ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಹನಿ ಸೇರಿದ್ರೆ ಹಳ್ಳ...

By Staff
|
Google Oneindia Kannada News
  • ಚಂದ್ರಮ, ಜ್ಯೂರಿಚ್‌, ಸ್ವಿಟ್ಝರ್‌ಲ್ಯಾಂಡ್‌
    E-mail : [email protected]
Madabhavi Chandrashekharಆಸರೆ

ಹೆಣ್ಣು ಯಾವಾಗಲೂ
ಗಂಡಿನ ಅಸರೆಯಲ್ಲಿ
ಸರಿಯಾಗಿ ನೊಡಿಕೊಳ್ಳದಿದ್ದರೆ
ಗಂಡು ಸೆರೆಯಲ್ಲಿ
*

ಆಪಾದನೆ

ದೊರಕದ ದ್ರಾಕ್ಷಿ
ಹುಳಿ
ದೊರಕದ ಹುಡುಗಿ
ಕಳ್ಳಿ, ಮಳ್ಳಿ, ಸುಳ್ಳಿ
*

ಅಪರೂಪ

ಮದುವೆಗೆ ಮುಂಚೆ
ಚಂದಕಿಂತ ಚಂದ
ಹೆಣ್ಣಿನ ರೂಪ
ಆಮೇಲೆ ಆ ರೂಪ
ತುಂಬಾ ಅಪರೂಪ
*

ಕಿರಾಣಿ

ಹೆಣ್ಣು ಅಮೃತವರ್ಷಿಣಿ
ಹೆಣ್ಣು ಗೃಹಿಣಿ
ಹೆಣ್ಣು ನಮ್ಮನೆ ಮಹಾರಾಣಿ
ಅದಕ್ಕೆ ಗಂಡೆ ಬೇಕು
ಹೊತ್ತು ತರಲು ಕಿರಾಣಿ
*

ಅಕ್ಕರೆ

ಅತಿಥಿಗಳಿಗೆ ನಾವೆಂದರೆ
ತುಂಬಾ ಅಕ್ಕರೆ
ಅದಕ್ಕೆ ಬರುತ್ತಾರೆ
ಕೊಡದಿದ್ದರೂ ಕರೆ
*

ಉದಾಸ

ನಲ್ಲೆ
ನಿನ್ನೆದೆಯಲ್ಲೆ ನನ್ನ
ವಾಸ
ನಾನಿನ್ನ ದಾಸ
ನೀನಿಲ್ಲದಿದ್ದರೆ
ನಾ ಉದಾಸ
*

ತೊಟ್ಟು

ನಟಿಯರೆ
ಮುಚ್ಚಲಾಗುವುದಿಲ್ಲ
ಆ ತೊಟ್ಟು
ಅಷ್ಟೊಂದು ಬಿಗಿಯಾದ
ಬಟ್ಟೆ ತೊಟ್ಟು
*

ಕೋಡಿ

ಅವಳು ಬೇಡವೆಂದರೆ
ಬಿಟ್ಟು ಬಿಡಿ
ಅವಳು ಬೇಕೆನ್ನುತ್ತಾಳೆ
ತಂದು ಕೊಡಿ
ಇಲ್ಲದಿದ್ದರೆ
ಹರಿಸುತ್ತಾಳೆ ಕಣ್ಣಿರ ಕೋಡಿ
*

ಸೂಜಿಗಲ್ಲು

ಒಪ್ಪಿದೆ ಹೆಣ್ಣು
ನಿಜವಾಗಿ ಸೂಜಿಗಲ್ಲು
ಆದರೆ ಏನೂ
ತಪ್ಪು ಮಾಡಿರದ
ಗಂಡನ್ನು ಏಕೆ
ಏರಿಸುತ್ತಾರೆ ಗಲ್ಲು
*

ಬೇಸರ

ಮದುವೆಗೆ ಮುಂಚೆ
ಗಂಡು ವರ
ಸಿಗುತ್ತದೆ ಕೇಳಿದ್ದು
ಇಲ್ಲದಿದ್ದರೆ
ಮಾಡಿಕೊಳ್ಳುತ್ತಾನೆ ಬೇಸರ
ಮದುವೆಯಾದ ಮೇಲೆ
ಹೆಂಡತಿ ಮಾಡಿಕೊಳ್ಳುತ್ತಾಳೆ
ಬೇಸರ
ತಂದುಕೊಡದಿದ್ದರೆ ಸರ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಹಳೆಯದಾಗದ ಹನಿ

ಝಂ ಝಂ ಹನಿ : ಕವಿತೆಕೊಡದಿ ಹತ್ತು ಹನಿ !
ಮತ್ತೆ ಮಳೆ ಹುಯ್ಯುತಿದೆ.. ಹನಿ ಹನಿ ಹನಿ...

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X