• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|

ಅಮ್ಮ

*ಮಾಯಾ ಹರಪನಹಳ್ಳಿ, ಸಿಲ್ವರ್‌-ಸ್ಪ್ರಿಂಗ್‌, ಮೇರಿ-ಲ್ಯಾಂಡ್‌Maya Harapanahalliದೂರಾದೆಯಾ ನೀನು ಅಮ್ಮ

ಅಗಲಿದೆಯಾ ನೀನು ನಮ್ಮ

ಅರಳಿದೆ ನಿನ್ನ ಒಡಲಲ್ಲಿ ಸುಮವಾಗಿ

ಆಡಿದೆ ನಿನ್ನ ಮಡಿಲಲ್ಲಿ ಮಗುವಾಗಿ

ನಲಿದೆ ನಿನ್ನ ಒಲುಮೆಯಲ್ಲಿ ಚಿಲುಮೆಯಾಗಿ

ಸೂತ್ರ ಒಂದು ಹೆಣೆಯಿತು ಸಂಬಂಧವಾಗಿ

ನಿನ್ನ ಕೈಯಿಂದ ಒಂದು ತುತ್ತು ಮೊಸರನ್ನ

ನನಗಾಯಿತು ಅದುವೆ ಜೀವಕ್ಕೆ ಮೃಷ್ಟಾನ್ನ

ನೀನು ನೀಡಿದ ಒಂದು ಮುತ್ತು ಮುತ್ತಲು

ಋಣವಾಯಿತು ಅದುವೆ ನನ್ನಯ ಸುತ್ತಲು.

ನಿನ್ನ ಪ್ರೀತಿ ಬೆಳೆಸಿತು ಹಿತವಾಗಿ

ನಿನ್ನ ನೀತಿ ನಡೆಸಿತು ಪಥವಾಗಿ

ನಿನ್ನ ಮಾತು ನುಡಿಸಿತು ಮಧುರವಾಗಿ

ನನ್ನ ಮನ ಬಯಸಿತು ನಿರಂತರವಾಗಿ.

ಕಂದ ನಾನು ಇರುವೆ ದೂರದಿ

ಕರೆದೆ ನೀನು ಬಲು ಹರುಷದಿ

ಬರುವೆ ಎಂದು ಹೆಳಿದೆ ಸಂತೋಷದಿ

ಕಾಯದೆ ಹೊರಟೆ ಬಿಟ್ಟು ಜಗವ ಕ್ಷಣದಿ

ನಿನ್ನಯ ಆದರ್ಶ ನಮ್ಮಯ ಜೀವನ

ನಿನ್ನಯ ಆಶಿರ್ವಾದ ನಮ್ಮಯ ಚೇತನ

ನಿನ್ನಯ ಆಸೆಯು ನಮ್ಮಯ ಸ್ಪಂದನ

ನಿನ್ನಯ ನೆನಪು ಸದಾ ಚಿರ ನೂತನ.

ಬಂದ ನನಗೆ ನೀ ನೀಡಿದೆ ಮಮಕಾರ

ನಿನ್ನ ವಾತ್ಸಲ್ಯ ನಮಗೆ ನೀಡಿದೆ ಪುರಸ್ಕಾರ.

ನಿನ್ನ ಮಮತೆ ನಮ್ಮ ಬಾಳಿಗೆ ಸಾಕ್ಷಾತ್ಕಾರ

ಇಂದು ನಿನಗೆ ನನ್ನ ಕೊನೆಯ ನಮಸ್ಕಾರ

ತ್ಯಜಿಸಿ ಹೊದೆಯಾ ನಮ್ಮನ್ನು ನೀನು

ಹರಿಸಿ ಕಣ್ಣೀರಿನ ಕೋಡಿಯಾ ನಾನು

ಭಜಿಸಿ ದೇವರಲ್ಲಿ ಸಿಗಲಿ ಆತ್ಮಕ್ಕೆ ಶಾಂತಿಯು

ಬೆಳಗಲಿ ಎಂದಿಗು ನಿನ್ನ ಹೆಸರಿನ ಕಾಂತಿಯು

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more