• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಯುವ ಕತ್ತಿ ಯಾರನ್ನೂ ಕಾಯುವುದಿಲ್ಲಕಾಡಿನ ಕಗ್ಗತ್ತಲಲ್ಲಿ ಮನುಜ ಕುಲ ಹೆಜ್ಜೆ ತಪ್ಪಿದಂಥ ಸಂದರ್ಭದಲ್ಲಿ ಮತ್ತೆ ಬಂದಿದೆ ದೀಪಾವಳಿ. ಭರವಸೆಗಳೆಲ್ಲ ಹುಸಿಯಾದ ವಾಸ್ತವ ಒಂದೆಡೆ, ನಾಳಿನ ಬದುಕಿಗಾಗಿ ಭರವಸೆಗಳಿಗೆ ನೀರುಣಿಸುವ ಬಯಕೆ ಇನ್ನೊಂದೆಡೆ. ಮನುಷ್ಯನ ಬದುಕೆಂದರೆ ಇದೇನೆ ! ಸಾಲು ಸಾಲು ದೀಪಗಳ ದೀಪಾವಳಿ ಮೂಳೆ ಮಾಂಸಗಳ ತಡಿಕೆಯಾಳಗಿನ ಮನುಷ್ಯನನ್ನು ಕಾಣಿಸುವ ಬೆಳಕಾಗಲಿ ಎನ್ನುವುದು ಕವಿಯ ಆಶಯ. ‘ಮಧುಚಂದ್ರ, ಸಿರಿಕೇಂದ್ರ’ ಪುಸ್ತಕ ಪ್ರಸವದ ನಂತರ ಪ್ರತಿಕ್ರಿಯೆಗಳ ಸುಖದಲ್ಲಿರುವ ಮೈ.ಶ್ರೀ.ನಟರಾಜ್‌, ದಟ್ಸ್‌ಕನ್ನಡ ಓದುಗರಿಗೆಂದೇ ಬರೆದ ವಿಶೇಷ ಕವನವಿದು. ಈ ಬೆಳಕಲ್ಲಿ ನಿಮ್ಮ ಮುಖ ಕಾಣುತ್ತಿದೆಯಾ?

By Staff
|

ಕಾಯುವ ಕತ್ತಿ ಯಾರನ್ನೂ ಕಾಯುವುದಿಲ್ಲ

ಕಾಡಿನ ಕಗ್ಗತ್ತಲಲ್ಲಿ ಮನುಜ ಕುಲ ಹೆಜ್ಜೆ ತಪ್ಪಿದಂಥ ಸಂದರ್ಭದಲ್ಲಿ ಮತ್ತೆ ಬಂದಿದೆ ದೀಪಾವಳಿ. ಭರವಸೆಗಳೆಲ್ಲ ಹುಸಿಯಾದ ವಾಸ್ತವ ಒಂದೆಡೆ, ನಾಳಿನ ಬದುಕಿಗಾಗಿ ಭರವಸೆಗಳಿಗೆ ನೀರುಣಿಸುವ ಬಯಕೆ ಇನ್ನೊಂದೆಡೆ. ಮನುಷ್ಯನ ಬದುಕೆಂದರೆ ಇದೇನೆ ! ಸಾಲು ಸಾಲು ದೀಪಗಳ ದೀಪಾವಳಿ ಮೂಳೆ ಮಾಂಸಗಳ ತಡಿಕೆಯಾಳಗಿನ ಮನುಷ್ಯನನ್ನು ಕಾಣಿಸುವ ಬೆಳಕಾಗಲಿ ಎನ್ನುವುದು ಕವಿಯ ಆಶಯ. ‘ಮಧುಚಂದ್ರ, ಸಿರಿಕೇಂದ್ರ’ ಪುಸ್ತಕ ಪ್ರಸವದ ನಂತರ ಪ್ರತಿಕ್ರಿಯೆಗಳ ಸುಖದಲ್ಲಿರುವ ಮೈ.ಶ್ರೀ.ನಟರಾಜ್‌, ದಟ್ಸ್‌ಕನ್ನಡ ಓದುಗರಿಗೆಂದೇ ಬರೆದ ವಿಶೇಷ ಕವನವಿದು. ಈ ಬೆಳಕಲ್ಲಿ ನಿಮ್ಮ ಮುಖ ಕಾಣುತ್ತಿದೆಯಾ?

