• search

ನಿಮ್ಮವಳ ಕೋಶದಲ್ಲಿ ಯಾವ ಪುಟ ಹರಿದಿಹುದು?

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    • ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
    Shikaripura Harihareshwaraಕೆಲವು ಗ್ರಂಥಗಳಂತು ಸಿಗುವುದೇ ಬಲು ಕಷ್ಟ ;
    ಹುಡುಕಿ ಪಡೆದರು ನಮಗೆ ಮೊದಲಿದ್ದುದೇನೇ ಶ್ರೇಷ್ಠ !
    ಕಳೆಯಿತೆನೆ ಅದು, ಆಯ್ತು, ತುಂಬಲಾರದ ನಷ್ಟ,
    ಅಕಟಕಟಾ, ಹರ ಹರಾ, ಶಿವ ಶಿವಾ,
    ರಾಮ ರಾಮಾ, ಸರ್ವ ನಾಶ-
    ನನ್ನವಳ ಬಳಿ ಒಂದು ಅಂಥದಿದೆ, ಅದೇ ಅವಳ ‘ಕೋಶ’!
    ಅವಳ ವಿಶೇಷ ವಿಷಯ ವಿಶ್ವ‘ಕೋಶ’!

    ಅವಳಮ್ಮ, ಅಪ್ಪ, ಅತ್ತೆಯರು, ಬೆಳೆದೊಲಿದ ಗೆಳತಿಯರು,
    ತಮ್ಮೆಲ್ಲರನುಭವದ ‘ಅ, ಆ’ ಇಂದ ‘ಸ, ಹ, ಳ’ಗಳನ್ನೆಲ್ಲ,
    ಏಳು-ಬೀಳುಗಳ್ನ, ನಡೆ-ನುಡಿಯ ನೇರ ಓರೆಕೋರೆಗಳನ್ನ,
    ಗುರಿ ಮಾರ್ಗ ಧೋರಣೆಯ ಒ ಹೊರಗ ತಿರುಳನ್ನ, ಹುರುಳನ್ನ,
    ಅಕ್ಷರಾನುಕ್ರಮವಾಗಿ ಭಟ್ಟಿ ಇಳಿಸಿದ ಗ್ರಂಥ,
    ಹೊತ್ತಗೆ (= ಪುಸ್ತಕ, ಸಂಪುಟ, ಅಚ್ಚಾದ ಬರಹದ ಕಟ್ಟು),
    ಹೊಸಿಲು ದಾಟುವ ವೇಳೆ, ಅವರು ಇವಳಿಗೆ ಇತ್ತಂಥ,
    ಇವಳ ಕಣ್ಣಿನ ಪಾಪೆ, ಮನೆಯ ನಂದಾದೀಪ;
    ಏನು ಏನಿದರಕರ್ಥ? ಬೇರೆ ಬೇರೇನಿದೆ ಬಟ್ಟೆ (=ಹಾದಿ, ದಾರಿ),
    ಸಮಂಜಸವೇನು, ಸಮರ್ಪಕ, ಸಮೀಚೀನವದೇನು?
    ಸಮಾನ ಪರ್ಯಾಯ ವಿಶಿಷ್ಟ ಸೂಕ್ಷ್ಮ ಸೂಲಾರ್ಥ
    ಪದಗಳನು ಹುಡುಕಲೆನೆ ಇದೆ, ಅದೆ ನನ್ನವಳ ಕೋಶ!

    ಮೊನ್ನೆ ಕಣ್ಣಾಡಿಸಿದಾಗ, ಸಿಡಿಲು ಹೊಡೆಯಿತು, ಕುಸಿದೆ;
    ಕೆಲವು ಪುಟಗಳೇ ಇಲ್ಲ! ಪುಟ-ಪುಟಗಳೇ ಇಲ್ಲ !!
    ಓ ನಿಲ್ಲಿ ! ನೋಡಿದಿರಾ? ಏನು ಏನಿದು ಏನು?
    ‘ಆಗ’-ಕ್ಕೆ ನಿಂತಿದೆ, ಕೋಶ ! ‘ಆಗಲಿ’- ಎಂಬುದೇ ಇಲ್ಲ!

    ‘ಉತ್ತಮ’ ಸ್ತ್ರೀ ಅವಳು ನಿಜ; ‘ಮಧ್ಯಮ ಪುರುಷ’ವೇ ನಾಸ್ತಿ!
    ‘ನಾನು ನನ್ನನ್ನು ನನ್ನಿಂದ ನನಗೆ ನನ್ನದೆಸೆಯಿಂದ ನನ್ನ ನನ್ನಲ್ಲಿ’ಯೇನೇ-
    ಹೀಗೆ ಉಳಿದ ಸರ್ವಕ್ಕೂ ಪಂಗನಾಮವ ಹಾಕಿ,
    ತಾನೆ ತಾನಾಗುವುದೇ, ಮಾಯವೇ ‘ನೀವು’, ಕಾವು?
    ಕಣ್ಣೆದುರ ‘ಕೌಶಿಕ’ನಿಗೋ ನಾಮ, ‘ಚೆನ್ನ’ ಕಾಣದಿದ್ದರೂ ಧ್ಯಾನ!
    ಇದು ಭಾರಿ ಅನ್ಯಾಯ! ಹರಿದ ಪುಟ ಹುಡುಕುತಿಹೆ;
    ಸಿಕ್ಕೀತೆ? ಗೊತ್ತಿಲ್ಲ. ಸಿಕ್ಕ ಪಕ್ಷಕೆ, ಸಿಗುವುದಾದರೆ, ಸ್ವಾಮೀ,
    ಸಿಕ್ಕಲು, ಸಿಕ್ಕಿದರೆ, ಬಿಡುವೆನೆ ನಾನು?-
    ಸಿಕ್ಕೊಡನೆ ಅಲ್ಲಲ್ಲಿ ಮೆಲ್ಲನಂಟಿಸುವೆನು!

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more