ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣಕು ಗೀತೆ : ರಾಜ್ಯೋತ್ಸವ, ತಾಯಿ ರಾಜ್ಯೋತ್ಸವ ನಿನಗೆ...

By Staff
|
Google Oneindia Kannada News

ರಾಜ್ಯೋತ್ಸವಸ್ವಾರ್ಥದೆದುರ ಸಂಚಿನಲ್ಲಿ, ಅಧೋಗತಿಯ ಅಂಚಿನಲ್ಲಿ
ಘಮಘಮಿಸುವ ಲಾಭ ತರುವ ಮಾತಿನ ಮಲ್ಲಿಗೆಯಲ್ಲಿ
ಹೃದಯ ರಹಿತ ಜನರ ಕೈಯ ಚಾಕು ಚೂರಿ ಚೈನಿನಲ್ಲಿ
ರಾಜ್ಯೋತ್ಸವ ನಿನಗೆ ರಾಜ್ಯೋತ್ಸವ, ತಾಯಿ ರಾಜ್ಯೋತ್ಸವ ನಿನಗೆ...

ಕವಿ ಪುಂಗವ ಲೇಖಕರಿಗೆ ಕಲಾಕಾರ ಶಿಲ್ಪಿಗಳಿಗೆ
ಮರಣೋತ್ತರ ಶ್ರದ್ಧಾಂಜಲಿ ಆಳೆತ್ತರ ಗಾಧಿಗೆ ।2 ಸಾರಿ।
ಕಟ್ಟಿಸುತ್ತ ಕೆತ್ತಿಸುತ್ತ ಇದ್ದುದೆಲ್ಲ ಕಬಳಿಸುತ್ತ...
ರಾಜ್ಯೋತ್ಸವ ನಿನಗೆ ರಾಜ್ಯೋತ್ಸವ, ತಾಯಿ ರಾಜ್ಯೋತ್ಸವ ನಿನಗೆ...

ಭಾಷಣಗಳ ಮಾಲೆಯಲ್ಲಿ ಘೋಷಣೆಗಳ ಪಾಶದಲ್ಲಿ
ಪ್ರಾಂತ ಜಾತಿ, ಪಕ್ಷ ಪಂತ ಬೇಧದ ಈ ಕಿಚ್ಚಿನಲ್ಲಿ । 2 ಸಾರಿ ।
ಆಡಂಬರದಾವೃತದ ಮತಿ ಹೀನ ಕೃತಿಗಳಲಿ ...
ರಾಜ್ಯೋತ್ಸವ ನಿನಗೆ ರಾಜ್ಯೋತ್ಸವ, ತಾಯಿ ರಾಜ್ಯೋತ್ಸವ ನಿನಗೆ...

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X