ನವರಾತ್ರಿಯಿಂದ ದೀಪಾವಳಿಗೆ

*ಡಾ. ಮೈ. ಶ್ರೀ. ನಟರಾಜ, ಗೈಥರ್ಸ್‌ ಬರ್ಗ್‌, ಮೇರೀಲ್ಯಾಂಡ್‌Dr. M.S. Nataraj, Gaithersburgದೀಪ ಹಚ್ಚುತ್ತೇನೆ ಕೈಯ್ಯ ಮುಗಿಯುತ್ತೇನೆ

ಬೆಳಕ ಚೆಲ್ಲೋ ಎಂದು ಬೇಡುತ್ತೇನೆ

ಅರೆಘಳಿಗೆ ಬೆಳಕ ಕಂಡು ಹಿಗ್ಗುತ್ತೇನೆ

ದೀಪ ಆರಿ ಅಮಾವಾಸ್ಯೆ ಉಳಿಯುತ್ತದೆ

ಕತ್ತಲು ತೊಲಗಲಿ ಎಂದು ಮೊರೆ ಇಟ್ಟರೂ

ಕತ್ತಲು ಮಾತ್ರ ತೊಲಗುವುದಿಲ್ಲ

ಒಂದರ ಮೇಲೊಂದರಂತೆ ಬೇಡಿಕೆಗಳ

ಭಾರೀ ಪಟ್ಟಿ ಸಿದ್ಧಪಡಿಸುತ್ತೇನೆ

ದೀಪದ ಮುಂದಿಟ್ಟು ಕೈಮುಗಿದು

ಮತ್ತೆ ಮತ್ತೆ ಬೇಡುತ್ತೇನೆ

ಮಾತು ಕೇಳದ ಮಕ್ಕಳು ಹುಟ್ಟದಿರಲಿ

ಸೋತು ಹೋಗದ ದ್ವೇಷ ಪಟ್ಟು ಬಿಡಲಿ

ಶಕ್ತರು ಅಶಕ್ತರ ಮೇಲೆ ಧಾಳಿ ಮಾಡದಿರಲಿ

ಮುಗ್ಧ ಬಾಲೆಯರು ಸಿಡಿದು ಚೂರಾಗದಿರಲಿ

ಪೂಜೆಗೆ ಹೋದ ಭಕ್ತರು ಬದುಕಿ ಹಿಂದಕೆ ಬರಲಿ

ಶಾಲೆಗೆ ಹೋದ ಹಸುಳೆ ಕ್ಷೇಮದಿಂದಿರಲಿ

ಮಕ್ಕಳ ನೆನೆದು ಯಾವ ತಾಯೂ ಭೀತಿ ಪಡದಿರಲಿ

ಮುಖವಿಲ್ಲದ ವೈರಿಯ ಕ್ರೌರ್ಯದ ಗುಂಡಿಗೆ

ಬಲಿಯಾದ ಹೆಂಡಿರ ಗುಂಡಿಗೆಯ ರಕ್ತ ತೊಟ್ಟುವುದ

ಯಾವ ನಿರ್ಭಾಗ್ಯ ಗಂಡನೂ ನೋಡುವಂತಾಗದಿರಲಿ

ಇತ್ಯಾದಿ, ಇತ್ಯಾದಿ

ಹೀಗೇ ಬೆಳೆಯುತ್ತದೆ ನನ್ನ ಪಟ್ಟಿ

ನವರಾತ್ರಿ ಕಳೆದರೂ ವಿಜಯ ದಶಮಿ ಬರುವುದಿಲ್ಲ

ಸರಸತಿಯ ಆರಾಧಿಸಿದರೂ ಮೌಢ್ಯ ಹೋಗುವುದಿಲ್ಲ

ಪೂಜೆಗಿಟ್ಟ ಪುಸ್ತಕವನ್ನು ಯಾರೂ ಓದುವುದಿಲ್ಲ

ದುರ್ಗಾಷ್ಟಮಿಯಂದು ದೇವಿ ಪ್ರತ್ಯಕ್ಷವಾಗುವುದಿಲ್ಲ

