ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ

By Staff
|
Google Oneindia Kannada News
  • ಸುಪ್ತದೀಪ್ತಿ, ಕುಪರ್ಟಿನೋ, ಕ್ಯಾಲಿಪೋರ್ನಿಯ.
Happy Deepavali - Send Greetings in Kannadaಯುಗ ಯುಗದ ಕೊಳೆ ಕಳೆಯಲಿದೆಯೋ ಎಂಬಂತೆ-
ಶ್ರೀಕೃಷ್ಣ ಅಭ್ಯಂಗ ಮಾಡಿದನಂತೆ;
ಲೋಕ ಪೀಡಕ ಅಸುರ ನರಕನನು ಸಂಹರಿಸಿ-
ರುಕ್ಮಿಣಿ-ಭಾಮೆಯರ ಸೇವೆ ಪಡೆದನಂತೆ.

ಸುರಪತಿಯ ಮೊರೆ ಕೇಳಿ ಅವತರಿಸಿದನಂತೆ-
ಕಪಟಪಟು ವಟು ರೂಪ ಧರಿಸಿದನಂತೆ ;
ಲೋಕಪ್ರಿಯ ಮಹಾದಾನಿ ಅರಸ ಬಲಿಯನ್ನು-
ಮೂರಡಿಯಲಿ ರಸಾತಳಕಿಳಿಸಿದನಂತೆ.

ಶರಣೆಂದ ಮಹಾಸತಿ ಬೃಂದೆಗೆ ವರನೀಡಿ-
ಶ್ರೀತುಲಸಿಯಾಗಿರಿಸಿ ಹರಸಿದನಂತೆ ;
ಸಾಲು ದೀಪಗಳಲ್ಲಿ ಭಕ್ತಿ ಸಾರವ ಸಾರಿ-
ಕೃತ ಕೃತ್ಯರಾಗಲು ಕರೆ ಕೊಟ್ಟನಂತೆ.

ಗೋಮಾತೆಯ ಮೈತೊಳೆದು ಅರಶಿನ- ಕುಂಕುಮ-
ಹೂಗಳಿಂದಲಂಕರಿಸಿ ಪೂಜಿಸುವರು;
ಭೂದೇವಿ- ಶ್ರೀದೇವಿಯರ ನೆನೆದು ಕೈಮುಗಿದು-
ಪೂರ್ಣಾನುಗ್ರಹ ಬೇಡಿ ನಮಿಸುವರು ಜನರು.

ದೀವಳಿಗೆ ಹಬ್ಬವು ನಕ್ಕು ನಲಿಯುವ ಕಾಲ -
ಹರುಷದಲೆಯೆಲ್ಲೆಡೆಯು ಹರಡಿಕೊಳಲಿ;
ಪುಟ್ಟ ದೀವಿಗೆಯಿಂದ ಲಕ್ಷೋಪಲಕ್ಷ ಕಿಡಿ-
ಬೆಳಕಿನಂದಣವೇರಿ ಜಗ ಬೆಳಗಿ ನಗಲಿ.

ಹಚ್ಚಿರುವ ಹಣತೆಗೆ ಹಗುರವಾಗುವ ಭಾವ-
ಎಣ್ಣೆ ಆರಿ ಬತ್ತಿ ತೀರಿ ವಾಯು ಲೀನ;
ಅಂಗಳದ ಬೆಳಕೊಂದು ವ್ಯೋಮದೀಪವಾಗಲು-
ಮನದಲಿ ಮಿಡಿಯಲಿ ಅಂತರ್ಯಾನ ಧ್ಯಾನ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X