• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಟ್‌ ಕಾಂ ಕಂಪೆನಿಗಳಲ್ಲಿ ಕೆಲಸ ಮಾಡಲು ಬಂದ ಜೋಡಿ- ಬಿಂದು (.) ಕಾಮ ಮತ್ತು ಚುಕ್ಕಿ(.) ವಾಣಿ (ವಾಣಿಜ್ಯ ಶಬ್ದದ ತುಂಡು) ಇವರ ಆರು ವರ್ಷಗಳ ಮಧುಚಂದ್ರ ಮುಗಿದಿದೆ. ಮುಂದೇನು?

By Staff
|

ಅಯ್ಯೋ ಮುಗಿಯಿತೇ ಮಧುಚಂದ್ರ?

ಡಾಟ್‌ ಕಾಂ ಕಂಪೆನಿಗಳಲ್ಲಿ ಕೆಲಸ ಮಾಡಲು ಬಂದ ಜೋಡಿ- ಬಿಂದು (.) ಕಾಮ ಮತ್ತು ಚುಕ್ಕಿ(.) ವಾಣಿ (ವಾಣಿಜ್ಯ ಶಬ್ದದ ತುಂಡು) ಇವರ ಆರು ವರ್ಷಗಳ ಮಧುಚಂದ್ರ ಮುಗಿದಿದೆ. ಮುಂದೇನು?

*ಮೈ ಶ್ರೀ ನಟರಾಜ

ಅವನು ಒಬ್ಬ ಬಿಂದು ಕಾಮ
ಅವನ ಹೆಸರು ರಂಗಧಾಮ
ಅವಳೊಬ್ಬಳು ಚುಕ್ಕಿ ವಾಣಿ
ವಧೂವರರ ಅನ್ವೇಷಣೆಗೆ
ಜಾಹೀರಾತು ಪ್ರಜಾವಾಣಿ !
ಮೊದಲ ಭೇಟಿಯಲ್ಲೇ ವರಿಸಿ
ಬೆರಳಿಗುಂಗುರವ ತೊಡಿಸಿ
ಕೊರಳಿನಲ್ಲಿ ಮಾಲೆ ಧರಿಸಿ
ರಿಜಿಸ್ಟ್ರಾರ ಬಂದು ಹರಸಿ
ಮಂತ್ರವಿಲ್ಲ ಓಲಗವಿಲ್ಲ
ಜೊತೆಯಾದರು ಜಾಣ -ಜಾಣಿ
ಗಣಕ ಸಾಕ್ಷಿಯಾಗಿ ವರಿಸಿ
ಆದರಂದು ರಾಜಾ ರಾಣಿ !

ಮಧುರ ಮಿಲನದಾ ಮತ್ತು
ತುಟಿಗೆ ಇರಿಸಿದಾ ಮುತ್ತು
ಸುಖಪಡುವ ಈ ಹೊತ್ತು
(ಅದಕ್ಕೆಲ್ಲಿದೆ ಪುರುಸೊತ್ತು ?)
ಕಾನ್ಸೋಲೇಟಿನ ಕಟ್ಟೆ ಏರಿ
ಮೀಸಲಿಟ್ಟ ವೀಸಾ ಕೋರಿ
ಯಾರಿಗುಂಟು ಯಾರಿಗಿಲ್ಲ
ಎಚ್‌-ಒನ್‌ ಎಂದರೆ ಹೆಚ್ಚೇನಲ್ಲ
ಹೈಟೆಕ್ಕಿನ ಹಸಿರು ಕೇಂದ್ರ
ಅವಳೇ ಶಚಿ, ಇವನೇ ಇಂದ್ರ
ಆರು ವರ್ಷ ಆರದಂಥ
ಅಪರೂಪದ ಮಧುಚಂದ್ರ
ಸಾರಿಕೊಂಡು ಕುಣಿದರು
ಅಮೃತವರ್ಷಕೆ ಜಿಗಿದರು
‘ಈ’ ಸಾಮ್ರಾಜ್ಯದ ಜಾಲಕೆ ಸಿಕ್ಕಿ
ಚುಕ್ಕಿಯ ಬಲದಲಿ ಸೊಕ್ಕಿದರು
ಬಂಧು ಮಿತ್ರರಿಗೆ ತಪ್ಪದೆ
ಪ್ರತಿದಿನ ಬಾನಂಚೆಯ
ಕಳಿಸುತ ಹಿಗ್ಗಿದರು

