• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
  • 13
    ಹೂವು ಅರಳುತಿವೆ ನಿನ್ನಿಂದ
    ಪರಿಮಳ ಕಾದಿದೆ ನನಗಾಗಿ
    ಸೂರ್ಯನು ಬೆಳಗುವ ನಿನ್ನಿಂದ
    ನೋಡಲು ಬೆಳಕು ನನಗಾಗಿ
    ದೇವನ ಕರುಣೆಯು ಹರಿದಿರಲು
    ಜೀವನವೆಲ್ಲ ನನಗಾಗಿ
    ವಿಮಲೇಶ ಶ್ರೀ ಚನ್ನಬಸವೇಶ
    ನಿನ್ನಾನಂದವು ನನಗಾಗಿ







    14
    ಸಿರಿಧನವ ಬಡವಂಗೆ ಕೊಟ್ಟವರ ಕೈಯಲ್ಲಿ ಅಮೃತವಿದೆ
    ನೊಂದವಗೆ ಸಾಂತ್ವನವ ನುಡಿದವರ ಬಾಯಲ್ಲಿ ಅಮೃತವಿದೆ
    ಬೆಂದವರ ಬೇಗುದಿಯ ಕೇಳುವರ ಕಿವಿಯಲ್ಲಿ ಅಮೃತವಿದೆ
    ಬಿದ್ದವರನೆಬ್ಬಿಸುವ ಬಲವುಳ್ಳ ತೋಳಿನಲಿ ಅಮೃತವಿದೆ
    ದುಡಿಮೆಯಲಿ ಕಲ್ಲು ಮುಳ್ಳನು ಮೆಟ್ಟುವರ ಕಾಲಲ್ಲಿ ಅಮೃತವಿದೆ
    ಕೆಟ್ಟ ಕಾಲಕು ಸದ್ವಿಚಾರಗಳ ಮಾಡುವರ ಮನದಲ್ಲಿ ಅಮೃತವಿದೆ
    ಶಿವಶಿವಾ, ನಿನ್ನೊಲುಮೆ ಹಂಚುವರ ಹೃದಯದಲಿ ಅಮೃತವಿದೆ
    ವಿಮಲೇಶ ಶ್ರೀ ಚನ್ನಬಸವೇಶ್ವರಾ
    ನೊಂದವರ ಬೆಂದವರ ನಿಂದವರ ತಂದವರ
    ಭಕ್ತಿಗೆ ನೀನೊಲಿಯೆ ಬಾಳೆಲ್ಲ ಅಮೃತವಿದೆ









    15
    ಜನನ ಹೊತ್ತಿದ ಕಿಡಿಯು, ಜೀವನವು ರಸಪಾಕ
    ಅಡಿಗೆ ಉಂಡು ಮುಗಿಸಿದಾಗ, ಮರಣವೇ ಮಹಾನವಮಿ
    ವಿಮಲೇಶ ಶ್ರೀ ಚನ್ನಬಸವೇಶ್ವರ
    ನೀನು ಕರುಣಿಸಿದಲ್ಲಿ ಕ್ಷಣ ಕ್ಷಣವೂ ಒಂದು ಹಬ್ಬ



    16
    ಇದ್ದುದ ಕಂಡು ಹಿಡಿಯುವುದು ವಿಜ್ಞಾನಿಯ ನಿಯಮ
    ಇಲ್ಲದುದ ಕಲ್ಪನೆಯಲಿಡುವುದು ಕವಿಗಳ ನಿಯಮ
    ಇದ್ದು ಇಲ್ಲದಂತಿರುವುದು ಸನ್ಯಾಸಿಯ ನಿಯಮ
    ಇದ್ದುದು ಇಲ್ಲದುದು ಬಿದ್ದುದು ಎದ್ದುದೆಲ್ಲದಕು
    ವಿಮಲೇಶ ಚನ್ನಬಸವೇಶ್ವರನತಿ ನಿಯಮ




    ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more