• search

ಕ್ಷಮೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌, ಮಿಷಿಗನ್‌

    ಮೊದಲ ಚುಂಬನದಲ್ಲಿ
    ದಂತ ಭಂಜನವಾಗಿ
    ನಾನೊಲಿದ ನಲ್ಲೇ ನೀ
    ಸಿಡುಕಿ ನಡೆದೆ

    ಚಂದದಾಗಸದಲ್ಲಿ
    ಕರಿಮೋಡ ಕವಿದಂತೆ
    ಮಂದಹಾಸದ ಮೊಗವ
    ತಿರುವಿ ಬಿಗಿದೆ

    ಮಧುರ ದನಿ ಹೊರಡಿಸುವ
    ಕೋಗಿಲೆಯ ಕಂಠದಲಿ
    ಒಡಕು ಕೊಳಲಿನ ಸ್ವರದ
    ಕರ್ಕಶವ ತಂದೆ

    ಮಿಂಚಿನಂದದಿ ಹೊಳೆವ
    ಕಣ್ಣಿವೆಯ ಅಂಚಿನಲಿ
    ಕಂಬನಿಯ ಹನಿಯಾಂದ
    ಒರಸಿ ತೆಗೆದೆ

    ತಪ್ಪು ನನ್ನದೆ ನಲ್ಲೆ
    ಮೊದಲ ಭೇಟಿಯ ದಿನವೆ
    ಬಿರುಸಾಗಿ ವರ್ತಿಸಿದೆ
    ಕ್ಷಮಿಸು ನನ್ನ

    ಮುಂದೆ ಇಂತಹ ದುಡುಕು
    ನಾನೆಂದು ಮಾಡುವೆನೆ
    ಈ ಬಾರಿ ನೀ ಮರೆತು
    ಒಲಿದು ಬಾ ಒಮ್ಮೆ

    ಬ್ರಹ್ಮಾಸ್ತ್ರ

    ಅಂದೊಮ್ಮೆ ನಮ್ಮ ರವಿ ಎಡೆ ಬಿಡದೆ ಅಳುತಿದ್ದ
    ಮೂಗು ಕಣ್ಣಲೆಲ್ಲ ನೀರು ಸುರಿಸುತ್ತಿದ್ದ
    ಒಂದಾದ ಮೇಲೊಂದು ರಾಗ ಆಲಾಪಿಸಿದ
    ರಾಗ ಮಾತ್ರವೆ ಅವನದು ತಾಳವೆಲ್ಲವು ನಂದು
    ಬತ್ತಳಿಕೆಯಾಳಗಿದ್ದ ಬಾಣವೆಲ್ಲವು ಬರಿದು

    ಚ್ಯೂಯಿಂಗ್‌ ಗಮ್ಮು, ಬಬಲ್‌ ಗಮ್ಮು, ಐಸ್ಕಿೃೕಮು, ಕ್ಯಾಂಡಿ,
    ಕೋಕು, ಚಾಕ್ಲೇಟ್‌ ಮಿಲ್ಕು, ಪೆಪ್ಸಿ , ಸಿಹಿ ತಿಂಡಿ,
    ರೋಲರ್‌ ಕೋಸ್ಟರ್‌ ರೈಡು, ಶಾಪಿಂಗ್‌ ಮಾಲಿನ ಟೂರು,
    ಪಿಜ್ಜಾ, ಸ್ಪೆಗೆಟ್ಟಿ, ಮ್ಯಾಕ್ಡೊನಾಲ್ಡಿನ ಕಾರು,
    ಎಲ್ಲ ಆಸೆಗೆ, ಲಂಚಕೆ ರವಿ ಸ್ಥಿತಪ್ರಜ್ಞ

    ದೊಡ್ಡ ಮಾನ್ಸ್ಟರ್‌ ಬಂದು ತಿಂದು ತೇಗುವೆನೆಂದೆ
    ಡೈನೊಸಾರಸ್‌ ಬಂದು ನುಂಗಿ ಹಾಕುವುದೆಂದೆ
    ಬಿಗ್‌ ಬ್ಯಾಡ್‌ ಬೇರ್‌ ಬಂದು ಕತ್ತು ಹಿಚುಕುವುದೆಂದೆ
    ಫ್ರಾಂಕೈನ್ಸ್ಟೈನ್‌ ಬೆಂಕಿಯಾಗಿ ಸುಟ್ಟು ಹಾಕುವನೆಂದೆ
    ಹೇಳಿದೆಚ್ಚರಿಕೆಯನೆಲ್ಲ ಕೇಳುತ್ತಲೇ ಇದ್ದ
    ಅಳುವಿಗಂಕುಶ ಕೊಡದೆ ಕಣ್ಣೀರು ಹರಿಸುತ್ತಿದ್ದ
    ಆಸೆ, ಆಮಿಷ, ಬೆದರಿಕೆಗಳಿಗೆ ಬಗ್ಗದೆ ಅತ್ತ

