• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂ.ಗೋಪಾಲಕೃಷ್ಣ ಅಡಿಗರಾಮನ ಬಳಿ ಇದ್ದೆ ನಾನು: ಕಂಡೆ ಕೋದಂಡದೋರ್ದಂಡ ಬಲನನ್ನ ಕಣ್ಣ ಮುಂದೆಯೇ ಮೊಳೆತು ಬೆಳೆದ ರೀತಿಯ.ನನ್ನ ಹಾಗೆ ಅವನು ಕೂಡ ಉಣ್ಣುತ್ತಿದ್ದ ತಿನ್ನುತ್ತಿದ್ದ ,ಚಂದ್ರನನ್ನು ತಾ ಎಂದು ತಾರಾಮಾರು ತೊದಲುತ್ತಿದ್ದ ;ಹೀಗೇ ಇರಲು ದೇವತ್ವದ ತರಿಸಲೀಟಿತುದಿಯನೇರಿ ಅವನ ಮನಮುಗಿಲ ಚುಚ್ಚಿ ಮುಂದುವರಿದ ಆ ಮಹಾಪ್ರತೀತಿಯಕಣ್ಣಾರೆ ಕಂಡೆನಯ್ಯ ; ಹೊಗಳಲೆನಲು ಆಡಲಿಲ್ಲ ಈ ನನ್ನ ನಾಲಗೆ.ಉಳಿದೆ ನಾನು ಆಗಲೂ ಈಗ ಇಲ್ಲಿ ಕೊಳೆವೊಲು.ಕೃಷ್ಣನೊಡನೆ ಗೋಕುಲದಲಿ ನಾನು ಕೂಡ ಬೆಣ್ಣೆ ಕದ್ದುಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ- ಅದರೊಳೇನೊ ನಾನೆ ಅವನಿಗಿಂತ ಮೇಲು, ಸತ್ಯವು !ಅವನೊ ಯೋಗರಾಜನಾದ, ದೊಂಬ ಸುರಿದ ನೀರಿನಿಂದ ಮಾವಿನೋಟೆ ಚಿಗಿಯುವಂತೆ ಚಿಗಿತ, ಅಬ್ಬ ಏನಚ್ಚರಿ ! ಮುಗಿಲಿಗೊಂದೆ ನೆಗೆತ !ತಿಳಿಯದ ಮನ ತುಯ್ಯುತಿರೆ, ಇಲ್ಲಿ ಕಾಲು, ಅಲ್ಲಿ ತಲೆ,ಅದಕೂ ಆಚೆ ನೋಟ;ಆಹಾ ಅದೆಂಥ ಆಟ !ನಾನೊ ಸಣ್ಣ ಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ ಪಾಚಿ ಕಟ್ಟಿ ಕಾಯುತಿದ್ದೆ, ಭೋಗರಾಜ, ರೋಗರಾಜ, -ಈಗಿನಂತೆ ಆಗಲೂ.ಬುದ್ಧನ ಖಾಸಾ ಶಿಷ್ಯ ಯಾರೆಂಬಿರಿ, ನಾನೆ ನಾನು ! ‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ’ಎಂದು ಒರಲಿ ನಡೆದರಲ್ಲ ಅವರ ಮುಂದಾಳೆ ನಾನು;ಹುಟ್ಟಿಗಿಂತ ಮುನ್ನವೇ ರಾಜತ್ವವ ಬಿಟ್ಟವನು, ಬೋಧಿವೃಕ್ಷದಡಿಯೆ ಒಮ್ಮೆ ಮೂಗು ಮುಚ್ಚಿ ನೆಟ್ಟವನು, ನಾನೂ ಕೂಡ ಹೆಂಡತಿ ಮಕ್ಕಳನು ಬಿಟ್ಟುಕೊಟ್ಟವನು, ಅವನ ಹಾಗೆ -ಅವನೊ ಬುದ್ಧ ಸಿದ್ಧ ಜಗತ್ಪ್ರಸಿದ್ಧನಾಗಿ ಎದ್ದಿದ್ದ ;ಅವನ ಮುಖದ ಕಾಂತಿಯೇನು, ಉಗುವ ಆ ಪ್ರಶಾಂತಿಯೇನು !ಕೆಂಡದ ಬಳಿ ಇದ್ದು ಕೂಡ ಈ ಇದ್ದಲು ಇತ್ತು ಹಾಗೆ- ಆಗ ಈಗಿನಂತೆಯೇ ಹೊತ್ತದೇ ಉರಿಯದೆ.ಗಾಂಧಿ ಬಂದ. ಅವನ ಹಿಂದೆ ಮೊದಲು ಬಂದ ಭೂಪನುನಾನೆ. ಅವನ ಕೊರಳಿಗೇರಿದಂಥ ಮೊದಲ ಹಾರವುನನ್ನದೇ. ಖಾದಿಯುಡಿರಿ ಎಂದನೋ ಇಲ್ಲವೋಖಾದಿ ತೊಟ್ಟ ಧೀರ ನಾನು ! ರಾಟೆ ಹಿಡಿದು ನೂತೆನಯ್ಯ,ಅದರೊಳಿಲ್ಲ ಸಂಶಯ. ಹಾಗು ಹೀಗು ಜೈಲಿಗೂನುಸುಳಿಹೋದೆ ನಿಶ್ಚಯ. ‘ ಗಾಂಧಿಗೆ ಜೈ, ಗಾಂಧಿಗೆ ಜೈ’ಕೊರಳು ಬಿರಿವ ತನಕವೂ ಕಿರಲಿದೆ ನಾ ಇಷ್ಟು ದಿನ ;ಈಗ ಹೋದನವನು. ನಾನು ಮಾಡಲೇನೋ ತಿಳಿಯದು;ಅವನು ಒಂದು ಸಲವೊ ಏನೊ ಮಾಂಸ ತಿಂದು ಅತ್ತನು;ದಿನದಿನವೂ ಅದನೆ ತಿಂದು ಅನುಗಾಲವು ಅಳುವೆ ನಾನು !ಒಂದು ಸಲವೊ ಏನೊ ಅವನು ಸುಳ್ಳು ಹೇಳಿ ಅಳಲಿದ;ನನಗೊ ದಿನಾ ಅದೇ ಕೆಲಸ, ಅದೇ ಅಳಲು ಪ್ರತಿದಿನ. ಅವನೋ ಮಹಾತ್ಮನಾದ; ಅರಳಲಿಲ್ಲ ನನ್ನ ಮನ.ನಾನು ಅವನು ಒಂದೆ ಲೋಹ,ಕಬ್ಬಿಣ-ಕರಿ ಕಬ್ಬಿಣ.ಯಾವ ರಸವು ಸೋಂಕಿತವನ ?ಯಾವ ಬೆಂಕಿ ತಾಕಿತವನ ?ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ ;ಆರೆಂದರೆ ಹಿಗ್ಗಲಿಲ್ಲ, ಮೂರೆಂದರೆ ಕುಗ್ಗಲಿಲ್ಲ;ನಾನಚ್ಯುತ, ನಾ ನಿರ್ಜರ, ನಾನೆ ಅದ್ವಿತೀಯ;ಒಂದೆ ರೀತಿ, ಒಂದೆ ರೀತಿ ಒಂದೆ ಸಮ, ನೆಲಮಟ್ಟ- ಅರಿತಿರೇನು ನೀವು ನನ್ನ ಹೆಬ್ಬಾಳಿನ ಗುಟ್ಟ !

