ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪಿನ ಒಗ್ಗಟ್ಟು , ದಕ್ಷಿಣ ಏಷ್ಯಾದ ಬಿಕ್ಕಟ್ಟು ?

By Staff
|
Google Oneindia Kannada News

*ಡಾ. ರವಿ ಹರಪನ ಹಳ್ಳಿ, ಸಿಲ್ವರ್‌ ಸ್ಪ್ರಿಂಗ್‌, ಮೇರಿಲ್ಯಾಂಡ್‌

ಯೂರೋಪಿಯನ್‌ ಸಂಘಟನೆ
ಮಹತ್ವದ ಒಂದು ಘಟನೆ
ಬರ್ಲಿನ್‌ ಗೋಡೆಯ ಪತನ
ತಂದಿತೆಲ್ಲರಿಗೆ ಚೇತನ !

ಅದೋ ಆ ಇಂಗ್ಲಿಷ್‌ ಚಾನೆಲ್‌
ಇತ್ತೊಮ್ಮೆ ಕಾಳಗದ ಕೆನಾಲ್‌
ಅದರಡಿಯಲ್ಲಿದೆ ಈಗ ಸುರಂಗ
ವಾಣಿಜ್ಯೋದ್ದಿಮೆಯ ಪ್ರಸಾರಂಗ

ನೋಡಿದಿರಾ ಜರ್ಮನಿಯ ಏಕತ್ವ ?
ಕಂಡಿದಿರಾ ಫ್ರಾನ್ಸಿನ ನಾಯಕತ್ವ ?
ನಾರ್‌ವೇ ಬೆಲ್ಜಿಯಮ್‌ಗಳ ಸಹಭಾಗಿತ್ವ ?
ತಂದವೆಲ್ಲ ಯೂರೋಪಿಗೆ ಮುಖಂಡತ್ವ !

ಹೋದವು ಗಿಲ್ಡರ್‌ ಮತ್ತು ಫ್ರಾಂಕ್‌
ಓಡಿದವು ಡ್ರಾಚ್‌ಮಾ ಮತ್ತು ಮಾರ್ಕ್‌
ಅಳಿದವು ಶಿಲ್ಲಿಂಗ್‌ ಮತ್ತು ಲೀರಾ
ಯುರೋ ಮಾತ್ರ ಶಾಶ್ವತ, ನೋಡಿದಿರಾ !

ಓ, ಅಳುಕುತಿಹ ದಕ್ಷಿಣ ಏಷಿಯಾ
ಏಕೆ ಈ ಭ್ರಮೆಯ ವಿಸ್ಮಯಾ ?
ಏಕೆ ಹಿಂಸೆಯ ಭಯೋತ್ಪಾದನೆ ?
ಏಕಿಲ್ಲ ಅಹಿಂಸೆಯ ಸಂಪಾದನೆ?

ಆಹಾರ ವೇಷ ಭಾವಗಳೊಂದೆ
ಸಾಹಿತ್ಯ ಸಂಸ್ಕೃತಿ ಸಂಗೀತಗಳೊಂದೆ
ಮತ್ಸರ ಕಲಹ ತಿರಸ್ಕಾರವೇಕೆ ?
ಮಾನವ ಧರ್ಮ ಒಂದೇ ಅಲ್ಲವೇಕೆ ?

ನಿಲ್ಲಲಿ ಶ್ರೀಲಂಕೆಯಲ್ಲಿ ದಹನ
ನಿಲ್ಲಲಿ ಅಸಾಮಿಯರ ಅಸಮಾಧಾನ
ನಿಲ್ಲಲಿ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ
ನಿಲ್ಲಲಿ ಸ್ವತಂತ್ರ ಟಿಬೆಟ್ಟಿಗೆ ದಾಳಿ

ಇರಲಿ ನಾಗಾಲ್ಯಾಂಡಿನಲ್ಲಿ ಸ್ನೇಹ ಸಂತೋಷ
ಆಗಲಿ ಸಂದೇಶಭರಿತ ಬಾಂಗ್ಲಾ ದೇಶ
ನಿಲ್ಲಲಿ ಕದನ ಅಳಿಸಲಿ ವೈರತ್ವ
ಮೂಡಲಿ ಹೊಣೆಗಾರಿಕೆಯ ಬಂಧುತ್ವ !

ಭಯೋತ್ಪಾದಕರನ್ನೇ ಬೆದರಿಸೋಣ
ಆತಂಕವಾದಿಗಳನ್ನು ಚದುರಿಸೋಣ
ಶಾಂತಿ ಸ್ವಾತಂತ್ರ್ಯಕ್ಕೆ ಬಂದಿದೆ ಆಪತ್ತು
ಮಾನವೀಯತೆ ಏಳಿಗೆಗೆ ವಿಪತ್ತು !

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X