ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಸ್ಥಳ

By Staff
|
Google Oneindia Kannada News
ಬಣ್ಣ ಬಣ್ಣದ ಲೋಕ -
ರಂಗು ದೀಪದ ನಾಕ -
ಅದರಾಚೆ ಜೀವನದಿ ಲಾಸ್ಯವಿಲ್ಲ ;
ಪಾತ್ರದೊಳಗಿನ ಪಾಕ -
ಅಭಿನಯದ ರಸತೂಕ -
ಅವಗಣನೆಗೆದುರಾಗಿ ಮೋದವಿಲ್ಲ.

ಅಜ್ಜ-ಅಪ್ಪನ ವೃತ್ತಿ -
ಉಸಿರೆಳೆವ ಉತ್ಪತ್ತಿ -
ಅಲೆಮಾರಿ ಬದುಕಿನಲಿ ಬೇರು ಇಲ್ಲ;
ಸಂಸ್ಕೃತಿಯ ಮುಖವೆತ್ತಿ -
ಜೀವ-ಭಾವವ ಬಿತ್ತಿ -
ಅವತಾರ ಮುಗಿದೊಡನೆ ಹೆಸರು ಇಲ್ಲ.

ಕಿರುಗೆಜ್ಜೆ ಝೇಂಕಾರ -
ಚಕ್ರತಾಳದ ಭಾರ -
ಭಾಗವತಿಕೆಯ ಮೋಡಿ, ರಾಗ ಕೋಡಿ;
ದೇವಳದ ಅಂಗಳದಿ -
ಬಯಲಿನಲಿ ಮಂಟಪದಿ -
ಭಾಷೆ ಮೀರಿದ ಭಾವ, ಅನುಭಾವ ನಾಡಿ.

ಹುಬ್ಬು-ಕಣ್ಣಿನ ಕುಣಿತ -
ಮೋಜಿನುಡುಗೆಯ ಸೆಳೆತ -
ತಾಳ-ಲಯ-ಗತಿಯಲ್ಲಿ ವಾಲಿ, ಕುಂತಿ;
ಚೆಂಡೆಯೇಟಿಗೆ ಭರತ -
ಸೂರ್ಯನುದಯಕೆ ಇಳಿತ -
ಬಣ್ಣ-ಬೆಳಕಿನ ಆಟ, ಹರಿಸಿ ಭ್ರಾಂತಿ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X