ತೃತೀಯ ವಿಶ್ವದ ಭಾರತವೆಲ್ಲಿ ?
ಮಾಹಿತಿ-ತಂತ್ರದ ಅಮೆರಿಕೆ ಎಲ್ಲಿ ?
ಎತ್ತಣ ಗಣಕ ? ಎತ್ತಣ ಬೆನಕ ?
ಇಂಥಾ ಅವಕಾಶ ಮತ್ತಿನ್ನೆಲ್ಲಿ ?
ಇಲ್ಲದ ಶೂನ್ಯ- ಸಮಸ್ಯೆಯ ತಂದು





































ಕೋಟಿಗಟ್ಟಲೆ ಡಾಲರ್‌ ಸಂದು
ಹುಚ್ಚು ಮುಂಡೆ ಮದುವೆಯಲುಂಡವರಿಂದು
ಜಾಣರ ಗುಂಪಿಗೆ ಸೇರಿದರು!

ಎಂದೋ ಅಳಿಸಿದ ಅ- ಆ- ಇ- ಈ
ಗಣಕದ ತೆರೆಯಲಿ ಸುಲಭದಿ ಸಿಕ್ಕಿ
ಕಾಗುಣಿತಕೆ ಬಲು ಕಕ್ಕಾ ಬಿಕ್ಕಿ
ಹಾವಿನ ಬೆಟ್ಟದ ವಾಸುಗೆ ದಕ್ಕಿ
ಬರಹ ಬೊಮ್ಮದಲಿ ಪ್ರೀತಿಯು ಉಕ್ಕಿ
ಕನ್ನಡದಲೀ ವೀ- ಅಂಚೆಯನಿಕ್ಕಿ
ದೂರವ ಕುಗ್ಗಿಸಿ ಹಾರುತ ಹಕ್ಕಿ
ಹೊಡೆಯಿತು ಬಾನಲಿ ಮೋಡಕೆ ಡಿಕ್ಕಿ

ಅಪ್ಪ- ಅಮ್ಮರಿಗೂ ಅಜ್ಜಿ - ಅಜ್ಜರಿಗೂ
ಮಾಡಿಸಿಬಿಟ್ಟರು ಅಮೆರಿಕಾ ಯಾತ್ರೆ
ಅಪರ ವಯಸ್ಕರ ಜಿಗಿ ಜಿಗಿ ಜಾತ್ರೆ
ಮನೆಯಲಿ ಸ್ಪೈನ್‌- ಲೆಸ್‌ ಸ್ಟೀಲಿನ ಪಾತ್ರೆ
ಅಮೆರಿಕಾವೆಂಬುದು ಅಡುಗೆಮನೆಯೋ
ಭಾರತವೇ ತಮ್ಮ ಬಚ್ಚಲು ಮನೆಯೋ
ಅಲ್ಲಿಯ ಕಂಪೆನಿ ಇಲ್ಲಿಯ ಸಂಬಳ
ಹಾರಾಡಿದರು ಹಗಲೂ ರಾತ್ರೆ

ಬೆಂಗಳೂರಿನ ಗಲ್ಲಿಗಳಲ್ಲಿ
ಸಾತೂ ಪಾತೂ ಸೇರಿದರಂತೂ
ಮುಗಿಯದ ಮಕ್ಕಳ ಮರಿಗಳ ಮಾತು
ಬಲು ಸೊಗಸಿನ ಸ್ಯಾನ್ಹೋಸೆಗೆ ಬಂತು
ಕ್ಯಾಲಿಫೋರ್ನಿಯದ ಮೂಲೆಗಳಲ್ಲಿ
ಘಂಘಂ ಉಡುಪಿಯ ದೋಸೆಯ ತೂತು !
ಸಿಲುಕಿನ ಕಣಿವೆಯ ಕೂಟಗಳಲ್ಲಿ
ಎಳ್ಳು ಪುಡಿ ಹುಳಿಯೆನ್ನದ ಗೊಜ್ಜು
ಗುಜರಾತೀ ಗ್ರೋಸರಿ ಸ್ಟೋರುಗಳಲ್ಲೂ
ಹಲಸಿನ ಹಪ್ಪಳ ಸಂಡಿಗೆ ಸಜ್ಜು
ಮಾಹಿತಿ ತಂತ್ರದ ಬೈಠಕ್ಕಿನಲ್ಲಿ
ಚರ್ಚೆಗಳೆಲ್ಲ ಕನ್ನಡದಲ್ಲಿ
ಕಣಿವೆಯ ಸಂದಿ-ಗೊಂದಿಗಳಲ್ಲಿ
ನಡೆವರು ಸಲ್ವಾರ್‌ ಕಮೀಜಿನಲ್ಲಿ

