ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಸ್ಕಾರ ಸಾರ್‌ ಅಂತೀನಿ

By Staff
|
Google Oneindia Kannada News


ತಂಬೂರಿ ಹಾಗೂ ಗಾಜುಗೋಳ

  • ಎಚ್‌.ಎಲ್‌. ಪುಷ್ಪ
ಹರಿಯೋ ಥಳಥಳ ನೀರಿನದು ಎಂಥ ಆಟ?
ಬಿಸಿಲ ಕಿರಣದಲ್ಲಿ ಎಷ್ಟೆಷ್ಟು ಬಣ್ಣ ?
ಮಿನುಗೋ ಮುತ್ತು ಜಾರೋ ಬಿಸಿಲಲ್ಲಿ ತೋರಿದ್ದು ಯಾವ ವರ್ಣ?
ಪುಳಕ್ಕನೆ ತೇಲಿ ಮುಳುಗೋ ಮೀನಿಗೆ ಯಾವ ದಿಕ್ಕಿನ ಹೆಸರು?
- ಇಲ್ಲಿ ಯಾವುದೂ ನಿಲ್ಲೋಲ್ಲ ; ಯಾರನ್ನೂ ಕಾಯೋಲ್ಲ .

ಬಾವುಟ, ಲಾಠಿ, ಬೂಟುಗಳ ಸಡಗರ
ಆಹಾ ಮೊಳಗುತಿದೆ ಸಂಭವಾಮಿ ಯುಗೇ ಯುಗೇ ಝೇಂಕಾರ
ಕೈಯಲ್ಲಿ ಲಾಠಿ, ಬಾಯಲ್ಲಿ ಪರಾಕು
ಕಟ್ಟುವ ಕೆಡವುವ ಕರಣಿ ಕೈ ನಾಜೂಕಾಗಿದೆ
ಎಂದೋ ಕೇಳಿದ ನಿನ್ನ ಹಾಡಿನ ತುಣುಕು ಕ್ಷೀಣವಾಗುತ್ತಿದೆ ;
ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರ.

ಗುಂಡು ಮುಣುಗಿನ ಹಕ್ಕಿಯಂತೆ
ಕಂಡ ಕಂಡ ನೀರ ಮುಳುಗಿ
ಮುಖದ ಮೇಲೆ ಕಾಷಾಯ ಎಳೆವ ಮುಖಕ್ಕೇನು ಗತ್ತು
ಪೀಠದ ಕೆಳಗೆ ಗೆದ್ದಲು, ಹಾವು, ಹೆಗ್ಗಣಗಳದು
ಎಂತಹ ತೃಪ್ತ ಬದುಕು
ಆಹಾ! ಸನಾತನ ಧರ್ಮ, ನಾರುತಿದೆ ಸೊಗಸಾಗಿ
ಕಂಪೆಷ್ಟು , ಅದರ ಸೊಗಸೆಷ್ಟು .

ಇಂದು ಇಲ್ಲಿ ಜಾತ್ರೆ, ನಾಳೆ ಮತ್ತೆಲ್ಲೋ ನರಮೇಧ
ಡೊಂಕುಬಾಲದ ನಾಯಕರಾಟ
ದಬ್ಬೆ ಕಟ್ಟಿದರೂ, ಸುರುಟುತ್ತಿದೆ ಬಲು ಸೊಗಸಾಗಿ
ಒಳಗೆಲ್ಲೋ ತುಡಿವ ಆತ್ಮಕ್ಕೆ, ಕಂಪಿಸುವ ಜೀವಕ್ಕೆ
ನಯಾ ಪೈಸೆ ಕಿಮ್ಮತ್ತಿದ್ದಿದ್ದರೆ.....

ಹೋಗಲಿ ಬಿಡು, ತಂಬೂರಿ ಹೊತ್ತು ತಿರುಗೋ
ತಿರುಕ ನಿನ್ನ ಬುತ್ತಿಯೂಟದಲಿ
ಅದೇ ತಂಗಳನ್ನ , ಹದನಾದ ಕೆಂಪಿಂಡಿ, ಚಟ್ನಿ , ಕಾರ
ಮಿಡಿ ಉಪ್ಪಿನಕಾಯಿ ಹಾಗೇ ಇರಲಿ.

ಹಸಿದ ಕೈ ತತ್ತರಿಸಿ ಚಾಚುತ್ತದೆ ನಿನ್ನ ಜೋಳಿಗೆಯ ಅನ್ನಕ್ಕೆ
ಹೊಟ್ಟೆಯಾಳಗಿನ ಬಾಂಬಿನ ಕಾಳು ಮೊಳಕೆಯಾಡೆದು
ಬೇರು ಮೂಡುವ ಮುನ್ನವೇ ಸುಳ್ಳು ಮೊಟ್ಟೆ
ಒಡೆದು ಬಿಡಲಿ, ನಾಜೂಕಿನ ಗಾಜುಗೋಳ ಚೂರಾಗಲಿ
ತಣ್ಣನೆ ಗಾಳಿ ಮುಖಕ್ಕೆ ರಾಚಲಿ.ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X