• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬವಣೆಯೋ-ಭಾಗ್ಯವೋ

By Prasad P Naik
|
 • ಹಂ. ಕ. ರಾಮಪ್ರಿಯನ್‌
 • H K Ramapriyanಹಿರಿ yard ಆಸೆಗೆ ಕಟ್ಟಿ ನಾನು ಮನೆಯನ್ನ್‌ ಇನಿಂ office ದೂರದೊಳ್‌
  Car ಒಳ್‌ ಕೂರುತ ಕಾರ್ಯಭಾರವ ಹೊರಲ್‌ drive ಮಾಡುವೆನ್‌ ನಿತ್ಯವೂ ।
  ಎಲ್ಲಾ ಚಾಲಕರನ್ನು ಬಯ್ದು ಸಿಡಿವೆನ್‌ traffic ಉ ಹೆಚ್ಚಾಗಿರಲ್‌
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-1।।

  ಹಿರಿ yard ಒಳ್‌ ಮನೆ ಕಟ್ಟಿ ಬಾಳ್ವೆ ನಡೆಸಲ್‌ ನೀ ಶಕ್ತಿಯಂ ಕೊಟ್ಟಿರಲ್‌
  Car ಒಳ್‌ ಕೂರುತ ನಿನ್ನ ಸೇವೆ ನಡೆಸಲ್‌ ನಾ ಪೋಪೆನ್‌ office ಇಗೆ ।
  ನಿನ್ನಂ ಧ್ಯಾನಿಪ ಪದ್ಯಗಳ್ಗೆ ಸಮಯಂ traffic ಉ ಹೆಚ್ಚಾಗಿರಲ್‌
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+1।।


  Shopping mall ಇಗೆ ಮಾಲ ಕೊಳ್ವುದಕೆ ನಾನ್‌ ಆಗಾಗ್ಗೆ car ಓಡಿಪೆನ್‌
  Parking spot ಅನು ಸುತ್ತಿ ಸುತ್ತಿ ಪಡೆವೆನ್‌ entrenceಇನಾ ಹತ್ತಿರ ।
  ವ್ಯಾಯಾಮಕ್ಕೆರವಾಗಲೆಂದು ಮನೆಯಾಳ್‌ treadmill ಅ ನಾನಿಟ್ಟಿಹೆನ್‌
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-2।।


  ಚಳಿಮಳೆಹಿಮಬಿಸಿಲಾದೊಡೇನೊ ಹರಿಯೇ! ನೀ mall ಗಳಂ ಕೊಟ್ಟಿರಲ್‌
  car ಅನ್ನೋಡಿಸಿ ಬಳಿಯೆ ನಿಲಿಸಿ ನಡೆವೆನ್‌ ನಾ ಮಾಲ್ಗಳಂ ಕೊಳ್ಳಲು ।
  Exercise ಇಗೆ ಮನೆಯಾಳೇ ನಡೆಯುವೆನ್‌ treadmill ಅ ನೀ ಕೊಟ್ಟಿರಲ್‌
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+2।।


  ಕಾಡೊಳ್‌ ನಾ ಮನೆ ಕಟ್ಟಿ ಹೂಗಿಡಗಳಂ ಚೆಂದಕ್ಕೆ ನೆಟ್ಟಿಟ್ಟಿರಲ್‌
  ಕಾಡೊಳ್‌ ಜನ್ಮವ ತಾಳ್ದ ಜಿಂಕೆಮರಿಗಳ್‌ ಮೇಯುತ್ತವಂ ಕೊಲ್ವವೈ ।
  ಅವ ನಾ ನೋಡುತ ಕೋಪದಿಂ ಸಿಡಿಯುತಲ್‌ ಹೇ ಹೇ ಎನುತ್ತೋಡಿಪೆನ್‌
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-3।।


  ನಿನ್ನೀ ಸೃಷ್ಟಿಯ ಚೆಂದದೊಳ್‌ ಮೆರೆಯೆ ನಾನ್‌ ಕಟ್ಟಿರ್ಪೆ ಕಾಡೊಳ್‌ ಮನೆ
  ನಿನ್ನಂ ಪೂಜಿಸೆ ಹೂಗಳಂ ಬೆಳೆಯೆ ನಾನ್‌ ನೆಟ್ಟಿರ್ಪೆ ಸಸ್ಯಂಗಳಂ ।
  ನೀನೇ ಜಿಂಕೆಗಳಾಗಿ ಬಂದವುಗಳಂ ಸ್ವೀಕಾರವಂ ಮಾಡುವೆ
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+3।।