    ಕೊಟ್ಟಕೊನೆಗೊಂದು ಐಡಿಯಾ ಹೊಳೆಯಿತು ನೋಡಿ,
    ಬತ್ತಳಿಕೆಯಲ್ಲಿದ್ದ ಬ್ರಹ್ಮಾಸ್ತ್ರ ಹುಡುಕಾಡಿ
    ‘ಒಂದು ವರ್ಷವು ನಿನ್ನ ಇಂಡಿಯಾಕ್ಕೆ ಕಳಿಸುವೆ’ನೆಂದೆ
    ಹೇಳಿ ಮುಗಿಸುವ ಮೊದಲೆ ಕಣ್ಣೀರು ನಿಂತಿತ್ತು
    ಸ್ವರವಡಗಿ ಮುಖದಲ್ಲಿ ಪ್ರೇತಕಳೆ ಬಂದಿತ್ತು
    ಬೆದರಿಕೆಯು ನೆಲಸಿತ್ತು , ‘ಮಮ್ಮಿ, ನೀನು ಹೇಳಿದ ಮಾತು
    ಎಂದೆಂದು ಕೇಳುವೆನು, ನಿನ್ನ ಮನ ನೋಯಿಸೆನು’
    ಎಂದು ಭಾಷೆಯನಿತ್ತ , ರವಿ, ಕಣ್ಣೀರ ಒರೆಸುತ್ತ,
    ಸಂಗೀತ ನಿಲ್ಲಿಸಿದ, ಶಾಂತತೆಯ ಮಂದಹಾಸವ ತಂದ
    ಅಂದಿನಾಮೇಲೆ ರವಿ, ಸಂಪೂರ್ಣ ಬದಲಾದ!

    ದ್ವಂದ್ವತೆ

    ಹುಟ್ಟಿದೂರನ್ನು ಬಿಟ್ಟು
    ಸುಖ ಜೀವನರಸಿ
    ಭಿನ್ನ ಸಂಸ್ಕೃತಿಯ ಹೊಸ
    ಪರಿಸರಕೆ ಬಂದು

    ದಿನನಿತ್ಯ ದ್ವಂದ್ವತೆಯ
    ಸಂಕೀರ್ಣ ತುಮುಲದಲಿ
    ಮಣ್ಣವಾಸನೆ ಮರೆಯೆ
    ಹೋರಾಡುತಿಹೆವು।।

    ಪೂರ್ವ ಪಶ್ಚಿಮವೆರಡ
    ಸಿಹಿಬೇಕು, ಕಹಿಬೇಡ
    ನಲಿವು ಮಾತ್ರವೆ ಇರಲಿ
    ನೋವು ಬೇಡ

    ತೊರೆದೂರ ಸಂಸ್ಕೃತಿಯ
    ಬಂದೂರ ಸಿರಿ ಸುಖವು
    ಬೆರೆತ, ಸುಮಧುರ
    ಪಾಕದೌತಣವು ಬೇಕು ।।

    ಭರತನಾಟ್ಯವು ಬೇಕು
    ಬ್ಯಾಲೆಯಂತೂ ಬೇಕು
    ಕ್ಲಾರಿನೆಟ್‌, ಈಜು ಸ್ಕೀ
    ಸ್ಕೇಟಿಂಗು ಬೇಕು

    ಒಂದೊಮ್ಮೆ ಭಾರತಕೆ
    ಮರಳಬೇಕಾದಲ್ಲಿ
    ಕನ್ನಡದಿ ಬರೆವ
    ಓದುವ ಜ್ಞಾನ ಬೇಕು।।

    ಜರಿಲಂಗ, ರವಕೆ
    ಉದ್ದನೆ ಜಡೆಯು ಇಡಬೇಕು
    ಹಣೆಗೆ ಕುಂಕುಮ
    ತಿಲಕ ದಿನವು ಬೇಕು

    ಭಕ್ತಿ ಗೀತೆಯ ಕಲಿತು
    ಹಾಡಿ ಹರಸಲು ಬೇಕು
    ಸ್ಪೆಲ್ಲಿಂಗ್‌ ಬೀ, ಫ್ರೆಂಚ್‌ ಭಾಷೆ
    ಪಾಂಡಿತ್ಯ ಬೇಕು ।।

