ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ- ಸಿಲಿಕಾನ್‌ ಕಣಿವೆಯ ವೇಗದ ಬದುಕಿನ ನಡುವೆಯೂ ಮೊದಲ ಪ್ರೇಮದ ನೆನಪುಗಳನ್ನು ಉಳಿಸಿಕೊಂಡಿರುವುದು ಲಕ್ಷ್ಮೀಕಾಂತ್‌ರ ಕಾವ್ಯದ ವಿಶೇಷ. ಉತ್ಸಾಹಿ ಕವಿಯ ಕಾವ್ಯದ ಮೂರು ಸೆಳಕುಗಳು ನಿಮ್ಮ ಓದಿಗೆ.

By Staff
|
Google Oneindia Kannada News

ಮೊದಲ ಪ್ರೇಮ

  • ವಿ. ಲಕ್ಷ್ಮೀಕಾಂತ್‌
ಮೊದಲ ಮಳೆ, ಮೊದಲ ಕವನ
ಮೊದಲ ಪ್ರೇಮ, ಮೊದಲ ಚುಂಬನ
ಎಲ್ಲವೂ ಈಗ ಕೊಂಚ ಹಳೆಯದು
ಆದರೆ ಅದರ ನೆನಪುಗಳು ಮಾತ್ರ ಅಳಿಯದು

ಆ ಮೊದಲ ಮಳೆಯಲ್ಲಿ ಎದ್ದ ಮಣ್ಣಿನ
ವಾಸನೆಗೆ ಮತ್ತೇ ಕಾಯುತ್ತಿರುವೆ.
ಮುಂದಿನ ಮಳೆಯ ತನಕ ಕಾದರೆ
ಮತ್ತೆ ಬರುತ್ತದೆ ಆ ಮಣ್ಣಿನ ವಾಸನೆ.

ಮೊದಲ ಕವನ ಬರೆಯುವಾಗ ಅವಳಿದ್ದಳು
ಆಗ ಅವಳೇ ಕವಿತೆಯಾಗಿ ಹರಿಯುತ್ತಿದ್ದಳು.
ಈಗ ಅವಳ ನೆನಪುಗಳು ನುಸಿಯುತ್ತಿವೆ ಅಷ್ಟೇ.
ಕವನಗಳು ವ್ಯಸನಗಳಾಗಿ ದಾರಿ ತಪ್ಪಿವೆ

ಆದರೆ ಮೊದಲ ಪ್ರೇಮದ ನೆನಪು
ಎಂದೆಂದಿಗೂ ಸವಿ ನೆನಪೇ. ವರ್ಷ, ವರ್ಷ
ಕಾದರೂ ಮತ್ತೆ ಬಾರದು ಆ ಮಧುರ ಪ್ರೇಮ
ಮೊದಲ ಪ್ರೇಮ, ಮೊದಲ ಪ್ರೇಮವೇ.ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X