ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಿಯೋಣು ಬಾರ ವಿಚಿತ್ರಾನ್ನವ ಸವಿಯೋಣು ಬಾರ

By Staff
|
Google Oneindia Kannada News

ಐವತ್ತು ಮಾತ್ರವಲ್ಲ , ಸೆಂಚುರಿ ಹೊಡಿಯಲಿ ಎನ್ನುವ ಹಾರೈಕೆಯಾಂದಿಗೆ- ವಿಚಿತ್ರಾನ್ನ 25 ಕಂತುಗಳನ್ನು ಪೂರೈಸಿದ ಸಂದರ್ಭದಲ್ಲೊಂದು ಅಭಿಮಾನದ ಗೀತೆ

  • ಮುರಳೀಧರ ಎನ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯಾ.
Vichitranna Tuesday Column on your favorite web portalದುಬಾರಿಯಲ್ಲವಿದು, ಬರೇ ‘ಒಂದಾಣೆ’
‘ನಾಲ್ಕಕ್ಷರ’ದ ಅಂಕಣದಲಿ ಅದೇನು ಮಾಯೆಯೋ, ನಾ ಕಾಣೆ
‘ನಾಯಿ ಮರಿ’ ಇತ್ಯಾದಿ ಕನ್ನಡ ಪದ್ಯಗಳ ಮರುಪರಿಚಯ ಮಾಡುತ
‘ಸುದ್ದಿಗೆ ಗುದ್ದು’ ಕೊಡುತ ನಮಗೆಲ್ಲ ಮುದ ನೀಡುತ
‘ಚಿತ್ರಗೀತೆಯ ಒಗ್ಗರಣೆ’ ಹಾಕಿದ ವಿಚಿತ್ರಾನ್ನವಿದು
ಹಾಸ್ಯ ಚಟಾಕಿ ‘ಸಿಡಿ’ಸುತ
ನಾಕಾಣೆ ಎಂಟಾಣೆ.. ನನ್ನ ದೇವರಾಣೆ’ ಎನುತ
‘ಅವಳಿ ನಗರ’ಗಳಲ್ಲಷ್ಟೇ ಅಲ್ಲ ದೇಶ ವಿದೇಶದಲ್ಲೂ ಪ್ರಚಲಿತ
ಒಮ್ಮೆ ತಿಂದ‘ರೆ’ ಮತ್ತೊಮ್ಮೆ ತಿನ್ನಬೇಕೆನಿಸುವ
ವಿಚಿತ್ರಾನ್ನ ‘ಸಂಗೀತ’ದಷ್ಟೇ ಸುಮಧುರ !!
ತಿಂದರೆ ‘ಅಡಿಯಿಂದ ಮುಡಿ’ವರೆಗೆ ರೋಮಾಂಚನ
ನಮ್ಮ ‘ಪನ್‌’ಡಿತ ಜೋಷಿಯವರ ‘ನಳಪಾಕ’ವಿದು
ವಿಚಿತ್ರಾನ್ನದ ಜೊತೆ ವಿಟ್‌ಪನ್‌ bananaದ ‘ರಸಾಯನ’
ಇಷ್ಟೆಲ್ಲ ಇದ್ದ ಮೇಲೆ ಮತ್ತೇಕೆ ತಡ ‘?’ ಸವಿಯಲು ಬೇಗ ಬನ್ನಿ
ವಿಚಿತ್ರಾನ್ನ ‘ಅಕ್ಷರ ಬಳ್ಳಿ’ಯಲ್ಲಿ ಮಾಗಿದ ಫಲ
ತಿಂದವರೆಲ್ಲರು ‘ವನ್ಸ್‌ ಮೋರ್‌ ವನ್ಸ್‌ ಮೋರ್‌’ ಎಂದರು
‘ತಕ್ಕಡಿ’ಯಲ್ಲಿ ತೂಗಿ ಹಾಕಿದ ಸಾಮಗ್ರಿ
‘ಒಂದು ಎರಡು ಬಾಳೆಲೆ ಹರಡು’ ಮೂರು ನಾಕು ವಿಚಿತ್ರಾನ್ನ ಹಾಕು
‘ಪಾಪ- ಪಾಂಡು’ನಿಂದ ಕಡು ಜಾಣರೆಲ್ಲರಿಗೂ ಪ್ರಿಯ
ತಿಂದವರೆಲ್ಲ ಜೋಶಿ ‘ಕ್ರಿಕೆಟ್‌’ ಗೂಗ್ಲಿಗೆ ಕ್ಲೀನ್‌ ಬೋಲ್ಡ್‌
ಒಟ್ಟಿನಲ್ಲಿ ವಿಚಿತ್ರಾನ್ನ- ಜೋಶಿ- ಓದುಗರು ‘ಮೇಡ್‌ ಫಾರ್‌ ಈಚ್‌ ಅದರ್‌
‘ಪದಬಂಡಿ’ಯಲಿ ನಮಗೆಲ್ಲರಿಗೂ ಕನ್ನಡ ಲೋಕ ಪರ್ಯಟನೆ
‘ಬೇರ್‌’ ದಿಸ್‌ ಇನ್‌ ಯುವರ್‌ ಮೈಂಡ್‌, ವಿಚಿತ್ರಾನ್ನ
ಒಂದೆಡೆ ‘ಕತ್ತಿಯಲಗಿ’ನಷ್ಟು ಮೊನಚು,
ಇನ್ನೊಂದೆಡೆ ‘ಫೂಲ್‌’ನಷ್ಟು ಮೃದು !

ಇಂಥ ಕವಿತೆಯನ್ನು ನೀವೂ ಬರೆಯುವಿರಾ ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X