  ಹುಲ್ಲಂ ಹೇರಳವಾಗಿಸಲ್‌ ತೆರುವೆ ನಾ Chem Lawn ಗೆ dollar ಗಳಂ
  ಅದ neat ಆಗಿಸೆ ಕಾಸ ಕೊಟ್ಟು ತರುವೆನ್‌ Exxon ಇನಿಂ gas ಅನು ।
  ಹುಲ್ಲಂ ಕತ್ತರಿಸಲ್ಕೆ ನಾ ಹೆಣಗುವೆನ್‌ lawn mower ಅಂ ತಳ್ಳುತಲ್‌
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ! ರಂಗೇಶನೆ ।।-4।।


  ನೀ ಕೊಟ್ಟಿಟ್ಟಿಹ dollar ಅನ್ನೆ ಕೊಡುವೆನ್‌ Chem Lawn ಇನಾತಂಗೆ ನಾನ್‌
  ನೀ ಕೊಟ್ಟಿಟ್ಟಿಹ dollar ಇಂದ ತರುವೆನ್‌ Exxon ಇನಿಂ gas ಅನು ।
  ದೇಹಾರೋಗ್ಯವ ಹೆಚ್ಚಿಸಲ್‌ ನಡೆಯುವೆನ್‌ lawn mower ಅಂ ತಳ್ಳುತಲ್‌
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+4।।


  Autumn ನಲ್ಲೊಣಗಿದ್ದು ಬೀಳುತೆಲೆಗಳ್‌ lawn ಅನ್ನೆ ಮುಚ್ಚಿಟ್ಟಿರಲ್‌
  ಅಂತೇ ಬಿಟ್ಟರೆ lawn ಉ ಸಾಯ್ವುದಕಟಾ! ಮತ್ತೇನ ನಾ ಮಾಡಲೋ?
  ಕೈಯಾಳ್‌ blower ಅ ಪಿಡಿದು ಬೆವರುತಲವಂ ನಾನೂದುವೆನ್‌ ಕಾಡಿಗೆ
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-5।।


  Autumn ಬಂದೊಡೆ ಬಣ್ಣ ಬಣ್ಣದೆಲೆಗಳ್‌ ಕಾಡನ್ನೆ paint ಮಾಡಿರಲ್‌
  ನಿನ್ನೀ ಮಾಯೆಯ ಬಣ್ಣಿಸಲ್ಕೆ ಹರಿಯೇ! ನಾನೊಳ್ಳೆ ಕವಿಯಲ್ಲವೈ ।
  ವ್ಯಾಯಾಮಕ್ಕೊಳಿತಯ್ಯ ಬೀಳುತೆಲೆಗಳ್‌ lawn ಎಲ್ಲವಂ ಮುಚ್ಚಿರಲ್‌
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+5।।

  ಆರೆಂಟಂಗುಲ ಹಿಮವು ಬಿದ್ದು ಮನೆಯಂ drivewayಯನೂ ಮುಚ್ಚಿರಲ್‌
  ಮನೆ ಕಾರಾಗೃಹವಾಗಿ ಪೋಪುದು ಕಣಾ! car ಗಳ್‌ garage ಅಲ್ಲಿರಲ್‌ ।
  Shovel ಅಂ ಕೈಯಲಿ ಪಿಡಿದು ಬೆವರಿ ಚಳಿಯಾಳ್‌ clean ಮಾಳ್ಪೆ ನಾ drivewayಯಂ
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-6।।


  ನೀನೇ ಹೊದ್ದಿಕೆಯಂತೆ ತಂದು ಹಿಮವಂ ಹೊದಿಸಿಟ್ಟಿರಲ್‌ ಸುತ್ತಲೂ
  ಆ ಶ್ವೇತಾಂಬರದಂದ ಬಣ್ಣಿಸಲು ನಾ ಪದವೊಂದನೂ ಕಾಣೆನೈ ।
  ಆರೋಗ್ಯಕ್ಕೆರವಲ್ಲವೇನೊ ಹರಿ! ನಾ driveway shovel ಮಾಳ್ದೊಡೆ
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+6।।