By Staff
|

ನನ್ನ ಅವತಾರ

  • ಎಂ.ಗೋಪಾಲಕೃಷ್ಣ ಅಡಿಗ

ರಾಮನ ಬಳಿ ಇದ್ದೆ ನಾನು: ಕಂಡೆ ಕೋದಂಡದೋರ್ದಂಡ ಬಲ
ನನ್ನ ಕಣ್ಣ ಮುಂದೆಯೇ ಮೊಳೆತು ಬೆಳೆದ ರೀತಿಯ.
ನನ್ನ ಹಾಗೆ ಅವನು ಕೂಡ ಉಣ್ಣುತ್ತಿದ್ದ ತಿನ್ನುತ್ತಿದ್ದ ,
ಚಂದ್ರನನ್ನು ತಾ ಎಂದು ತಾರಾಮಾರು ತೊದಲುತ್ತಿದ್ದ ;
ಹೀಗೇ ಇರಲು ದೇವತ್ವದ ತರಿಸಲೀಟಿತುದಿಯನೇರಿ ಅವನ ಮನ
ಮುಗಿಲ ಚುಚ್ಚಿ ಮುಂದುವರಿದ ಆ ಮಹಾಪ್ರತೀತಿಯ
ಕಣ್ಣಾರೆ ಕಂಡೆನಯ್ಯ ; ಹೊಗಳಲೆನಲು ಆಡಲಿಲ್ಲ ಈ ನನ್ನ ನಾಲಗೆ.
ಉಳಿದೆ ನಾನು ಆಗಲೂ ಈಗ ಇಲ್ಲಿ ಕೊಳೆವೊಲು.






ಕೃಷ್ಣನೊಡನೆ ಗೋಕುಲದಲಿ ನಾನು ಕೂಡ ಬೆಣ್ಣೆ ಕದ್ದು
ಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ-
ಅದರೊಳೇನೊ ನಾನೆ ಅವನಿಗಿಂತ ಮೇಲು, ಸತ್ಯವು !
ಅವನೊ ಯೋಗರಾಜನಾದ, ದೊಂಬ ಸುರಿದ ನೀರಿನಿಂದ
ಮಾವಿನೋಟೆ ಚಿಗಿಯುವಂತೆ ಚಿಗಿತ,
ಅಬ್ಬ ಏನಚ್ಚರಿ ! ಮುಗಿಲಿಗೊಂದೆ ನೆಗೆತ !
ತಿಳಿಯದ ಮನ ತುಯ್ಯುತಿರೆ, ಇಲ್ಲಿ ಕಾಲು, ಅಲ್ಲಿ ತಲೆ,
ಅದಕೂ ಆಚೆ ನೋಟ;
ಆಹಾ ಅದೆಂಥ ಆಟ !
ನಾನೊ ಸಣ್ಣ ಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ
ಪಾಚಿ ಕಟ್ಟಿ ಕಾಯುತಿದ್ದೆ, ಭೋಗರಾಜ, ರೋಗರಾಜ, -ಈಗಿನಂತೆ ಆಗಲೂ.









