ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತು

By Staff
|
Google Oneindia Kannada News
  • ಡಾ. ಕುಸುಮ ಭಟ್‌,
    ಪ್ಲಸಂಟಹಿಲ್ಲ್‌, ಕ್ಯಾಲಿಫೋರ್ನಿಯ
    E-mail : [email protected]
Dr. Kusuma Bhatಅತ್ತು ಕರೆದು ಮುನಿಸಿಕೊಂಡು, ಅಮ್ಮ ನಕ್ಕು ಅಪ್ಪಿಹಿಡಿದು
ಕೆನ್ನೆ ಒಡ್ಡಿ ಒಪ್ಪ ಬೇಡಿ ಹರಸಿ ಕೊಟ್ಟ ವಾತ್ಸಲ್ಯದ

ತೆರೆದ ಕಣ್ಣು ಒಡೆದ ಬಾಯಿ ಹೃದಯ ತುಂಬಿ ದೃಷ್ಟಿ ತೆಗೆದು
ಕಣ್ಣ ವರೆಸಿ ಆಸೆ ಹೊರಿಸಿ ಅಜ್ಜಿ ಕೊಟ್ಟ ವಜನೆ

ಕೆನ್ನೆ ಒತ್ತಿ ಜೋಲಿಮಾಡಿ ಜೊಲ್ಲು ಸುರಿಸಿ ಅಮ್ಮ ಬೇಡಿ
ಬೊಕ್ಕಬಾಯ ಹಿಗ್ಗಿ ಹರಿಸಿ ಮುಗ್ಧ ಮನದ ಚೊಕ್ಕ

ಅಬ್ಬು ಮಾಡಿ ಕಣ್ಣೀರ್‌ ಹರಿಸಿ ಅಯ್ಯಾ ಪಾಪ ಕರುಣೆ ಹೊದಿಸಿ
ಕೆನ್ನೆ ಒರೆಸಿ ಮಗುವ ಹರಸಿ ಹಿಗ್ಗಿ ಹಿಗ್ಗಿ ಸೀರೆಗೊರಿಸಿ ಒದ್ದೆಯಾದ ನೀರ

ಎತ್ತಿ ಬೆಳೆಸಿ ಮತ್ತೆ ಕಲಿಸಿ ದೂರ ಕಳಿಸಿ ಹೆಮ್ಮೆ ಉಳಿಸಿ
ಧನ್ಯತೆಯಲಿ ವಂಶ ಕುಡಿಯ ಹಣೆಗೆ ಒತ್ತಿ ಅಪ್ಪಿ ಕೊಟ್ಟ ಅಪ್ಪ

ದೂರದಿಂದ ಕೈಯಬೀಸಿ ಕೈಯ್ಯಲಿಟ್ಟು ಹಾರಿಸಿಬಿಟ್ಟು ದಾರಿನೋಡಿ ಹರಸಿ ಬಿಟ್ಟು
ಹೃದಯ ತುಂಬಿ ಬೀಳ್ಕೊಟ್ಟು ಕಣ್ಣಿನಿಂದ ಜಾರಿ ಹರಿವ ಬಿಸಿ

ಕಣ್ಣಮುಚ್ಚಿ ತುಟಿಯ ಮುಟ್ಟಿ ಸುತ್ತುಗಟ್ಟಿ ಎದೆಗೆ ಒತ್ತಿ
ಮಿಂಚುಹರಿಸಿ ಪ್ರೇಮಬೆರೆಸಿ ನೀನೆ ನನ್ನ ಭಾಗ್ಯವೆಂದ ರಾಶಿ ರಾಶಿ ಹೊಳೆವ

ಬಣ್ಣವಿಲ್ಲ ಆಕಾರವಿಲ್ಲ ಬೆಲೆಯಕಟ್ಟುವರಾರು ಇಲ್ಲ
ಯುಗಯುಗಗಳು ಕಳೆದರಿನ್ನು ಮತ್ತೆ ಉರುಳಿ ಮರಳಿ ಸುರುಳಿ ಸುಳಿವ ಮತ್ತು

ನೀನೇಕೆ ಜೀವಿಸುವೆ ಪಾರ್ಥೇನಿಯುಂ ಆಗಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X