• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುರ್ದಿನದ ನೆನಪು

By Staff
|

*ಕೆ. ವೆಂಕಟಪ್ಪ ಐತಾಂಡಹಳ್ಳಿ,

ಪಾಂಡೇಲ್‌, ಕ್ಯಾಲಿಫೋರ್ನಿಯಾ

World Trade Centre , Now a History...ಸನ್‌ ಎರಡು ಸಾವಿರದ ಒಂದರಲಿ।

ಹನ್ನೊಂದರ ಸೆಪ್ಟಂಬರ್‌ ತಿಂಗಳಲಿ।।

ಮುಂಜಾವಿನ ಮಂಗಳವಾರದಲಿ।

ಹರಿದಾಡಿತು ಸುದ್ದಿ ಲೋಕದಲಿ।।

ನ್ಯೂಯಾರ್ಕ ನಗರದ ಮಧ್ಯದಲಿ।

ಉನ್ನತ ಶಿಖರಗಳೆರಡು।।

ಕುಸಿದಾದವು ನೆಲಸಮ ಕ್ಷಣಗಳಲಿ।।

ಅಧಮರ ಶಕ್ತಿಗೆ ಸಿಕ್ಕು।।

ಮಡಿದರು ಸಾವಿರ ಸಾವಿರ ಜನರು।

ಸರಸರ ಅತ್ತಿತ್ತ ಓಡಾಡಿ।।

ಸಹಾಯ ಬೇಡಿ ಚೀರಾಡಿದರು।

ಸತ್ತರು ಮಣ್ಣಿನ ಅಡಿಯಲಿ ಸಿಕ್ಕಿ।।

ಅನಾಥರಾದರು ಕಂದಮ್ಮಗಳು।

ಹಡೆದವರನು ಅಗಲಿ ಗೋಳಾಡಿ।।

ಚಿಂತೆಯ ಚಿತೆಯು ಕಾಡಿತೆಲ್ಲರನು।

ಕಂಗಾಲಾದರು ಭುವಿಯಲ್ಲಿ ।।

ಭೂಲೋಕವು ಅರಿತು।

ಅಧಮರ ಕೈವಾಡವಿದೆಂದು।।

ಹುಡುಕುಡುಕಿ ತಿಳಿದರು।

ಉಸಾಮಾ ಬಿನ್‌ ಲ್ಯಾಡನ್‌ ಗುಂಪೆಂದು।।

ಸರ್ವರು ಕೂಡಿ ದೇವರನು।

ಬೇಡಿಕೊಂಡರು ಮನತುಂಬಿ।।

ಮಡಿದ ಕುಟುಂಬದ ಎಲ್ಲರಿಗೂ।

ಸುಖಶಾಂತಿಗೌರವ ಲಭಿಸೆಂದು।।

ಅಯೋಗ್ಯರ ಕಾಟ ಭುವಿಯಲ್ಲಿ।

ಯುಗಯುಗಾಂತರದಿ ಕಾಡಿಹುದು।।

ಅರಿತ ಶಕ್ತಿ ಬಲು ರೂಪವನೆತ್ತಿ।

ಜಗವನುಳಿಸಿ ಕಾಪಾಡಿಹುದು।।

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X