ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜವನು ನಮಗೀವ ವೀರವೃಂದದ ಬೀಡು

By Staff
|
Google Oneindia Kannada News


ರಾಜ್ಯೋತ್ಸವದ ಆಸುಪಾಸಿನಲ್ಲಿ ಕನ್ನಡ ಗೀತೆಗಳು ಧೂಳು ಕೊಡವಿಕೊಂಡು ನಳನಳಿಸತೊಡಗುತ್ತವೆ. ನಿತ್ಯೋತ್ಸವದ ಭೋರ್ಗರೆತ, ವಿಶ್ವ ವಿನೂತನದ ಮಾಧುರ್ಯ, ಜಯ ಕರ್ನಾಟಕ ಮಾತೆಯ ಜಯಘೋಷ ಎಲ್ಲೆಡೆಯೂ ಮಾರ್ದನಿಸುತ್ತದೆ. ಈ ನಿತ್ಯ ವಿನೂತನ ಕನ್ನಡಗೀತೆಗಳ ಅಲೆಯಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಪ್ರತಿವರ್ಷವೂ ಕೇಳಿಸುತ್ತದೆ. ಹಾಡು ಕೇಳಿದಾಗ ಒಂಥರಾ ಖುಷಿ, ಬೆನ್ನಲ್ಲೇ ಮಡುಗಟ್ಟುವ ವಿಷಾದ. ರಾಜ್ಯೋತ್ಸವ ಹತ್ತಿರಾಗುತ್ತಿರುವ ಸಂದರ್ಭದಲ್ಲಿ ಈ ಕನ್ನಡ ಗೀತೆಯ ಗುನುಗಿಕೊಳ್ಳಿ ; ಸಾಲುಗಳ ಹಿಂದಿನ ಧ್ವನಿಯ ಎದೆಯಲ್ಲಿ ಮತ್ತೆ ಮತ್ತೆ ಮಥಿಸಿಕೊಳ್ಳಿ.Cheluva Kannada Naadu

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

  • ಹುಯಿಲುಗೋಳ ನಾರಾಯಣರಾವ್‌
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
.

ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X