ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಲಾ ಚನ್ನಬಸಪ್ಪನವರ ಕಾವ್ಯ ಪ್ರತಿಭೆಗೆ ಕನ್ನಡಿಯಾಗಬಹುದಾದ ಮೂರು ಕವಿತೆಗಳು ಇಲ್ಲಿವೆ. ಕವಿ ಪ್ರತಿಭೆಯ ಬಗ್ಗೆ ಕವಿತೆಗಳೇ ಮಾತನಾಡುವುದರಿಂದ ನಿಮ್ಮ ಪ್ರವೇಶ ನೇರ ಕವಿತೆಗೇ-

By Staff
|
Google Oneindia Kannada News

ನಾಳೆಯು ಎಂದೂ ಬರಲಿಲ್ಲ

  • ವಿಮಲಾ ಚನ್ನಬಸಪ್ಪ
ಬಾಳಿಯ ಗಿಡಕ ನೀರನು ಹಣಿಸಿ
ನಾ ಒಂದು ಹಣ್ಣು ತಿನಲಿಲ್ಲ ;
ನಾಳಿಗೆ ಎಂದು ಬುತ್ತಿಯ ಕಟ್ಟಿ ,
ನಾ ಒಂದು ತುತ್ತೂ ಉಣಲಿಲ್ಲ !
ಬಾಳಿಯ ಗಿಡಕ..

ಕಂಬದ ಮ್ಯಾಲೆ ಚಪ್ಪರ ನಿಲ್ಲಿಸಿ,
ನೆರಳಾಗ ಒಮ್ಮೆಯೂ ಇರಲಿಲ್ಲ ;
ಹವಳದ ಗೋಡಗೆ ಮುತ್ತಿನ ತೋರಣ,
ಕೊರಳಾಗ ಒಂದೂ ಸರವಿಲ್ಲ !
ಬಾಳಿಯ ಗಿಡಕ..

ಶಿವ ಕೊಟ್ಟ ಕಾಲಕ ಉಣಬೇಕ ತಾಯಿ,
ಇರಬೇಕ ಇದ್ದು ಉಡಬೇಕ ;
ಶಿವ ಕೊಟ್ಟದ್ದನ್ನೆಲ್ಲ ಕಸಗೊನ್ಡು ಹೋದರ,
ಬಾಯಾಗ ಶಿವನಾಮವಿರಬೇಕ !
ಬಾಳಿಯ ಗಿಡಕ..

ಬಾಳಿಯ ಗಿಡಕ ನೀರನು ಹಣಿಸಿ,
ನಾ ಒಂದು ಹಣ್ಣು ತಿನಲಿಲ್ಲ ;
ನಾಳಿಗೆ ಎಂದು ಎಲ್ಲವ ತೆಗೆದಿಟ್ಟು ,
‘ನಾಳೆಯು’ ಎಂದೂ ಬರಲಿಲ್ಲ !
ಬಾಳಿಯ ಗಿಡಕ..

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X