• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದೇಶಕ್ಕೆ ಬಂದವರು ಕೆಲವರಿಗೆ ಇದು ಸಂತೆ :

By Staff
|

ವಿದೇಶಕ್ಕೆ ಬಂದವರು

ಕೆಲವರಿಗೆ ಇದು ಸಂತೆ :

ಮನೆ ತುಂಬ ಸರಕು ; ಆದಷ್ಟು ತಂದು
ಅಲ್ಲಿ ಆಗದ ಎತ್ತರದ ಈ ಬೆಲೆಗಿಲ್ಲಿ
ಮಾರುವುದೆಂದು
ಬಂದವರ ಮನದಾಳದೊಳಗಿನ ಪುಟ್ಟಾಸೆ
ಬಲಿತಾಗ ಹಿರಿದಷ್ಟೆ - ಲಾಭ ಲಾಲಸೆ.
ಇದ್ದದು ಉಪ್ಪು -ಹುಳಿ-ಖಾರದ ಬೆರಕೆ !
ನಾಲ್ಕು ಘಳಿಗೆ ಇದ್ದು ಹೋದೇವು , ಈ ನೆಲಕ್ಕೆ
ಅಂಟಿ ನಿಲ್ಲಲು ಮನಸ್ಸಿಲ್ಲ ;
ಹಾಗೆಂದು ಹೋಗಲೊಲ್ಲ . ಈ ವ್ಯಾಪಾರ
ಕೊಳ್ಳುವವರೆಲ್ಲ ತಳ್ಳಿ ಹೋಗುವವರೆಗೆಂದು ಬಲ್ಲ
ಕುಶಲಮತಿ ಇಲ್ಲಿ ಸಿಗುವುದ ಕೊಂಡು,
ತುಂಬಿ ಬಂದು,
ತಿರುಗಿ ಅವರಿಗೇ ಮಾರುವನಲ್ಲ !
ಕೆರೆಯ ನೀರನು ಕೆರೆಗೆ ಚೆಲ್ಲುವುದೇನು ಬೇಕಿಲ್ಲ .
ಕೈ ಹಿಡಿದ ಅವರದಕಿಂತ
ಕೂಡಿದವರ ಸೆಳೆತಕ್ಕೆ ಮನಸೋತ
ಇವರಿಗೆ ನೆನಪು ಕಾಡೀತು -
ಎಳೆಯದು.
















ಕೆಲವರಿಗೆ ಇದು ಜಾತ್ರೆ:

ಅವಕಾಶಗಳ ಅಮರಾವತಿಯಲ್ಲಿ ಆರ್ಥಿಕೋತ್ಸವ ;
ಮುಂಚೆಯೇ ಕೊಂಚ ಸಿದ್ಧತೆ ಮಾಡಿಕೊಂಡವರು
ಯಾರೂ ಬರಬಹುದು ಜಾತ್ರೆಗೆ .
ಉಳ್ಳವನು ಬಲ್ಲಿದನು ತಾನೆಂಬ
ನಂಬಿಕೆ ಹತ್ತಿರದವರಿಗೆ ಹೋಗುವ ಬಯಕೆ.
ಮನೆದೇವರಿಗಿದ್ದೇ ಇದೆ ನಮಸ್ಕಾರ ,
ಹೊತ್ತ ಹರಕೆಯ ದೇವತೆಗೆ ಮಿಗಿಲಾದ ಪುರಸ್ಕಾರ.
ನಾಲ್ಕು ದಿನದೀ ಮೇಳ, ಬಗೆ ಬಗೆಯ
ಸೇವೆ, ಸಾಧನೆ, ಸಿದ್ಧಿಗೆ ಅಕ್ಷಯ ಪಾತ್ರೆ.
ಬೆಳಕಿಗೇ ಬೆಳಕಿನಾರತಿ ಬೆಳಗಿ
ಕಣ್ಣಿಗೊತ್ತಿದವರುಂಟು . ನೂಕು ನುಗ್ಗಲಿಗಂಜಿ,
ಗುಡಿಯ ಹೊರಗೇ ಕಾಯಾಡೆದು,
ಸಿಕ್ಕ ದರ್ಶನ ಸಾಕೆಂದು ಮರಳಿದವರುಂಟು.
ಹೋ ಹೋ ದೇವರು ರಥ ಹತ್ತಿಯಾಯ್ತೆಂದು
ಹುಯಿಲೆದ್ದು , ಜನ ಎತ್ತಿ ಕೈ ಮುಗಿವಾಗ,
ಅತ್ತಿತ್ತ ನೋಡಿ,
ಪಕ್ಕದ ತುಂಬಿದ ಕಳಸದ ಮೇಲೆ
ಕೈಯಾಡಿಸಿದವರೂ ಉಂಟು.
ಕಬ್ಬಿನ ಹಾಲಿನ ಚಪಲ, ಕುದುರೆಗಳೂ ಬಲು ಅಗ್ಗ .
ಕಣ್ಣು , ನೆತ್ತಿ ತಂಪಾಗಿಸುವುದರ ಸುಗ್ಗಿ
ಹಿಗ್ಗಾ ಮುಗ್ಗಿ .
ಮತ್ತೆ ಬರುವಾಸೆಯ ಹೊತ್ತು , ಮರಳುವ ವೇಳೆ
ಬತ್ತಾಸು ಬಣ್ಣದುಣ್ಣೆಯ ಉಡುಗೊರೆಗಾಗಿ
ಪರದಾಟ.
ಇದರ ನೆನಪು ಬೆಳೆದೀತು -
ಕಳೆಯದು .
