  Insurance ಇಗೆ ತೆತ್ತು ತೆತ್ತು ಬರುವೆನ್‌ ಪ್ರತಿಯಾಂದು paycheck ಇನಿಂ
  Copay ಮಾಡಿಯೆ ಪೋಪೆ ಬೇನೆ ಬರುತಲ್‌ ನಾ ವೈದ್ಯನಂ ನೋಡಲು ।
  ವೈದ್ಯಂಗೆಚ್ಚೆಮೊ(HMO) ನಾಯಕನ್‌ ಕೊಡುವನೋ ಮತ್ತಿಲ್ಲವೋ ಅಪ್ಪಣೆ
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-7।।


  Insurance ಅನು ಮಾಳ್ಪ ಬುದ್ಧಿಯನು ನೀ ಲೋಕಕ್ಕೆ ಕೊಟ್ಟಿಟ್ಟಿರಲ್‌
  ನಾನಾರೀತಿ ವಿಶೇಷವೈದ್ಯಜನರಂ ಧೀಮಂತರನ್ನಿಟ್ಟಿರಲ್‌ ।
  ಬೇನೆಯು ಬಂದರು ಸರ್ವನಾಶಭಯವಂ ಬಿಟ್ಟಿದ್ದು ನಾ ಜೀವಿಪೆನ್‌
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+7।।


  Heat ಉ humidity ಕೂಡಿ ಬಂದು misery index ಉ ಜೋರಾದರೂ
  Lyme ಎಂದೆಂಬುವ ರೋಗ ಬರ್ಪ ಭಯದಿಂ ಮೈಯೆಲ್ಲವಂ ಮುಚ್ಚಿ ನಾನ್‌ ।
  ಬೆವರಿಂ ತೊಯ್ದಿಹ shirt ಅನೂ ತೆಗೆಯದೇ yardwork ಅ ಮಾಡುತ್ತಿಹೆನ್‌
  ಇಂಥಾ ಬವಣೆಯನೇಕೆ ಕೊಟ್ಟೆಯಾ ಹರೀ! ಹೇಳಯ್ಯ ರಂಗೇಶನೆ! ।।-8।।


  ಉರಿಬಿಸಿಲೊಳ್‌ ಶ್ರಮದಿಂದ yard ಇನಲಿ ನಾನ್‌ ಕಾರ್ಯಂಗಳಂ ಮಾಳ್ದವನ್‌
  A.C. ಇಂದಲಿ ತಣ್ಣಗಿರ್ಪ ಮನೆಯಾಳ್‌ ಆರಾಮದಿಂ ಕೂರುವೆನ್‌ ।
  Lemonade ಅಂ ಬೆರೆಸಿಟ್ಟು ಮಡದಿ ಕೊಡುವಳ್‌ ಕುಡಿಯೆನ್ನ್ತುಅಲ್‌ ಪ್ರೀತಿಯಿಂ
  ಇಂಥಾ ಭಾಗ್ಯವ ನೀ ಕೊಡಲ್‌ ಸಿರಿಪತೇ! ನಾ ಧನ್ಯ ರಂಗೇಶನೆ! ।।+8।।

  ಅಮೆರಿಕದಲಿ ನೆಲೆಸಿ ಬಹಳ ವರುಷಗಳನು ಕಳೆದಿಹೆನ್‌
  ಇಲ್ಲಿ ಸಿಗುವ ಬವಣೆಭಾಗ್ಯಗಳನು ಕುರಿತು ಬರೆದಿಹೆನ್‌ ।
  ಎಂಥ ಎಂಥ ದೃಷ್ಟಿಕೋಣದಿಂದ ನಾವು ನೋಳ್ಪೆವೋ
  ಅಂತೆ ಬೇವು ಬೆಲ್ಲದಂತೆ ಬವಣೆ ಭಾಗ್ಯ ಬರ್ಪವೈ ।।9।।


  ಅಮೆರಿಕಾದಲ್ಲೂ ಹೊಸ ಕಾರಿಗೆ ಭಾರಿ ಪೂಜೆ !

  Click here to go to topಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more