ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮ ಚುಟುಕುಗಳು

By Staff
|
Google Oneindia Kannada News
  • ಚಂದ್ರಶೇಖರ್‌ ಮಾಡಭಾವಿ, ಸ್ಕಾಟ್‌ಲ್ಯಾಂಡ್‌
ಅವಕಾಶ ಕೊಡು

ನನಗೆ ಕೈ ಹಿಡಿಯಲು ಅವಕಾಶ ಕೊಡು
ನಿನಗೆ ಸಹಾಯಕನಾಗುತ್ತೇನೆ
ನನ್ನ ಭುಜಕ್ಕೆ ಒರಗು
ಆಧಾರವಾಗಿರುತ್ತೇನೆ
ನನ್ನ ತೋಳು ನೀಡಲು ಬಿಡು
ನಿನ್ನನ್ನು ಬಳಸಿಕೊಳ್ಳುತ್ತೇನೆ
ನನ್ನ ಹೃದಯ ನೀಡಲು ಬಿಡು
ನಿನ್ನನ್ನು ಪ್ರೀತಿಸುತ್ತೇನೆ.....

ಹಿಂತಿರುಗಿ ಬಾ

ನೀನು ಬಾಗಿಲ ಬಳಿ ಹೋದಾಗ
ನಾನಂದುಕೊಂಡಿರಲಿಲ್ಲ ನೀ ಹಾಗೆಯೆ ಹೋಗುವೆ ಎಂದು
ನಾನಂದುಕೊಂಡಿದ್ದೆ ನೀ ಮನಸ್ಸು ಬದಲಾಯಿಸಿ
ಹಿಂತಿರುಗಿ ಬರುವೆ ಎಂದು

ದಯವಿಟ್ಟು ಹಿಂತಿರುಗಿ ಬಾ
ನಾ ನಿನ್ನ ಪ್ರೀತಿಸುವೆ ಎಂದು ಹೇಳು
ನಾ ನೀನಿಲ್ಲದೆ ಬದುಕಲಾರೆ ಎನ್ನು
ಒಬ್ಬಂಟಿಯಾಗಿ ಬಾಳಲಾರೆ ಎನ್ನು
ಎಂದೆಂದಿಗೂ ಜೊತೆಯಾಗಿರುವೆ ಎಂದು ಭಾಷೆ ಕೊಡು

ಹಿಂತಿರುಗಿ ಬರುವೆಯಲ್ಲಾ...
ದಾರಿ ಕಾಯುತ್ತಿರುತ್ತೇನೆ...

ನಡೆ ಮುಂದೆ

ನಿಲ್ಲಬೇಡ ನಡೆಮುಂದೆ
ನಿನ್ನ ಗುರಿ ಮುಟ್ಟುವವರೆಗೆ

ಬೇರೆಯವರಿಗಾಗಿ ಕಾಯಬೇಡ
ನಿನ್ನ ಹೊತ್ತೊಯ್ಯಲು
ಅವರಿಗೆ ನೀನು ಭಾರವಾಗಬಹುದು
ಇಬ್ಬರೂ ಜೊತೆಗೂಡಿ ಬೀಳಬಹುದು

ನಿನ್ನ ದಾರಿ ಎತ್ತರವೆನಿಸಿದರೆ
ಇನ್ನಷ್ಟು ಪ್ರಯತ್ನಿಸು
ಪ್ರಪಂಚದಲ್ಲಿ ನೀನು ಏರಲಾರದಷ್ಟು
ಎತ್ತರದ ಪರ್ವತವಿಲ್ಲ

ನೀ ಮುನ್ನಡೆವಾಗ
ಯಾರಾದರೂ ಸಹಾಯಕ್ಕಾಗಿ
ಕೈ ಚಾಚಿದರೆ ಕೈ ನೀಡು
ಜೊತೆಗೂಡಿ ಮುನ್ನುಗ್ಗು

ಕೈಯಲ್ಲಿ ಕೈ, ಜೊತೆಯಾಗಿ
ಒಬ್ಬರಿಗೊಬ್ಬರು ಸಹಾಯವಾಗುತ್ತ
ಮುನ್ನಡೆದರೆ ನಿನ್ನ ದಾರಿ
ಸುಲಭ, ಗುರಿ ಇನ್ನೂ ಹತ್ತಿರ...

ನಲ್ಲೆ ನಿನ್ನ ನೆನಪಾಗುತ್ತಿದೆ

ನಲ್ಲೆ ನಿನ್ನ ನೆನಪಾಗುತ್ತಿದೆ
ನಿನ್ನ ಬಿಸಿಯಪ್ಪುಗೆ
ನಿನ್ನ ದೇಹದ ಸುವಾಸನೆ
ನಿನ್ನ ಕೆಂದುಟಿಯ ಸಿಹಿಜೇನು
ನಿನ್ನ ಆ ಬಿಗಿ ಹಿಡಿತ
ಇನ್ನೂ ಏನೇನೋ...
ನನಗೇ ನಂಬಿಕೆಯಾಗುತ್ತಿಲ್ಲ
ಆದರೆ ಇದೆಲ್ಲ ನಿಜ
ನಲ್ಲೆ ನಿನ್ನ ನೆನಪಾಗುತ್ತಿದೆ
ನಿನಗೂ ಹೀಗಾಗುತ್ತಿದೆಯಾ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X