ ಸುದ್ದಿ !

ಅವರೆಲ್ಲಾ ಈ ವಿಶಾಲ
ಶಾಡ್ವಲದಡಿಯಲ್ಲಿ
ಎದುರಿಗಿದ್ದ ಬೆಟ್ಟದ ತಪ್ಪಲಿನಲಿ
ಕಾನನದ ಕವಲು ದಾರಿಯಲಿ
ವೈಯ್ಯಾರದಲಿ ಹೂ ಕುಯ್ಯಲು ಹೋಗಿ
ದಿಕ್ಕು ತಪ್ಪಿದ್ದಾರೆ !
ದಿಕ್ಕು ತಪ್ಪಿದವರೆಲ್ಲಾ
ಶಹರಿನ ಒಳ ಹೊಕ್ಕು
ಮಹಡಿ ಮನೆಗಳ ಕೋಣೆ ಕೋಣೆಯಲಿ
ಹಂಚಿ ಹೋಗಿದ್ದಾರೆ ಕೃಷ್ಣಾ... !

ಒಂದಷ್ಟು ಜನ
ಗಲ್ಲಿ ಗಲ್ಲಿಯಲಿ ಕಣ್ಣು ಹಾಯಿಸಿ
ಹರಕು ಚಿಂದಿಯಾಳಗೆ ಕಣ್ಣು ಹಾಯಿಸಿ
ಹರಕು ಚಿಂದಿಯಾಳಗೆ ಕೈ ಬೀಸಿ
ಮುರುಕು ಛಾವಡಿ ಕೆಳಗೆ ಚಾಪೆಯಾಗಿ
ಕತ್ತಲೆಯ ಮುಸುಕಿನೊಳಗೆ
ನಿದ್ರಿಸುತ್ತಿದ್ದಾರೆ ಕೃಷ್ಣಾ ...
ತುಳಿದು ಬಿಟ್ಟವರ ಕಾಲಿನಡಿ ಧೂಳಾಗಿದ್ದಾರೆ !

ಇನ್ನೊಂದಷ್ಟು ಜನ..
ನಿನ್ನ ಸೇವಕರ ಅಡಿಯಾಳಾಗಿ ಬಿಕ್ಕಳಿಸಿ
ಅದುಮಿಟ್ಟ ಆಸೆಗಳಿಗೆ ಬಣ್ಣ ಹಚ್ಚಿ
ಬೂದಿ ಮುಚ್ಚಿದ ನೋವಿನ ಕೆಂಡಕ್ಕೆ
ಗಾಳಿ ಹಾಯಿಸುತ್ತಿದ್ದಾರೆ ಕೃಷ್ಣಾ ...
ಮನೆ- ಮನಗಳ ಮೂಲೆಯಲಿ
ಉರಿವ ಬೆಂಕಿ ಒಲೆಯಾಗಿದ್ದಾರೆ !

ಅಳಿದುಳಿದ ಅಷ್ಟೊಂದು ಜನ...
ಪರದೆಯ ಮೇಲೆ ಪರದೆಯೆತ್ತಿ
ನರ್ತಕಿಯರಾಗಿ ಬೆತ್ತಲೆಯಾಗುತ್ತಿದ್ದಾರೆ ಕೃಷ್ಣಾ ...
ಕೆಂಪು ದೀಪದ ಮಂದ ಬೆಳಕಿನಡಿ
ಮಿಣುಕು ಬೆಳಕುಗಳಾಗಿ ಉರಿಯುತ್ತಿದ್ದಾರೆ..!

ಕೃಷ್ಣಾ ... ನಿನ್ನ ಹೆಂಡತಿಯರೆಲ್ಲಾ
ಕೆಲವರು ಬ್ರಾಹ್ಮಣರಾದರು !
ಕೆಲವರು ಹೊಲತಿಯರಾದರು !
ಕೆಲವರು ಜಾತಿ-ಜಾತಿಯ ಹಣೆಪಟ್ಟಿಯಲಿ
ಅವರಿವರಿಗೆ ಭಾರವಾದರು !
ಕಾಮದ ಜಿಡ್ಡಿಗೆ ಜಡ್ಡುಗಟ್ಟಿ
ಜಾತಿಯನು ಮೀರಿ
ಎಲ್ಲರಿಗೂ ಬೇಕಾದರು !


ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X