ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೇದಿಸಿಯಾಗಿದೆ. ನೋಡಬೇಕು

By Staff
|
Google Oneindia Kannada News
Ashoka, Bangaloreಬರೆಯಲಾರನೆ ನಾನು ?! ಬರೆಯಲೇಬೇಕು.
ಲೇಖನಿ, ಅಕ್ಷರ ಇವೆಲ್ಲಾ ನಿವೇದನೆಗಾಗಿ ತಾನೆ ?
ಆಕಾಶವನ್ನೆ ಹಾಳೆಯಾಗಿಸಿ, ಹಿಮಾಲಯವನ್ನೆ
ಲೇಖನಿಯಾಗಿಸಿ, ಸಮುದ್ರವನ್ನೇ ಶಾಯಿಯಾಗಿಸಿ
ಬರೆಯಬೇಕು ಪ್ರೇಮಸಂದೇಶವನ್ನು. ಹರಡಬೇಕು
ಹ್ರದಯ ಪರಿಮಳವನ್ನು.

ಛೆ! ಹೊಳೆಯುತ್ತಿಲ್ಲ . ಇಟ್ಟ ಚುಕ್ಕಿ ಅಲ್ಲೆ ದೃಢ.
ಮುಂದೆ ಪದವಿಲ್ಲ . ಚಡಪಡಿಕೆ. ನಿಟ್ಟುಸಿರು. ಇತ್ಯಾದಿ.
ಏಯ್‌! ಪ್ರೀತಿ ನೀನಿರಬಾರದಿತ್ತು . ಇದ್ದರೆ ತಿಳಿ
ಯುವಂತಿರಬೇಕು.

ಮಧ್ಯೆ ಚಂದ್ರನಿದ್ದಾನೆ ಭುವಿ-ಬಾನಿಗೆ ನಡು
ಧೂತನಾಗಿ. ಜಲವಿದೆ, ಬಲವಿದೆ, ಹಸಿರು
ಹೊನ್ನಿದೆ. ಹೃದಯದ ತುಂಬ ಕನಸಿದೆ.
ಛೆ! ತೆೇಚುತ್ತಿಲ್ಲ. ಬರೀ ಚುಕ್ಕೆಗಳೇ
ಹಾಳೆಯ ತುಂಬೆಲ್ಲಾ.

ಆಶ್ಚರ್ಯ!! ಹೊಳೆಯುತ್ತಿವೆ ನನ್ನ ಚುಕ್ಕಿಗಳು
ದೂರ ದೂರದಿ ಹೊಳೆಯುವ ಚುಕ್ಕಿಗಳು.
ಮೀನ-ಮೇಷವಾಯಿತು. ಸಪ್ತಋಷಿ ಮಂಡಲವಾಯಿತು.
ಯೋಚಿಸಿ ಇಟ್ಟ ಬಿಂದು ಧ್ರುವವಾಯಿತು. ರೋಹಿಣಿ
ಯಾಯಿತು.

ನನ್ನ ಪ್ರೀತಿಯ ನಕ್ಷತ್ರಗಳು. ಸಂದೇಶಬಿಂದುಗಳು.
ನನ್ನ ಹೃದಯಚಂದ್ರನ ಸುತ್ತ ಹೊಳೆವ ನನ್ನ ಭಾವಗಳು.
ಮೋಡ ಮರೆಯಾಗದಿರಲಿ. ರಾಹುಕೇತು ತಾಕದಿರಲಿ.
ಗ್ರಹಣವಾಗದಿರಲಿ ಒಂದು ಚುಕ್ಕಿಗೂ ಕೂಡ.

ನನ್ನ ಪ್ರಿಯತಮೆ ಮೀನ-ಮೇಷ ಎಣಿಸದಿರಲಿ.
ಮೋಡ ಅಡ್ಡ ಬಂದಲ್ಲಿ ಮಳೆಯಾಗಿ ಪ್ರೀತಿಯ
ಹ್ರುದಯ ತಣಿಯಲಿ. ಪ್ರೀತಿಯ ಬೆಳೆ ಬೆಳೆಯಲಿ,
ನನ್ನ ಪ್ರೀತಿ ಬೆಳಗಲಿ.

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X