ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಾಕ್ಷ !

By Staff
|
Google Oneindia Kannada News

ಕನ್ನಡ ಕಲಿ
*ಕೆ. ವೆಂಕಟಪ್ಪ, ಐತಾಂಡಹಳ್ಳಿ
ಕನ್ನಡ ಕಲಿ ನನ್ನ ಕಂದ।
ಕಲಿತು ಕಲಿಯಾಗು ಚಿನ್ನ।।
ಕನ್ನಡ ನನ್ನ ನುಡಿ ಕಂದ।
ಕಲಿತೆ ನನ್ನಮ್ಮನಿಂದ।।

ನನ್ನಮ್ಮ ನಮ್ಮ ನುಡಿದ।
ಕನ್ನಡ ಭಾಷೆ ಕಂದ।।
ಅವರ ಹಿರಿಯರೂ ನುಡಿದ।
ಕನ್ನಡಮ್ಮನ ನುಡಿಕಂದ।।

ಹರಿದಿಹುದು ರಕ್ತದಲಿ।
ಹರಡಿಹುದು ತನುಮನದಿ।
।ಮರೆಯದೆ ನುಡಿದಲ್ಲಿ ।
ನುಡಿವುದು ಬಾಯ್ತುಂಬಿ।।

ಬಾಯ್ತುಂಬಿ ಬಂದ ನುಡಿ।
ಹರಳಂತೆ ಹೊರಬರಲಿ।।
ಹೊರಬಂದ ಹರಳಿನಲಿ।
ಶೋಭೆಯು ತುಂಬಿರಲಿ।।

ತುಂಬಿದ ಶೋಭೆಯಲಿ।
ಜಗವು ಬೆಳಗುತ್ತಿರಲಿ।।
ಬೆಳಕಾದ ಜಗದಲ್ಲಿ।
ತಾಯ್ಬಾಷೆ ಮೆರೆದಿರಲಿ।।

ಮರೆಯದಿರು ನನಕಂದ।
ನಿನ್ನ ಮನೆತನವನ್ನು।।
ಮರೆತೆಯಾದರೆ ಚಿನ್ನ।।
ಮರೆತಂತೆ ಅಮ್ಮನನು।।

ಅಮ್ಮನ ತವರೂರು।
ಕನ್ನಡದ ನೆಲೆನಾಡು।।
ನಡೆನುಡಿಯ ಇತ್ತೂರು।
ಇರಲೆಂದೂ ಶಾಶ್ವತವು।।

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X