ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಳಿನಿ ಮೈಯ: ಭರವಸೆಯ ಕಾವ್ಯ ವ್ಯವಸಾಯ

By Staff
|
Google Oneindia Kannada News

*ನಳಿನಿ ಮೈಯ

Nalini Maiyaಹಕ್ಕಿಯಾಂದು ಹುಟ್ಟಿ ಬಂತು ಬಂಗಾರದ ಪಂಜರದಲ್ಲಿ
ಮುಗುದ ಕಣ್ಣನರಳಿಸಿ ಸುತ್ತ ಮುತ್ತ ನೋಡಿತು
ಕಂಡು ಬಂತು ಸುತ್ತುವರಿದ ಹೊನ್ನ ಪಂಜರ
ಸುರಕ್ಷತೆಯ ಭಾವದಲ್ಲಿ , ಸುಭದ್ರತೆಯ ನೆಮ್ಮದಿಯಲಿ
ಪುಟ್ಟ ಹಕ್ಕಿ ಸಂತಸದಲಿ ನಿದ್ದೆ ಹೋಯಿತು

ಸೂರ್ಯ ಹುಟ್ಟಿ, ಸೂರ್ಯ ಮುಳುಗಿ ದಿನಗಳುರುಳಿತು
ಹಕ್ಕಿ ಬೆಳೆದು ದೊಡ್ಡದಾಗಿ ರೆಕ್ಕೆ ಬಲಿಯಿತು
ಪ್ರೌಢ ಪಕ್ಷಿ ಸ್ವತಂತ್ರವಾಗಿ ಹಾರಲೆಳಸಿತು
ಪಂಜರಕ್ಕೆ ರೆಕ್ಕೆ ಬಡಿದು ಸೋತು ಬಿದ್ದಿತು

ನೀನು ನಾನು ಹಕ್ಕಿಯಾಗೆ ಸಮಾಜ ಒಂದು ಪಂಜರ
ಕಟ್ಟು ನಿಟ್ಟು ಕಟ್ಟಳೆ, ಬೇಡವಾದ ಕೋಟಲೆ
ಸುತ್ತುವರಿದ ಸರಳಿಗೆ ಹೆಸರು ಕೋಟಿಗಟ್ಟಲೆ
ನೀತಿ, ನಿಯಮ ಕಾಯದೆ, ಹಲವು ಬಗೆಯ ವಾಯಿದೆ
ಅಂದಿನ ಸುಭದ್ರತೆಯು ಆಯಿತಿಂದು ಬಂಧನ
ರಕ್ಷಣೆಯನು ನೀಡಿದ ಸರಳು ಇಂದು ಶೃಂಖಲೆ

ಕದಲದಾ ಪಂಜರವು ಅಂದಿಗೂ ಇಂದಿಗೂ ಬದಲಾಗಲಿಲ್ಲ , ಓ ಪಕ್ಷಿ
ಬದಲಾಯಿತಿಂದದನು ವೀಕ್ಷಿಸುವ ನಿನ್ನ ಅಕ್ಷಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X