ಕಲ್ಕತ್ತೆಯ ಗಲ್ಲಿಗಲ್ಲಿಗಳಲ್ಲಿ ಹಾಜರಾಗುವ

ಕಾಳಿಯ ಕಯ್ಯಿನ ಕತ್ತಿಯಲಿ ಹೊಳಪುಂಟು ಹರಿತವಿಲ್ಲ

ಅದು ಮಹಿಷನನು ಕೊಲ್ಲುವುದಿಲ್ಲ

ನೀರಿನಲಿ ಬಿದ್ದು ಕರಗಿ ಮುಂದಿನ ವರ್ಷಕ್ಕೆ

ಕಾಯುವ ಕತ್ತಿ ಯಾರನ್ನೂ ಕಾಯುವುದಿಲ್ಲ

ದಸರೆ ಕಳೆದು ದೀಪಾವಳಿ ಬಂದೇ ಬರುತ್ತದೆ

ಆದರೆ ನರಕ ಸಾಯುವುದಿಲ್ಲ

ವಾಮನ ಬೆಳೆದು ತ್ರಿವಿಕ್ರಮನಾಗುವುದಿಲ್ಲ

ದರ್ಭೆಯ ಮೊನಚಿಗೆ ಶುಕ್ರನ ಕಣ್ಣು ಸಾಟಿಯಾಗುವುದಿಲ್ಲ

ಬಲೀಂದ್ರನಂಥಾ ಭಕ್ತರನು ತುಳಿದು

ಬಲಿಹಾಕುವುದನ್ನು ಆ ಕುಳ್ಳ ಮರೆಯುವುದಿಲ್ಲ

ಲಕ್ಷ ದೀಪಗಳ ಸಾಲು ಸಾಲುವುದಿಲ್ಲ

ಕೋಟಿ ಯುಗಗಳ ಕಗ್ಗತ್ತಲು ಕವಿದಿದೆಯಲ್ಲ

ವೀರಪ್ಪ ಸಿಕ್ಕುವುದಿಲ್ಲ ಕಾಶ್ಮೀರ ಬಗೆಹರಿಯುವುದಿಲ್ಲ

ದ್ವೇಷ ಅಡಗುವುದಿಲ್ಲ ಯುದ್ಧ ನಿಲ್ಲುವುದಿಲ್ಲ

ಓಸಾಮ ಸಾಯುವುದಿಲ್ಲ ಸದ್ದಾಮ ಸೋಲುವುದಿಲ್ಲ

ಬಾಗ್ದಾದ್‌ ಬೇಟೆಗೆ ಪಿಳ್ಳೇ ನೆವ ಸಾಕಷ್ಟಿದೆಯಲ್ಲ

ಹರಿಯುವ ರಕ್ತಕ್ಕೆ ತಡೆಯಿಲ್ಲ ಬೆಂಕಿ ಆರಿಸಲು ನೀರಿಲ್ಲ

ಕಳಿಂಗದಲಿ ಅಶೋಕ ಕಲಿತ ಪಾಠ ಬುಷ್ಷನಿಗೇಕೆ ತಿಳಿದಿಲ್ಲ ?

ಇರಾಕಿನ ಎಣ್ಣೆಯ ಮೇಲೇ ಅಮೇರಿಕದ ಕಣ್ಣುಗಳೆಲ್ಲ

ಎಣ್ಣೆ ಇಲ್ಲದೇ ದೀಪ ಹತ್ತುವುದಿಲ್ಲ

ಬಿನ್ನಹಕೆ ಬಾಯಿಲ್ಲ ಬೇಡಿಕೆಗೆ ಕೊನೆಯಿಲ್ಲ

ನಾಳೆ ಬೆಳಗಾಗ ಮತ್ತೆ ದೀಪಾವಳಿ ಬರುವುದಲ್ಲ!

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more