ಬೇ ಏರಿಯಾಕ್ಕೆ ಸ್ವಾಗತ
?ಆಶಾ ಬಾಲಕೃಷ್ಣ ಭಟ್, ಫ್ರೀಮಾಂಟ್, ಕ್ಯಾಲಿಪೋರ್ನಿಯಾ
ಬಾರೋ ಹನುಮಂತ ರಾಯ। Bay area ಕ್ಕೆ । ಬಾರೋ ಹನುಮಂತ ರಾಯ।
ಬಾರೋ ಇಂಗ್ಲಿಶ್ ನನಸುಗಾರನೆ। ಬಾರೋ U.S. ಕನಸುಗಾರನೆ।
ಬಾರೋ ಏರಿ ವಿಮಾನವನ್ನು ಸೇರಲೂ ನೀ S.F.O.- ವನ್ನು।। ಬಾರೋ।। ಪಲ್ಲವಿ।।
ಪದವಿಯೇ ಬೇಕಾಗಿಲ್ಲ । ಗೊತ್ತಿರಲು ಸಾಕು। Java Sap-ಉ ಎಲ್ಲ।
ಬಾರೊ Program ಬಲ್ಲ ಮನುಜನೆ। ಬಾರೋ HOne Visa- ಧಾರನೆ।
ಬಾರೊ ರೊಯ್ಯನೆ ಕಾರು ಓಡಿಸಿ ಪೊಲೀಸರಿಂದ ಟಿಕೆಟ್ಟು ಪಡೆಯಲು ।।ಬಾರೋ।।
ಹಿಡಿಯಲ್ Apartment-ಉ। ತಲೆಯಾಗ ತಿರುಗಿತು। ನೋಡೂತಲೀ Rent-ಉ।
Share-ಉ ಮಾಡಿದರದುವೆ ಗಂಟು। ಸೇರಿಸಿದರೇ ಹಣವು ಉಂಟು।
ಏರಲಲ್ಲಿ ಬ್ಯಾಂಕು Account-ಉ। ಮದ್ವೆಯಾಗಲು ಹುಡುಗಿ ಉಂಟು।।ಬಾರೋ।।
ವಾರಾಕೆರಡೂ ಸಲವಯ್ಯ। ಅಂಚೆಯ। Jank-ಉ Mail-ಊ ಬರೂವುದಯ್ಯ।
Sale-ಉ Paper-ಅ ಮೊದಲೆ ನೋಡುತ। Coupan-ಉ ಗಳ Cut-ಉ ಮಾಡುತ।
ಓಡಿ ಕೂಡಲೆ ಅಂಗಡಿಗೆ ನೀ ದುಡ್ಡು ಉಳಿಸುತ Stock-ಗ್ ಹಾಕಲು।।ಬಾರೋ।।
ತಿಂಡಿಯೋ Pitza ವಯ್ಯ। Weekend-ಉ Party-ಯ ಊಟಾವೆ ಅದುವೇ ಅಯ್ಯಾ।
ಅಡಿಗೆಗಳ್ಳರ ವರವೆ ಹೌದು। ಬಾಯಿ ಚಪಲವು ಏರಬಹುದು।
ತಿಂದು ತೆಪ್ಪಗೆ ಮಲಗಿಕೊಳ್ಳಲು ದಪ್ಪಗಾಗಲು ಗುರುತೆ ತಪ್ಪಲು ।।ಬಾರೋ।।
ಕೆಲಸ ಶಾಶ್ವತವೇನಲ್ಲ । ಇದ್ದರೂ ಇಂದು। ನಾಳೆ ಇರಬೇಕಾಗಿಲ್ಲ।
Lay Off ಪೀಡೆ ಕಾಡಬಹುದು। Green Card ಇದ್ದರೆ ಬದುಕಬಹುದು।
ಕೊಂಡ ಕಾರನು Air Port-ಇ ನಲ್ಲಿ ಬಿಟ್ಟು ಊರನು ಸೇರಬಹುದು।।ಬಾರೋ।।
ಮುಖಪುಟ / ಸಾಹಿತ್ಯ ಸೊಗಡು