ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಡಗಳು

By Staff
|
Google Oneindia Kannada News
ನೀಲಿ ಆಗಸದೋಳ್‌ ಪೇರಿಸಿಟ್ಟ ಗುಡ್ಡಗಳಂತೆ
ಕಾಣುತಿಹವು ಅಲ್ಲಿಹ ಬಿಳಿ
ಗುಡ್ಡಗಳಿಗೆ ಕಪ್ಪು ಮಸಿಯ ಬಳಿದಂತೆ
ಕಾಣುತಿವೆ ಹರಡಿದ ಕರಿ

ದಿನಮಣಿ ಕಿರಣಕೆ ಹೊಳೆಯುತಿವೆ
ಮುತ್ತಿನ ಗಣಿಯಂತೆ
ಎಟಕುವಂತೆ ಕಂಡರೂ.. ಮುಟ್ಟಲೋಗೆ,
ಕೈಗೆಟುಕದಂತಿವೆ

ಬೆಟ್ಟಗಳ ಮೇಲೆ ಬೆಟ್ಟವಿಟ್ಟಂತಿದೆ
ಆ ಬೆಟ್ಟವೇ.. ಚಲಿಸುತಿರುವಂತಿದೆ
ಗಾಳಿಗೆ ತೂರಿದ ಹತ್ತಿಯಂತೆ
ಕ್ಷಣಕ್ಷಣಕೂ... ಚದುರುತಿರುವಂತಿದೆ

ಓಡುತ.. ಓಡುತ.. ಸೇರುವುದೆಲ್ಲಿಗೆ ?
ಮೇಘಗಳೋಟದಾಟದಲಿ ಗೆಲುವು ಯಾರಿಗೆ?

*

ಮಳೆ

ಗಗನವು ಗುಡುಗಿತು, ಭುವಿಯು ಅದುರಿತು
ಸಿಡಿಲು ಅಬ್ಬರಿಸಿತು, ಎದೆಯು ನಡುಗಿತು
ಮಿಂಚದು ನಕ್ಕಿತು, ಕಣ್ಣು ಕೋರೈಸಿತು

ಮೇಘಗಳೆಲ್ಲಾ ಓಡಿ ಓಡಿ ಒಂದೆಡೆ ಕೂಡಿ
ಕರಗಿ ಕರಗಿ ನೀರಾಗಿ, ಹನಿಯಾಗಿ
ಹನಿ ಹನಿ ಸೇರಿ ಭುವಿಯೆಡೆ ಹಾರಿ, ಮಳೆಯಾಗಿ
ಹುಟ್ಟಿತು ನಿನಾದ ಚಟ ಪಟ ಚಟ ಪಟ
ಮನವಾಯಿತು ಗಾಳಿಗೆ ಹಾರಿದ ಗಾಳಿಪಟ

ಎತ್ತಲೆತ್ತಲೂ ನೋಡು ಕರಿಮೋಡಗಳ ಗುಂಪು
ಕಾದು ಬೆಂದ ಭೂಮಿಗೆರೆಯಿತು ತಂಪು
ಕೇಕೆ ಹಾಕುತ ಬೀದಿಗಿಳಿಯಿತು ಚಿಣ್ಣರ ಗುಂಪು
ಸವಿಯುತ ಭುವಿಯಿಂದೆದ್ದ ಮಣ್ಣಿನ ಕಂಪು

ಕೊನೆಗೂ ಧರೆಗಿಳಿಯಿತು ಮಳೆ
ವರುಣನ ಕರುಣೆಯಿಂದ
ಭೋರೆಂದು ಸುರಿವ ಮಳೆಯ ಕಂಡು
ಜನರಿಗಾನಂದವೋ.... ಆನಂದ
ಆದರೇನು..... ಭೋರ್ಗರೆಯಲಿಲ್ಲ ನದಿಗಳು
ತುಂಬಿಕೊಳ್ಳಲಿಲ್ಲ ಜಲಾಶಯಗಳು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X