ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರಋಣಿ

By Staff
|
Google Oneindia Kannada News
  • ಜ್ಯೋತಿ ಶೇಖರ್‌
    ಮಿಲ್ಪಿಟಸ್‌, ಕ್ಯಾಲಿಫೋರ್ನಿಯಾ
    E-mail : [email protected]
Jyothi Shekarಈ ತಾಯಿಯ ದಿನದಂದು,
ನನ್ನ ನಿದ್ರಿಸಿದ ಪುಟ್ಟ ತನುವಿಗೆ ಆಶ್ರಯ ನೀಡಿದ ಮಡಿಲೆ,
ನಾನು ಅತ್ತಾಗ ಅನುಕಂಪದಿಂದ ಮಿಡಿದ ಹೃದಯವೆ,
ನಾನು ಕೋರಿದ್ದನ್ನು ಹರಸಿದ ಉದಾರ ಜೀವವೆ,
ನನ್ನೀ ಆಕಾರವನ್ನು ರೂಪಿಸಿದ ಸದಾಚಾರದ ಕೈಗಳೆ,
ನನ್ನಿ ಬದುಕಿಗೆ ದಾರಿ ದೀಪವಾಗಿರುವ ಮಾತೃ ಛಾಯೆಯೆ-
ನಿನಗೆ ನಾ !

ಈ ತಾಯಿಯ ದಿನದಂದು,
ತಾಯ್ತನದ ಸುಳಿವು ನೀಡಿದ ಒಡಲ ಮೊದಲ ತುಡಿತವೆ,
ತನ್ನ ಆಗಮನವನ್ನು ಘೋಷಿಸಿದ ಕಂದನ ಮೊದಲ ಕರೆಯೆ,
ಬಳಲಿದ ಮನಕ್ಕೆ ತಂಪು ನೀಡಿದ ಹಾಲುಗೆನ್ನೆಯ ಮೊದಲ ತಿಳಿನಗೆಯೆ,
ಬಾಳ ಚಾರಣಕ್ಕೆ ಸಿದ್ಧವೆಂದು ತೋರಿಸಿದ ಮೊದಲ ಕಿರುಹೆಜ್ಜೆಯೆ,
ನಾನೇ ಜನ್ಮದಾತೆಯೆಂದು ಲೋಕಕ್ಕೆ ಸಾರಿದ ಮೊದಲ ಮುತ್ತಿನ ತೊದಲ್ನುಡಿಯೆ-
ನಿನಗೆ ನಾ !

ಈ ತಾಯಿಯ ದಿನದಂದು, ಎಲ್ಲಕ್ಕೂ ಮಿಗಿಲಾಗಿ,
ಮಾತೆಯೆಂಬ ಸಚ್ಚರಿತೆಯ ಸದೃಢ ಬೇರನ್ನಿತ್ತು,
ಮಕ್ಕಳೆಂಬ ಸುಮನೋಹರ ಸುಮಗಳನ್ನಿತ್ತು,
ಬಾಳಿನ ಬನದಲ್ಲಿ ನನ್ನನ್ನಿರಿಸಿದ ಓ ದೇವನೇ-
ನಿನಗೆ ನಾ !

(ಕೃಪೆ : ಕೆಕೆಎನ್‌ಸಿ ವಾರ್ಷಿಕ ಸಂಚಿಕೆ ‘ಸ್ವರ್ಣ ಸೇತು’)

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಪೂರಕ ಓದಿಗೆ-

‘ನನ್ನ ಮಗುವಿನ ಅಮ್ಮನಾಗಿದ್ದಕ್ಕೆ ಥ್ಯಾಂಕ್ಸ್‌ , ಹನಿ’
ಅಮ್ಮನಿಗೊಂದು ಓಲೆ
ಪಿ. ಲಂಕೇಶ್‌ ಅವರ ‘ಅವ್ವ’ ಕವಿತೆ
ನನ್ನ ಅಮ್ಮ ಲೀಲಾವತಿ
ಅಮ್ಮನಿಗೊಂದು ಒಲವಿನ ಓಲೆ
ನೆನೆ ನೆನೆ ಅಮ್ಮನ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X