    ಇಡ್ಳಿ, ದೋಸೆಯ ರುಚಿಯು
    ಪೂರಿ, ಭಾತಿನ ಸವಿಯು
    ಅನ್ನ ಸಾರಿನ ಊಟ
    ಅಭ್ಯಾಸ ಬೇಕು

    ಇಲ್ಲೆ ಇರಬೇಕಾದಲ್ಲಿ
    ರಾವಿಯೋಲಿ, ಸ್ಪಗೆಟಿರುಚಿ
    ಪ್ಯಾನ್‌ಕೇಕು, ಪಾಪ್‌ ಟಾರ್ಟು
    ಸಾಲಡ್ಡು ಬೇಕು।।

    ದ್ವಂದ್ವತೆಯ ಸುಳಿಯಲ್ಲಿ
    ಪರಿತಪಿಸುತಿರುವಾಗ
    ಸಂಕುಚಿತ ಸ್ವಾರ್ಥತೆಯ
    ಆಸೆ ಆಕಾಂಕ್ಷೆ

    ಎಳೆ ಜೀವಿಗಳ ಮುಗ್ಧ
    ವಿಕಸಿಸುವ ಮನದಲ್ಲಿ
    ತುಮುಲ, ಸಂಕೀರ್ಣ
    ಸಂಘರ್ಷ ತರದಿರಲಿ ।।

    ಕರಗುವ ಕಷಾಯವೋ, ಬೆರೆಯದ ಕೋಸುಂಬರಿಯೋ
    ಎರಡರಲ್ಲೊಂದು ರುಚಿ ಇರಲು ಅದೇ ಒಳಿತು
    ಎರಡು ದೋಣಿಯಲಿ ಕಾಲಿಟ್ಟು ಪಯಣಿಸಿದಂತೆ
    ಚರಗುರಿಯ ಬಾಳು ದಿನ ನಿತ್ಯ ಹೋರಾಟ ।।

    ಸ್ಪಂದನ

    ಜನುಮ ಬಂದಾಗ ಸಂಕೇತ ಸ್ಪಂದನದಿಂದ
    ಜೀವನದ ಮುಕ್ತಿ ಕೊನೆಯುಸಿರ ಸ್ಪಂದನದಿಂದ
    ನಡುವೆ ನಡೆದಿದೆ ನಿರಂತರ ಹೃದಯ- ಸ್ಪಂದನ
    ಮಿಡಿವ ಚೇತನ ಶಕ್ತಿ ಸಂಸಾರ- ಬಂಧನ !

    ಹೃದಯ- ಸ್ಪಂದನ ನಿರಂತರ ನಿತ್ಯ ನಡೆದಿಹುದು
    ಮನದ ಸ್ಪಂದನ ಅನಿಯತ ಅಂತರ
    ಜಗದ ಜೀವಿಗಳ ಉನ್ಮೇಶ ಉಲ್ಲಾಸಗಳ
    ಮಿಡಿತದ ಪ್ರಧ್ವನಿಯೇ ಮನ-ಸ್ಪಂದನ

    ಮನಸು ಹೃದಯಗಳೆರಡ ಮಿಡಿತದಾರ್ತತೆಯು
    ಕದಡಿ ಸಮತೋಲನವ ಕೆಡಿಸುತಿಹುದು
    ನಿಯತ ಸ್ಪಂದನದಿಂದ ಮನಸು ಹೃದಯಗಳೆರಡು
    ಅರಿತು ಪರಸ್ಪರ ಬೆರೆತು ಮಿಡಿಯುತಿಹುದು.

    ಮನದ ಸ್ಪಂದನ ಬೇರೆ, ಹೃದಯ ಸ್ಪಂದನ ಬೇರೆ
    ಎನುವ ವಾದಕೆ ತಿರುಳು, ಸಾಕ್ಷಿ ಎಲ್ಲಿ
    ಜನುಮ ಮೃತ್ಯುವಿನ ನಡುವಿನ ಜೀವ ನಡೆವುದಕೆ
    ಎದೆ ಮನಗಳೆರಡ ಮಿಡಿತದ ಸತ್ಯವಿಲ್ಲಿ.


    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more