ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಳಿನಿ ಮೈಯ: ಭರವಸೆಯ ಕಾವ್ಯ ವ್ಯವಸಾಯ

By Staff
|
Google Oneindia Kannada News

*ನಳಿನಿ ಮೈಯ

Nalini Maiyaಶಿಕಾಗೋ ನಗರದ ಸ್ವಗೃಹದಲ್ಲಿ,
ದಿವಾನಖಾನೆಯ ಸೋಫಾದಲ್ಲಿ
ಒರಗಿದ ನಾನು ಕನವರಿಸಿದ್ದೆ
ಆಹಾ ಕನ್ನಡ, ಓಹೋ ಕನ್ನಡ
ಅಯ್ಯೋ ಕನ್ನಡ, ಸವಿ ನುಡಿ ಕನ್ನಡ
ಎನ್ನುತ ಏನೋ ಬಡಬಡಿಸಿದ್ದೆ
ಎದುರಿನ ಕುಂಡದಿ ನಾನೇ ಹಾಕಿದ
ಮಲ್ಲಿಗೆ ಹೂವು ಘಮಘಮಿಸಿತ್ತು
ಎಂದೋ ಕೊಂಡ ಮರುಗದ ಪರ್ಫ್ಯೂಮ್‌
ವಾಸನೆ ಮೂಗಿನ ಬಳಿ ಸುಳಿದಿತ್ತು
ಅರ್ಧ ನಿದ್ದೆಯ ಜೊಂಪಿನ ಸ್ಥಿತಿಯಲಿ
ಕನಸಿನ ಸುರುಳಿಯು ಬಿಚ್ಚಿತ್ತು
ಬೆಂಗ್ಳೂರ್‌ ವಿಮಾನ ನಿಲ್ದಾಣದಲ್ಲಿ
ನಾನಿಳಿದಂತೆ ಕಂಡಿತ್ತು
ಹೊರಗಡೆ ಎಲ್ಲ ಕನ್ನಡ ಜನತೆ
ಉಕ್ಕಿದೆ ಇಲ್ಲಿ ಕನ್ನಡ ಒರತೆ
ಎನ್ನುತ ಈ ಮನ ಹಾಡಿತ್ತು

ಆದರೆ ಏನಿದು ಮಹದಾಶ್ಚರ್ಯ!
ಇನ್ನಿಲ್ಲದ ಈ ಪರಮಾಶ್ಚರ್ಯ!
ಕನ್ನಡ ಬಿಟ್ಟು ಎಲ್ಲ ಮಾತೂ
ಕೇಳುತ್ತಿದೆ ಈ ಪಟ್ಟಣದಲ್ಲಿ
ಹಿಂದಿ, ತಮಿಳು, ತೆಲುಗು, ಮರಾಠಿ
ಎಂದಿಗು ಕಾಡುವ ಇಂಗ್ಲಿಷ್‌ ಧಾಟಿ
ಎಲ್ಲಿಗೆ ಬಂದೆನೋ ? ಇದು ಹೇಗಾಯಿತೋ ?
ಎನ್ನುತ ನಾನು ಕಂಗಾಲಾಗಿ
ದೃಷ್ಟಿಯ ಹರಿಸಿದೆ ಫಲಕದ ಕಡೆಗೆ
ಅಲ್ಲೇ ಇತ್ತು ದೊಡ್ಡಕ್ಷರದಲಿ
ಊರಿನ ಹೆಸರು "Bangalore" ಎಂದು
‘ಸುಂದರ’ವಾಗಿ ಬರಕೊಂಡಿತ್ತು
ಕನ್ನಡತನವನು ಕಳೆದುಕೊಂಡ ಈ
ಕನ್ನಡ ಜನತೆಯ ಪ್ರತಿನಿಧಿಯಂತೆ
ಇಂಗ್ಲಿಷ್‌ ಬೋರ್ಡು ನಿಂತೇ ಇತ್ತು !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X