ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಹಣತೆ

By Staff
|
Google Oneindia Kannada News
  • ಎಚ್‌. ಆರ್‌. ಸತೀಶ್‌ ಕುಮಾರ್‌, Email : [email protected]
ಈ ಮಣ್ಣಿನೊಳಗೆ ಅದೇನು ಅಡಗಿದೆಯೋ ?
ಮರೆಯುವ, ಮುರಿಯುವ ಗುಣ !
ತೊರೆಯುವ, ಮನಬಿಚ್ಚಿ ಹರಿಯುವ ಗುಣ ?

ಈ ಮಣ್ಣಿನ ಗುಣ ಒಳಗೊಂಡು ಬೆಳೆದ ಮಾತ್ರಕ್ಕೆ
ಇಲ್ಲೇ ನೆಲೆ ನಿಂತಿರು ಎಂದರೆ ಹೇಗೆ ?
ಆಡಿದ್ದೇವೆಯೇ, ಓಡಿದ್ದೇವೆಯೇ ?
ಕೈ-ಕಾಲು, ಅಂಗಿ-ಚಡ್ಡಿಗಳಿಗೆ
ಈ ಮಣ್ಣು ಹತ್ತಲೇ ಇಲ್ಲ ,
ಅತ್ತ ಮನ ಮುತ್ತಲೂ ಇಲ್ಲ !

ಕೈಕೆಸರಾಗಲು ಮಣ್ಣಿನೊಡಗೂಡದಿರೆ ಹೇಗೆ ?
ಆಂಗಳದಲಿ ಬೆಳೆಸಿದರೆ ಸಾಕೆ ಹೂಗಿಡ ?
ನೋಡಿದ್ದೇವೆಯೇ ? ನಮ್ಮ ಮಕ್ಕಳು-ಮರಿ
ಮಣ್ಣಿನೊಡನಾಡಿದ್ದನ್ನು , ನಮ್ಮ ಹಿರಿಯರು
ಈ ಮಣ್ಣಿನೊಳಗೂಡಿದ್ದನ್ನು ?

ಈ ಮಣ್ಣ ನೋಡುತ್ತ-ನುಲಿಯುತ್ತ
ಭೂತಳದ ಮತ್ತೊಂದೆಡೆ ಕಂಪಿಸಲು
ಇಲ್ಲಿ ಕೊರಳು ಕೊಂಕಿಸಿ, ಕರಳು ಕಂಪಿಸಿ
ನೊಂದು ನರಳಿ ನಿಡುಸುಯ್ದಿದ್ದೇವೆ
ಇಲ್ಲಿ ತುಳಿವ ಮಣ್ಣಿಗೇನೂ ಇಲ್ಲ
ಅದಕಂಟಿ ನಿಂತವರೆಲ್ಲ ಸ್ಥಿತಪ್ರಜ್ಞರೇ!

ಹಲವು ಸರಕಿನ ನೊಗವ ಹೊತ್ತು
ಗಟ್ಟಿ ನೆಲವ ಹೂಡುತಿಹೆ, ಹಾಡುತಿಹೆ
ಆಗಾಗ ಕಂಪದ ಭೂಮಿಯೋ ಎನಿಸಿ
ಇಣುಕಿ-ತಿಣುಕಿ ನೋಡುತಿಹೆ
ನಮ್ಮದಲ್ಲದ ಕೊನೆಯಿರದ
ನೆಲವಾದರೇನು, ಮುಗಿಲಾದರೇನು?

ಈ ಮಣ್ಣ ಕಣ ಅದಕಂಟಿದ ಗುಣ
ಕೈ-ಕಾಲು ತಲೆಗೆ ಬಂದರೂ ಎದೆಗೆ ಬಾರದು
ಈ ನೆಲ ಅದರ ಬಿರುಸು
ಸಪ್ತ ಸಾಗರ ದಾಟಿದವನೆಂದೂ ಕರುಣೆ ತೋರದು
ಆದರಿಲ್ಲಿ ಮಣ್ಣಿಗಂಟಿದವುಗಳೆಲ್ಲ ಸ್ವಸ್ಥ
ಇವುಗಳಿಗೆ ಸಿಗದ ಮನವೆಂದೂ ವ್ಯಸ್ತ
ನಂಬಿಕೆಯ ನಗಾರಿ ಬಾರಿಸೆ ಕೈಗಳು ಕೇಳವು
ಮಣ್ಣಿಗಂಟಿದ ಕಾಲ್ಗಳೂ ಕೇಳವು, ಕೀಳವು!

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಸಾಲು ಸಾಲು ಹಣತೆ

ಪ್ರಣಯ ದೀಪ

  • ನಿರಂತರ

  • ಮುಖಪುಟ / ಸಾಹಿತ್ಯ ಸೊಗಡು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X