• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಮಳೆ ಹುಯ್ಯುತಿದೆ.. ಹನಿ ಹನಿ ಹನಿ...

By Staff
|
  • ಚಂದ್ರಮ,ಜ್ಯೂರಿಚ್‌, ಸ್ವಿಟ್ಝರ್‌ಲ್ಯಾಂಡ್‌

E-mail : Chandrashekhar.Madabhavi@swisslife.ch

Madabhavi Chandrashekharಬದಲಾದ ಕಾಲ

ಆಗ

ಮರುಳಾಗಿದ್ದೆ ಇವಳ

ಮೈಮಾಟಕ್ಕೆ

ಬೆರಗಾಗಿದ್ದೆ ಇವಳ

ಕಣ್ಣೋಟಕ್ಕೆ

ಈಗ

ಸಾಕಾಗಿದೆ ಇವಳ

ಕಾಟಕ್ಕೆ

*

ಕವಿ

ಅವನೊಬ್ಬ ಜಿಪುಣ

ಖರ್ಚು ಮಾಡುವುದಿಲ್ಲ

ಒಂದು ಪೈಸೆ ಹಣ

ಈಗ ಕವಿಯಾಗಿದ್ದಾನೆ

ಪದ ಬಳಸುವುದರಲ್ಲಿಯೂ

ಜಿಪುಣ

ಬರೆಯುತ್ತಾನೆ ಬರೀ

ಹನಿಗವನ

*

ಕವಯತ್ರಿ

ಅವಳಾಗ ತುಂಬಾ ಸುಂದರಿ

ಅದಕ್ಕೆ ಇತ್ತು ಹುಡುಗರ ಮೈತ್ರಿ

ಓಡುತ್ತಾರೀಗ ಕಂಡಂತೆ ವೈರಿ

ಆದಾಗಿನಿಂದ ಇವಳು ಕವಯತ್ರಿ

*

ಮೌಲ್ಯ

ಗಂಡಸರು ಕಳೆದುಕೊಂಡಿದ್ದಾರೆ

ತಮ್ಮ ಮೌಲ್ಯ

ಆದಾಗಿನಿಂದ ಮದ್ಯ, ಮನಿ, ಮಾನಿನಿ

ಇವರ ದೌರ್ಬಲ್ಯ

*

ಪಥ್ಯ

ಹೊಸದಾಗಿ ಮದುವೆಯಾದವರೆ

ಚೆನ್ನಾಗಿರಲಿ ನಿಮ್ಮ ದಾಂಪತ್ಯ

ಆದರೆ ತಿಳಿದಿರಲಿ ಒಂದು ಸತ್ಯ

ಆಷಾಢದಲ್ಲಿ ದೂರವಿರಬೇಕು ನಿತ್ಯ

ಇದು ಹಿರಿಯರು ಮಾಡಿರುವ ಪಥ್ಯ

*

ಕೆಲಸ

ಹೊಸದಾಗಿ ಮದುವೆಯಾದಾಗ

ಎಲ್ಲ ಕೆಲಸ ಮಾಡುತ್ತಿದ್ದಳು ಮಡದಿ

ಸ್ವಲ್ಪ ದಿನಗಳಾದ ಮೇಲೆ

ಕೆಲಸ ಮಾಡುವುದೀಗ ನನ್ನ ಸರದಿ

ಯಾರಿಗೆ ಒಪ್ಪಿಸಲಿ ಈ ವರದಿ ?

*

ಸಲಹೆ

ಡಿಗ್ರಿಗಳನ್ನು ಪಡೆದಿದ್ದರೂ

ಸಿಗಲಿಲ್ಲ ನೌಕರಿ, ಹಣ

ಕಲಿತಿದ್ದೇನೀಗ ಮಾಡಲು ಭಾಷಣ

ರಾಜಕೀಯದವರು ಕರೆಯುತ್ತಿದ್ದಾರೀಗ

ಸೇರಲು ತಮ್ಮ ಬಣ

*

ಲೀಲೆ

ಹೆಣ್ಣು ಮದುವೆಗೆ

ಮುಂಚೆ ಶಿಲಾಬಾಲೆ

ಮದುವೆಯಾದ ಮೇಲೆ

ಮೀರುತ್ತದೆ ದೇಹದ ಎಲ್ಲೆ

ಪುರುಷರಿಗೆ ಇದಿನ್ನೂ

ಅರ್ಥವಾಗದ ಲೀಲೆ !

*

ಸತ್ಯ

ಸತ್ಯ ಹೇಳುತ್ತಾರಂತೆ

ಎಲ್ಲರೂ ಕುಡಿದ ಮತ್ತಿನಲ್ಲಿ

ಅದಕ್ಕೇ ಅಷ್ಟೊಂದು

ಜಗಳಗಳಾಗುತ್ತವೆ ಬಾರಿನಲ್ಲಿ

*

ಅಧರ

ನಾನ್ಯಾವಾಗಲೂ

ನನ್ನವಳಿಗೆ ಆಧಾರ

ಅವಳ ಹತ್ತಿರ ಇದೆ ಅಧರ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಹಳೆಯದಾಗದ ಹನಿ

ಝಂ ಝಂ ಹನಿ : ಕವಿತೆಕೊಡದಿ ಹತ್ತು ಹನಿ !

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more