ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ- ಸಿಲಿಕಾನ್‌ ಕಣಿವೆಯ ವೇಗದ ಬದುಕಿನ ನಡುವೆಯೂ ಮೊದಲ ಪ್ರೇಮದ ನೆನಪುಗಳನ್ನು ಉಳಿಸಿಕೊಂಡಿರುವುದು ಲಕ್ಷ್ಮೀಕಾಂತ್‌ರ ಕಾವ್ಯದ ವಿಶೇಷ. ಉತ್ಸಾಹಿ ಕವಿಯ ಕಾವ್ಯದ ಮೂರು ಸೆಳಕುಗಳು ನಿಮ್ಮ ಓದಿಗೆ.

By Staff
|
Google Oneindia Kannada News

ಕ್ಯಾಲಿಫೋರ್ನಿಯ ಕಾಗೆ

  • ವಿ. ಲಕ್ಷ್ಮೀಕಾಂತ್‌
ಕ್ಯಾಲಿಫೋರ್ನಿಯ ಕಾಗೆ
ಕೂಡ ಕಪ್ಪೇ ಸ್ವಾಮಿ, ಆದರೆ
ದೂರದಿಂದ ನೋಡುವವರಿಗೆ
ಮಾತ್ರ ಇದು ಭ್ರಮೆಯ ಭೂಮಿ

ಇಲ್ಲಿ ಗಗನಚುಂಬಿ ಕಟ್ಟಡಗಳಿಲ್ಲ
ಆದರೆ ಕಟ್ಟಡಗಳ ಬೆಲೆ ಮಾತ್ರ
ಗಗನದಲ್ಲೇ ಇದೆ. ಇಲ್ಲಿರುವ ಸುಮಾರು
ಜನ ಕಾಗದದ ಕೋಟ್ಯಾಧಿಪತಿಗಳೇ
(paper millionaires)

ಈ ರಾಜ್ಯ ಅಂದೊಮ್ಮೆ ಚಿನ್ನದ ಕಣಿವೆ
ಇಂದು ಕಂಪ್ಯೂಟರ್‌ ಸಿಲಿಕಾನ್‌ ಕಣಿವೆ
ತಂತ್ರಜ್ಞಾನಕ್ಕೆ, ತಾರೆಗಳಿಗೆ ತವರೂರು
ಸ್ಥಳೀಯರಿಗಿಂತ ಹೆಚ್ಚು ಹೊರಗಿನವರು.

ಭೂತಾಯಿಗಿಲ್ಲ ಸ್ವಲ್ಪವೂ ಅನುಕಂಪನ
ಏಕೆಂದರೆ ಇಲ್ಲಿ ಆಗಾಗ ಭೂಕಂಪನ
ಆದರೂ ಕ್ಯಾಲಿಫೋರ್ನಿಯಾದ ಹೆಸರು
ಕೇಳಿದರೇನೇ ಒಂದು ರೀತಿಯ ರೋಮಾಂಚನಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X