• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಭದ್ರರು

By Staff
|
  • ಸುಪ್ತದೀಪ್ತಿ
  • Suptha deepthiಸಿಡಿವ ಗುಂಡು, ಬಾಣ-ಬಿರುಸು, ಕ್ರಾಂತಿ ಕೊಡೆಯ ಅಡಿಯ ದಿರಿಸು;

    ಉರಿವ ರವಿಯು, ಸುರಿವ ಮರಳು, ಬಿರಿವ ಭುವಿಯ ನಡುವೆ ಕೊರಳು.

    ಬಣ್ಣ ಬಳಿದ ಸಣ್ಣ ನೆವನ, ಎಣ್ಣೆ ತರುವ ಹಣದಿ ಗಮನ,

    ಮಾನವತೆಯ ಮಾನಹರಣ, ಮುಗ್ಧತೆಯದೊ ಜೀವಹರಣ.

    ಕುಹಕಿಗಳದೆ ರಾಜ್ಯಭಾರ, ಸಹನೆಯಿಲ್ಲಿ ಕೆಲಸಗಾರ,

    ರೋಷವನಿಲ, ದ್ವೇಷವನಲ, ಕಾಲಕೂಟದಂತೆ ಸಲಿಲ.

    ಸ್ವಾತಂತ್ರ್ಯದ ಹೆಸರಿನಲ್ಲಿ ಹೊಸದೆ ಚರಿತೆ ಬರೆದರಿಲ್ಲಿ ,

    ಜೀವ-ಜಾತ್ರೆ ಸೇರಿತಲ್ಲಿ ಯಮನೂರಿನ ಬಾಗಿಲಲ್ಲಿ .

    ಯಾರ ತಲೆಗೆ ಯಾರು ದಂಡ, ಕಳುಹಿಸಿದನು ಬಿಳಿ ಪ್ರಚಂಡ,

    ಕೆರಳದಿಹನೆ ಕಂದು ಮೊಂಡ, ತಲೆಗಳುರುಳಿ ಮುಂಡ ಖಂಡ.

    ಕತ್ತಲಲ್ಲಿ ಬೇಟೆಯಾಡಿ, ಹಗಲಿನಲ್ಲಿ ಆಟ ಹೂಡಿ,

    ‘ನಿಮ್ಮ ಸೇವೆಗಾಗಿ ಬಂದೆ’ ಎಂದ, ನಿಜದ ತೆರೆಯ ಹಿಂದೆ.

    ಕ್ಷುದ್ರರಿವರು, ಮನುಜಕುಲಕೆ ಅಪಮಾನವ ತರುವರಿವರು,

    ತಮ್ಮ ಸ್ವಾರ್ಥಕಾಗಿ ಜನರ ಪ್ರಾಣ ಹೀರಿ ಬೆಳೆವಸುರರು.

    ನಿನ್ನೆ-ಇಂದು-ನಾಳೆಗಳಲಿ ಯಾವನಿಹನು ಶಾಶ್ವತ?

    ಅರ್ಥಕಾಗಿ ಕಳೆದುಕೊಂಡ ಬಾಳಿನರ್ಥ, ಜನಹಿತ.

    ಯುಗದ ಚರಿತೆ ಬರೆವ ಬಯಕೆ, ಸರ್ವನಾಶಕೊಂದು ಅರಿಕೆ,

    ಕೊಡವಿಕೊಂಡ ಸನ್ನಡತೆ, ಅಳಿದು ಹೋಯ್ತು ಎಲ್ಲ ಘನತೆ.

    ತಂದೆಯಾಂದು ಆಸೆಗಾಗಿ ಯಮನೆ ಆದ ಮಗನು ಉಂಟೆ ?

    ವೀರಭದ್ರನಾಟದಲ್ಲಿ ಜಗಕೆ ಶಾಂತಿಯೆಂಬುದುಂಟೆ ?

    Click here to go to topಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more