ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತು

By Staff
|
Google Oneindia Kannada News


Sripada V Hegde
*ಶ್ರೀಪಾದ. ವಿ. ಹೆಗಡೆ

ಮುಂಜಾನೆ ಮಂಜಿನಲಿ
ಮಲ್ಲಿಗೆಯ ನಗೆ ಚೆಲ್ಲಿ
ಮಡದಿ ಕೊಟ್ಟಾಳೊ ಮುತ್ತೊಂದ

ಮೆತ್ತನೆಯ ಮಂಚದಲಿ
ಮನದ ಅಂದವ ಚೆಲ್ಲಿ
ಕೊಟ್ಟಳೊ ಮತ್ತೊಂದ

ಮಿಂಚಿನಾ ಬಳ್ಳಿಯಲಿ
ಮಧುವಿನ ಸವಿ ಚೆಲ್ಲಿ
ಮುಖದಲಿ ಅರಳಿತೊ ಮುತ್ತೊಂದು

ಮಂದಹಾಸದ ಬೆಳಕಿನಲಿ
ಮಧುರ ಒಲವನು ಚೆಲ್ಲಿ
ಅರಳಿತೊ ಮತ್ತೊಂದು

ಮಾಗಿದಾ ಕನಸಿನಲಿ
ಮುಗಿಯದಾ ಆಸೆ ತುಂಬಿ
ಮತ್ತೆ ಮತ್ತೆ ನಲಿಯಿತೊ ಮುತ್ತೊಂದು

ಮಾನಿನಿಯಾ ತುಟಿಯಲಿ
ಮಾದಕ ಸುಧೆ ತುಂಬಿ
ನಲಿಯಿತೊ ಮತ್ತೊಂದು

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X