ಬುದ್ಧನ ಖಾಸಾ ಶಿಷ್ಯ ಯಾರೆಂಬಿರಿ, ನಾನೆ ನಾನು !
‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ’
ಎಂದು ಒರಲಿ ನಡೆದರಲ್ಲ ಅವರ ಮುಂದಾಳೆ ನಾನು;
ಹುಟ್ಟಿಗಿಂತ ಮುನ್ನವೇ ರಾಜತ್ವವ ಬಿಟ್ಟವನು,
ಬೋಧಿವೃಕ್ಷದಡಿಯೆ ಒಮ್ಮೆ ಮೂಗು ಮುಚ್ಚಿ ನೆಟ್ಟವನು,
ನಾನೂ ಕೂಡ ಹೆಂಡತಿ ಮಕ್ಕಳನು ಬಿಟ್ಟುಕೊಟ್ಟವನು,
ಅವನ ಹಾಗೆ -
ಅವನೊ ಬುದ್ಧ ಸಿದ್ಧ ಜಗತ್ಪ್ರಸಿದ್ಧನಾಗಿ ಎದ್ದಿದ್ದ ;
ಅವನ ಮುಖದ ಕಾಂತಿಯೇನು, ಉಗುವ ಆ ಪ್ರಶಾಂತಿಯೇನು !
ಕೆಂಡದ ಬಳಿ ಇದ್ದು ಕೂಡ ಈ ಇದ್ದಲು ಇತ್ತು ಹಾಗೆ-
ಆಗ ಈಗಿನಂತೆಯೇ ಹೊತ್ತದೇ ಉರಿಯದೆ.









ಗಾಂಧಿ ಬಂದ. ಅವನ ಹಿಂದೆ ಮೊದಲು ಬಂದ ಭೂಪನು
ನಾನೆ. ಅವನ ಕೊರಳಿಗೇರಿದಂಥ ಮೊದಲ ಹಾರವು
ನನ್ನದೇ. ಖಾದಿಯುಡಿರಿ ಎಂದನೋ ಇಲ್ಲವೋ
ಖಾದಿ ತೊಟ್ಟ ಧೀರ ನಾನು ! ರಾಟೆ ಹಿಡಿದು ನೂತೆನಯ್ಯ,
ಅದರೊಳಿಲ್ಲ ಸಂಶಯ. ಹಾಗು ಹೀಗು ಜೈಲಿಗೂ
ನುಸುಳಿಹೋದೆ ನಿಶ್ಚಯ. ‘ ಗಾಂಧಿಗೆ ಜೈ, ಗಾಂಧಿಗೆ ಜೈ’
ಕೊರಳು ಬಿರಿವ ತನಕವೂ ಕಿರಲಿದೆ ನಾ ಇಷ್ಟು ದಿನ ;
ಈಗ ಹೋದನವನು. ನಾನು ಮಾಡಲೇನೋ ತಿಳಿಯದು;
ಅವನು ಒಂದು ಸಲವೊ ಏನೊ ಮಾಂಸ ತಿಂದು ಅತ್ತನು;
ದಿನದಿನವೂ ಅದನೆ ತಿಂದು ಅನುಗಾಲವು ಅಳುವೆ ನಾನು !
ಒಂದು ಸಲವೊ ಏನೊ ಅವನು ಸುಳ್ಳು ಹೇಳಿ ಅಳಲಿದ;
ನನಗೊ ದಿನಾ ಅದೇ ಕೆಲಸ, ಅದೇ ಅಳಲು ಪ್ರತಿದಿನ.
ಅವನೋ ಮಹಾತ್ಮನಾದ; ಅರಳಲಿಲ್ಲ ನನ್ನ ಮನ.
ನಾನು ಅವನು ಒಂದೆ ಲೋಹ,
ಕಬ್ಬಿಣ-ಕರಿ ಕಬ್ಬಿಣ.
ಯಾವ ರಸವು ಸೋಂಕಿತವನ ?
ಯಾವ ಬೆಂಕಿ ತಾಕಿತವನ ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ ;
ಆರೆಂದರೆ ಹಿಗ್ಗಲಿಲ್ಲ, ಮೂರೆಂದರೆ ಕುಗ್ಗಲಿಲ್ಲ;
ನಾನಚ್ಯುತ, ನಾ ನಿರ್ಜರ, ನಾನೆ ಅದ್ವಿತೀಯ;
ಒಂದೆ ರೀತಿ, ಒಂದೆ ರೀತಿ ಒಂದೆ ಸಮ, ನೆಲಮಟ್ಟ-
ಅರಿತಿರೇನು ನೀವು ನನ್ನ ಹೆಬ್ಬಾಳಿನ ಗುಟ್ಟ !

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more