ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದ ಸುಬ್ಬಮ್ನೋರು

By Staff
|
Google Oneindia Kannada News
Singapurada Subbamnoru, a witty poem by Vani Aravind(ಆಚಾರವಂತರಾದ ಸುಬ್ಬಮ್ನೋರು ಅಮೆರಿಕಾಕ್ಕೆ ಬಂದಾಗಿನ ಅವರ ಅನಿಸಿಕೆಗಳನ್ನು ಒಂದು ಪದ್ಯದ ರೀತಿ ನಿಮ್ಮ ಮುಂದೆ ಇಟ್ಟಿದ್ದೇನೆ. ಇದರಲ್ಲಿ ತಪ್ಪೇನಾದರೂ ಇದ್ದಲ್ಲಿ ಅದಕ್ಕೆ ಹೊಣೆ ಸುಬ್ಬಮ್ಮನವರೇ!)

ಅಮೆರಿಕಾಕ್ಕೆ ಬಂದ್ರು
ಇಲ್ಲಿನ್‌ ಬೆಡ್ಗು ಬಿನ್ನಾಣ್ದಿಂದ ಬೆರಗಾಗ್‌ ಹೋಗಿ ನಿಂದ್ರು

ಸುಬ್ಬಮ್ನೋರು :

ಏರೋಪ್ಲೇನಿನ್‌ ಪಯಣ ತುಂಬ ಚೆನ್ನು ಅನ್ಕೊಂಡ್‌ ಬಂದೆ
ಹಾಗೆ ಹೀಗೆ ಜರುಗೋಕ್ಕಿಲ್ಲ ಜಾಗ ಬಲ್‌ ಕಿಷ್ಕಿಂದೆ

ಎಲ್ಲೆಲ್‌ ನೋಡು ಪ್ಯಾಂಟು ಷರ್ಟು ಹಾಕ್ಕೊಂಡಿರೋ ನೀರೇರು
ಇನ್ಮೇಲ್‌ ನನ್‌ ವೈನಾಗಿರೋ ಸೀರೇನ ಕೇಳೊವ್ರ್‌ ಯಾರು

ಯಾವಾಗ್ಲು ಏನ್ರಿ ಊಟ ಅಂದ್ರೆ ಮಾಂಸ, ಬ್ರೆಡ್ಡು, ಬನ್ನು
ಏನೇ ಹೇಳಿ ನಮ್ಮೂರಿನ್‌ ದೋಸೆ, ರೊಟ್ಟಿ, ಇಡ್ಲೀನೆ ಚೆನ್ನು

ಎಲ್ಲಾ ಕಡೆ ಬಾಟ್ಲಿ , ಬೀರು, ಬಾರು ಅಂತಾಯ್ತು ಬೋರು
ಅದಿಕ್ಕೆ ನಾನು ಎಲ್ಲೆ ಹೋಗ್ಲಿ ಕೇಳೋದು ನೋ ಐಸ್‌ ವಾಟರ್ರು

ಎಲ್ಲೆಲ್ಲೂ ಗಯ್ಸು , ಪ್ಲೀಸು, ರಿಡಿಕ್ಯುಲಸ್ಸು, ಸಾರಿ, ಎಕ್ಸ್‌ಕ್ಯೂಜ್ಮಿ
ಇಲ್ಬಂದ್ಮೇಲ್‌ ನಂಗ್‌ ಬರ್ತಿದ್‌ ಸ್ವಲ್ಪ ಇಂಗ್ಲೀಷೂ ಮರ್ತ್‌ ಹೋಯ್ತು ಸ್ವಾಮಿ

ಅಕ್ಕಿ, ಬೇಳೆ ಸೇಲ್ನಲ್‌ ಇದ್‌ ಹಂಗ್‌ ಇರುತ್ತೆ ಡೈವೊರ್ಸು, ಮ್ಯಾರೇಜು
ನಮ್ಮಲ್‌ ಬಹಳ ಕಟ್‌ ನಿಟ್ಟಪ್ಪ ಒಳ್ಳೆ ರೀತಿ ರಿವಾಜು

ಇಲ್ಲಿ ಕೆಮ್ಮು, ನೆಗ್ಡಿ, ಶೀತಕ್ಕೂನು ಬೇಕು ಡಾಕಟ್ರ ಅಪಾಯಿಂಟ್ಮೆಂಟು
ನಮ್ಮಲ್‌ ಹಾಗೆ ನುಗ್ಗಿದ್ರೂನೂ ಸಿಕ್ಬಿಡುತ್ತೆ ಟ್ರೀಟ್ಮೆಂಟು

ರಾತ್ರಿಯೆಲ್ಲಾ ಅಫೀಸ್ನೋರ್ದೆ ಯೋಚ್ನೆ ಮಾಡ್ತಾನ್‌ ನನ್‌ ಮಗ
ಬೆಳಗಾಗೆದ್ರೆ ಆಫೀಸರ್ಸು ಹೇಳ್ಬಿಟ್ಟಾರು ಖಾಲಿ ಮಾಡು ಜಾಗ

ಇಷ್ಟರ ಮೇಲೆ ಗಂಡನ್‌ ಮಾತು ಕೇಳ್ದೇ ಇರೋ ಸೊಸೆ
ಎಷ್ಟಿದ್ರೇನು ಮೋರೆ ಮೇಲೆ ಇವನ್ಗೆ ದೊಡ್ಡ ಮೀಸೆ

ಇಷ್ಟಿದ್ರೂನೂ ವಾಷಿಂಗ್ಟನ್ನು, ನ್ಯೂಯಾರ್ಕು, ವೇಗಸ್ಸು
ಕನಸಿನ್‌ ಲೋಕ ಕಂಡ್‌ ಹಂಗಾಯ್ತು ಜಾಗಗಳು ಬಲ್‌ ಸೊಗ್ಸು

ಬಲ್‌ ಚಂದ ಇಲ್ಲಿನ್‌ ಟ್ರಾಫಿಕ್‌ ಸೆನ್ಸು , ಕ್ಲಿನ್ಲೀನೆಸ್ಸು , ಸಂಡಾಸು
ಆದ್ರೂ ನಂಗೆ ಎಳಿಯುತ್ತೆ ಭಾರತದ್‌ ಕಡೆಗೇ ಮನಸು

ಒಳ್ಳೇದು ಕೆಟ್ಟದ್ದು ಇದ್ರೇನೆ ಯಾವತ್ತು ಚಂದ ಬೇವು ಬೆಲ್ದಂಗೆ
ಕೆಟ್ಟದ್ದ ಬಿಟ್ಟು ಒಳ್ಳೇದ ತೊಗೊಂಡು ಹೊರಡ್ತೀನಿ ನಾ ನನ್‌ ಮನೆಗೆ

ಈ ಕವಿತೆ ಬಗೆಗೆ ನಿಮ್ಮ ಅನ್ನಿಸಿಕೆಗಳನ್ನು ಬರೆಯಿರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X