ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಲಾ ಚನ್ನಬಸಪ್ಪನವರ ಕಾವ್ಯ ಪ್ರತಿಭೆಗೆ ಕನ್ನಡಿಯಾಗಬಹುದಾದ ಮೂರು ಕವಿತೆಗಳು ಇಲ್ಲಿವೆ. ಕವಿ ಪ್ರತಿಭೆಯ ಬಗ್ಗೆ ಕವಿತೆಗಳೇ ಮಾತನಾಡುವುದರಿಂದ ನಿಮ್ಮ ಪ್ರವೇಶ ನೇರ ಕವಿತೆಗೇ-

By Staff
|
Google Oneindia Kannada News

ಹಡದವ್ವ

  • ವಿಮಲಾ ಚನ್ನಬಸಪ್ಪ
ತಾಯವ್ವ ಇಂದ್ಯಾಕ ಜೀವೆಲ್ಲ ನೆನಸ್ಯಾವ,
ತೆಗ್ಗೀಗೆ ನೀರು ಹರದಾಂಗ ;
ತೆಗ್ಗೀಗೆ ನೀರು ಹರದಾಂಗ- ನನ ಮನಸು,
ಸುತ್ತೀ ಬಂದಾವ ತವರೀಗೆ!

ಯಾರು ಬಂದಾರವ್ವ ಕರೆದ ಸರತಿಗೊಮ್ಮೆ ,
ದೂರದೂರಿಂದ ಹಡದವ್ವ ;
ದೂರದೂರಿಂದ ಹಡದವ್ವ ಬಂದಾಳ-
ನನ್ನ ಕಣ್ಣೀರ ಗಂಗ್ಯಾಗಿ!

ದೀಪವ ಹಚ್ಚಿದರ ಕತ್ತಲ ಚದರ್ಯಾವ
ಹಡದವ್ವ ನಿನ್ನ ಮನದಾಗ ;
ಹಡದವ್ವ ನಿನ್ನ ಮನದಾಗ- ನೆನದರ
ಒಡಲ ದುಕ್ಕೆಲ್ಲ ದೂರಾದ !

ಬಿಸಿಲಿಂದ ಬಂದವ್ರಿಗೆ ಬೀಸಣಿಕಿ ಕೊಟ್ಟಾಂಗ ;
ಹಸುಮಕ್ಕಳ ತುಟ್ಟಿಗೆ ಹಾಲಾಂಗ ;
ಹಸುಮಕ್ಕಳ ತುಟಿಗೆ ಹಾಲಾಂಗ- ನನ ಕಿವಿಗೆ
ಸಸುವ ನಿನ ಮಾತು ಹಡದವ್ವ !

ಹೊಟ್ಟೀ ಒಳಗಿನ ಮಾತು ಮತ್ತ್ಯಾರಿಗೆ ಹೇಳಲೆ?
ಹೆತ್ತವ್ವ ನಿನ್ನ ಕಿವಿಗೇನ ;
ಹೆತ್ತವ್ವ ನಿನ್ನ ಕಿವಿಗೆ- ಹೇಳಿದ ಮಾತು
ಮುತ್ತಿನೋಲ್ಯಾಗಿ ಇರಲೆವ್ವ !

ಹತ್ತು ದೇವರಿಗಿಂತ ಹೆತ್ತಾಯಿ ಹೆಚ್ಚೆಂದ ;
ಹೆತ್ತವ್ವ ತಾಯಿ ಗಂಗಮ್ಮ ;
ಹೆತ್ತವ್ವ ತಾಯಿ ಗಂಗಮ್ಮ- ನೀ ಬಾರ
ಉತ್ತರಿ ಮಳಿಯಾಗಿ ನನ ಹೊಲಕ !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X