ಕೆಲವರಿಗೆ ಇದು ಯಾತ್ರೆ :

ಒಮ್ಮೆಯಾದರೂ ಹೋಗಿ, ನೋಡಿ ಬರುವ ಅಭೀಪ್ಸೆ .
ಸುತ್ತಿ ಬರುವ ಹಂಬಲದವರಿಗೆ ಈ ತೋಟ
ನೋಟದ ಹಸಿ ಬಿಸಿ ರಸದೂಟ.
ಒಲ್ಲದ ಗಂಡನಲ್ಲಿಲ್ಲದ ಕಾವಿನ ನಲ್ಲನಿಗೆ ತಪಿಸಿ
ಬೃಂದಾವನದಲ್ಲೆಲ್ಲ ಅಲೆಯುವ ರಾಧೆಯರು,
‘ನೀವು ಕಾಣಿರೆ, ನೀವು ಕೇಳಿರೆ’ ಚಡಪಡಿಸಿ
ನೆಮ್ಮದಿಯ ಸೌಗಂಧಿಕವು ಬೆನ್ನಟ್ಟಿ ಹೊರಟವರು,
ಅದೂರ- ದೃಷ್ಟಾರರ ಸಂಗಕ್ಕೆ ಕುತ್ತಾಗಿ ಹೆತ್ತಮ್ಮ
ಬೇನೆಯರಿಯದ ಬಂಜೆಯಾದಳೆ ಎಂದು ನೊಂದವರು,
ಗುರು ಬೇಡಿದಾಗಲೆಲ್ಲ ಹೆಬ್ಬರಳನ್ನು ಇತ್ತವರು,
‘ಯಥಾರ್ಥ ಭಾಷಣ ಭೀತ ಚೇತನ’ ರೂ
ಬಂದಾರು.










ಇನ್ನು ಬೆರಳೆಣಿಕೆಯಷ್ಟು ಜನರಿಗೆ,
ಅಲ್ಲಿ ಸಲ್ಲದ, ಇಲ್ಲಿ ಅಂಗರಾಜ್ಯಾಭಿಷೇಕಕ್ಕೆ ಸಂದ
ಸಮರ್ಥ ಸೂತಪುತ್ರರಿಗೆ
ಗೆದ್ದೂ ಬರುವ ಬಾಳ ಹೆಗ್ಗುರಿ.
ಇಂಗಿದ ಸರಸ್ವತಿಯನ್ನರಸಿ ಸಂಗಮದಲ್ಲಲೆತ,
ಇವರ
ಈ ಕಾಶಿಯವರೆಗಿನ ಜೈತ್ರಯಾತ್ರೆ ;
ನಿಂತಲ್ಲಿ ಹೊರೆಗಲ್ಲು , ಅಲ್ಲಲ್ಲಿ ಒರೆಗಲ್ಲು,
ದಿಗ್ವಿಜಯ;
ಸ್ವೀಡನ್ನಿನ ಸರ್ವಜ್ಞ- ಪೀಠ ಹತ್ತುವ ಆಕಾಂಕ್ಷೆ !
ಇವರ ನೆನಪು ಉಳಿದೀತು-
ಅಳಿಯದು.










ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more