ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಮಿತ

By Staff
|
Google Oneindia Kannada News

*ಮಾ. ಶಿ. ವಿಜಯಕುಮಾರ್‌
ಮಾಂಟ್ರಿಯಲ್‌, ಕೆನಡಾ.

ಮನೆಯಲಿ ನಾವೀಗೀರ್ವರೆ,
ಗರಿಬಲಿತ ಮರಿ ಹಾರಿಹೋಗಿರೆ,
ಮುಗ್ಧ ಹಸುಗೂಸಿರದಿರೆ,
ನೀರವತೆಯ ಮನೆಯಾಗಿರೆ.

ಬಂದಳು ಹಸುಗೂಸು ,
ಅವಳ ನಗು ತಿಳಿ, ನವ, ಅಮಿತ ;
ಅಳುವೂ ತಿಳಿ, ನವ, ಅರೆ-ಮಿತ!
ಉದರರಾಗೋದಯಕೆ ಸೀಮಿತ.

ಮಧುರ ಮುಗ್ಧತೆಯ ರೂವಾರಿ,
ಕಳೆದಳೆರಡೇ ರಾತ್ರಿ,
ಅದಮಿತ ಸಮ್ಮೋಹನವ ಬೀರಿ,
ತನುಮನದ ದುಗುಡಗಳ ಹೀರಿ.

ಎಳೆಗೂಸ ಬೆಳವಣಿಗೆ ತ್ವರಿತ,
ಅದರ ಮೊದಲ ಚಣಗಳ ಗ್ರಹಣ,
ಸುಲಿದ ಬಾಳೆಯ ಫಲವಲ್ಲ,
ಏನಿರಲಿ ಅದ ಹಿಡಿವ ಉಪಕರಣ.

ಅಂತಹುದು ಅವಳು
ಮೆಟ್ಟಲೇರಿದ ಗಳಿಗೆ.
ಏನಾ ಚರಚೆಲುವು ಚಿರಮುದ್ರಿತವು
ಚಿರವಾಗಿರಲು ಆ ಚರಚೆಲುವಿನಾ ಸೆರೆ.

‘ ಹತ್ತು ಬಾ ತಾಯಿ, ಹತ್ತು ಬಾ,
ಹತ್ತು ಬಾ ತಾಯಿ, ಹತ್ತು ಬಾ’,
ಪಲ್ಲವಿತ ಸಹಜ ಗಾನ,
ಸಲಿಸಿ ಬೇಂದ್ರೆಗೆ ಮೌನ ನಮನ.

ನೀರವತೆ ಕಡಲೊಳಾಳ್ವಂಗೆ ತೆಪ್ಪ,
ನೀರವತೆ ದಾರಿದ್ರ್ಯಂಗೆ ಕಡವರ,
ನೀರವತೆ ಅಡಸಿರ್ಪ ರೋಗಿಗಮೃತ,
ಈ ಬಿಸಿಲ ಬೇಗೆಗೆ ಸತ್ತಿಗೆ !


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X