ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಲಾ ಚನ್ನಬಸಪ್ಪನವರ ಕಾವ್ಯ ಪ್ರತಿಭೆಗೆ ಕನ್ನಡಿಯಾಗಬಹುದಾದ ಮೂರು ಕವಿತೆಗಳು ಇಲ್ಲಿವೆ. ಕವಿ ಪ್ರತಿಭೆಯ ಬಗ್ಗೆ ಕವಿತೆಗಳೇ ಮಾತನಾಡುವುದರಿಂದ ನಿಮ್ಮ ಪ್ರವೇಶ ನೇರ ಕವಿತೆಗೇ-

By Staff
|
Google Oneindia Kannada News

ಅಮೆರಿಕನ್ನಡತಿಯ ಆಸೆಯ ಲಿಸ್ಟು

  • ವಿಮಲಾ ಚನ್ನಬಸಪ್ಪ
ಕರ್ನಾಟಕದಿಂದ ಅಮೇರಿಕೆಗೆ ಬಂದೆ ವಲಸೆ ;
ಹಿಂದೆ ಹತ್ತು ನೆನಪುಗಳು, ಮುಂದೆ ಮೂವತ್ತು ಆಸೆ ।

ಕನ್ನಾಡಿನಲಿ ಬೇರುಬಿಟ್ಟ ಗಿಡಕ್ಕೆ ಇಲ್ಲೆರಡು ಹೂವರಳಿಸುವ ಆಸೆ ;
ಮಲ್ಲಿಗೆಯ ನೆನೆಯುತ್ತ Gardenia Perfume ಧರಿಸುವಾಸೆ ;
ಅಮೇರಿಕೆಯಲ್ಲಿ ಬೆಳದ ಬಟಾಣಿಗೆ ಕನ್ನಡದ ಒಗ್ಗರಣೆ ಕೊಡುವಾಸೆ ;
ದೋಸೆ ತಿಂದ ನಾಲಗೆಗೆ pizzaವ ಚಪ್ಪರಿಸುವಾಸೆ !

ಕನ್ನಡದ ಬೆವರಿಳಿಸಿ ಅಮೇರಿಕೆಯಲ್ಲಿ Dollar ಗಳಿಸುವಾಸೆ ;
ಆ Dollarಇಗೆ ಸೀರೆ ಕೊಂಡು ಅಕ್ಕನಿಗೆ ಕಳಿಸುವಾಸೆ;
ಜರತಾರಿ ಸೀರಿಯುಡಲಿಕ್ಕೆ ಕನ್ನಡಕೂಟ, ಹಬ್ಬಗಳ ಆಸೆ;
ಕೆಲಸದ ನೆಪದಲ್ಲಿ ಡೌಲಿಂಗ್‌ pant ತೊಡುವಾಸೆ!

ಹೆಂಡತಿಗೆ ಅಮೇರಿಕೆಯಲ್ಲಿ ಹೊಸ ಸ್ವಾತಂತ್ರ್ಯ ಸರಿ ಸಮಾನತೆಯಾಸೆ ;
ಅಮೇರಿಕೆಗೆ ಮೊದಲೆ ಬಂದ ಗಂಡನಿಗೆ ಬಂತು ಹೊಸ ಮೀಸೆ ;
ಕರ್ನಾಟಕದಲ್ಲಿ ನಾ ಕಲಿತೆ ಚನ್ನಾಗಿ ಇಂಗ್ಲೀಷು ಭಾಷೆ ;
ಅಮೇರಿಕೆಯಲ್ಲಿ ಬೆಳೆಯುವೆನ್ನ ಕಂದನಿಗೆ ಕನ್ನಡ ಕಲಿಸುವಾಸೆ !

ಪೂರ್ವೀ ರಾಗ, ರೂಪಕ ತಾಳ, ಭರತನಾಟ್ಯ ತಾಯಿಗೆ ಆಸೆ ;
Rock and Roll ಗೀತಕ್ಕೆ ಕುಣಿಯಲು ಮಗಳಿಗೆ ಆಸೆ ;
ಕರ್ನಾಟಕದಿಂದ ಮುದ್ದಾದ ಸೊಸೆಯ ತರಲು ತಂದೆಗೆ ಆಸೆ ;
ಮುದ್ದು , ಅಪ್ಪುಗೆ ಸುಲಭದಲಿ ಸುರಿವ America ಹೆಣ್ಣು ಮಗನಿಗಾಸೆ !

ಕರ್ನಾಟಕದ ದೇವರ ಪಟಕ್ಕೆ Azalea ಹೂವೇರಿಸುವ ಸದಾಸೆ ;
‘ಭಾಗ್ಯದ ಲಕ್ಷ್ಮೀ ಬಾರಮ್ಮ , Dollar ತಾರಮ್ಮ’ ಎಂಬ ದಿನ- ನಿತ್ಯದಾಸೆ !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X