ಇಂದು ಕಿರಣದಿ ಮಿಂದವರೆಲ್ಲ
ಸೂರ್ಯನ ತಾಪವ ಮರೆವಂತಿಲ್ಲ
ತಿಂಗಳ ಹುಣ್ಣಿಮೆ ಬಂದಾಗಲೆಲ್ಲ
ಸತ್ಯದೇವನನು ಪೂಜಿಪರಲ್ಲಾ
ಪ್ರಸಾದ ಭಕ್ಷಿಸಿ ಕಥೆಯು ಕೇಳಿದರೂ
ಕಾಲವ ಹಿಡಿದು ನಿಲ್ಲಿಸುವರಿಲ್ಲ
ಆರೇ ವರ್ಷದ ಎಚ್‌- ಒನ್‌ ವೀಸಾ
ಕಳೆದೇ ಹೋಯಿತೇ ಎಂಥಾ ಮೋಸಾ ?
‘ಐಪೀಓ’ ಮಾಡುವ ಆಸೆಯ ತೋರಿಸಿ
ಬಿಂದುಕಾಮರಿಗೆ ತಂದರೆ ತ್ರಾಸ ?

ಗೋರನು ಜಾರಿ ಹಿಡಿಯಲು ದಾರಿ
ಬುಷ್ಷನ ಗೆಲುವನು ಜಡ್ಜಿಯು ಸಾರಿ
ತೀರಿ ಹೋಯಿತೇ ಶುಭ ಶುಕ್ಲ ಪಕ್ಷ ?
ಬಂದಿತೆ ಕರಾಳ ರಿಪಬ್ಲಿಕನ್‌ ಪಕ್ಷ ?

ಮಾಹಿತಿ ತಂತ್ರದ ಮೊದಲಾಳುಗಳೇ
ಹಿಂದೊಮ್ಮೆ ನಿಮಗಿದ್ದ ಬೆಲೆ
‘ಈ ’ ಸಾಮ್ರಾಜ್ಯದ ನೆಲೆ
ಇಂದಿಲ್ಲವೇಕೆಂದು ಮರುಗದಿರಿ
ಅರಸಿಬಂದ ಕೆಲಸಗಳ ದಿವಸಗಳೆಲ್ಲಿ ?
ಕರೆದು ಕೈ ತುಂಬಿದ ಧಣಿಗಳೆಲ್ಲಿ ?
ಎಂದು ಕೇಳದಿರಿ ಕೊರಗದಿರಿ
ಕೆಲಸ ಕೈ ಬಿಟ್ಟು ಧಣಿಯು ಕೈ ಕೊಟ್ಟು
(ಇಂಥಾ ಎಡವಟ್ಟಿನ ನಡುವೆ
ಇದ್ದಕ್ಕಿದ್ದಂತೆ ನೆನಪಾಗುವುದು
ಅಮ್ಮನ ಕೈಯಿನ ರಾಗೀ ಹುರಿಹಿಟ್ಟು )
ಹಿಂದಿರುಗಲಾಗದು ಗತಿಗೆಟ್ಟು
ಅಲ್ಲೇನಿದೆ ಬರಿ ಮುಗ್ಗಟ್ಟು
ವಕೀಲನೊಬ್ಬನಿಗೆ ದಕ್ಷಿಣೆ ಕೊಟ್ಟು
ಅರ್ಜಿ ಗುಜರಾಯಿಸಿ ಇನ್ನಿಪ್ಪಟ್ಟು
ಪಚ್ಚೆ-ಪರವಾನಗಿಯು ಬಿಕ್ಕಟ್ಟು
ಸಿಕ್ಕಿದರೂ ಸಿಗಬಹುದು
ಟೆಂಪರರಿ ಪರ್ಮಿಟ್ಟು !





































































ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more