ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮಷ್ಟಕ್ಕೆ ತಾವೆ

By Staff
|
Google Oneindia Kannada News


*ವಿಕ್ರಮ್‌

ಹಸಿರು ಹುಲ್ಲಿನ ಹಾಸಿನ ಮೇಲೆ
ಬಿದ್ದ ಮಳೆಯ ಸುವಾಸನೆಯ ಸವಿಯುತ್ತಾ
ಮೈಮರೆತಿದೆ ಹೊಸ ಜೋಡಿ

ಸಮಯದ ಅರಿವಿಲ್ಲ
ಸಮಾಜದ ಭಯವಿಲ್ಲ

ಕಣ್ಣಲ್ಲಿ ಕಣ್ಣು ಸೇರಿಸಿ
ಕೈ ಕೈ ಹಿಡಿದು
ಸುತ್ತುತ್ತಾ ಗಂಧರ್ವಲೋಕವ

ಕವಿದ ಮೋಡಗಳಲಿ ಬೀಸುವ ತಂಗಾಳಿಯಲಿ
ನಿರೀಕ್ಷಿಸಿದ್ದಾರೆ ಯಾವುದನ್ನೋ

ಗುಡು ಗುಡು ಗುಡುಗಿ
ಭರ್ರೆಂದು ಹುಯ್ಯುವ ಮಳೆಗೆ ಮೈಯಾಡ್ಡಿ
ಬರೆದಿದ್ದಾರೆ ಅಮರ ಕಥೆಯ

ಹಸಿರು ಹುಲ್ಲ ಹಾಸಿನ ಮೇಲೆ
ಕುಣಿದು ಪುಟಿದು ಜಾರುವ ಹನಿಯಂತೆ
ಆಡಿವೆ ಆಸೆಗಳು ಮನದಾಳದಲಿ

ನೀರಾಗಿ ಉಕ್ಕಿವೆ ಭಾವನೆಗಳು
ಪ್ರೇಮದ ತಲಕಾವೇರಿಯಿಂದ
ಪ್ರೇಮಕ್ಕಿದೆಂತಹ ಸುಗ್ಗಿ ?

ಕೋಲ್ಮಿಂಚು ಛೇದಿಸಿದೆ ಕಾರ್ಮೋಡವ
ಮಿಂಚಿಗೆ ಹೊಳೆದಿದೆ ನಲ್ಲೆಯ ಕಣ್ಣಂಚಿನ ನಾಚಿಕೆ
ಕಣ್ಮುಚ್ಚಿ ತೆರೆಯುವುದರೊಳಗೆ
ತುಟಿಗೆ ತುಟಿ ತಾಗಿ
ಮನಗಳು ಮುಟ್ಟಿ
ಹೃದಯಗಳು ಬೆಸೆದು
ಸುರಿಯುತಿದೆ ಒಲವಿನ ಮಳೆ

ಜಾರಿವೆ ಮುತ್ತಿನ ಹನಿಗಳು ತಲೆಯಿಂದ ಕಾಲ್ವರೆಗೆ !

ಟಪ ಟಪ ಬೀಳುವ ಮಳೆಗೆ
ತಟ ತಟ ಸೂರಿನ ತಮಟೆ
ಹಾಕಿದೆ ತಾಳ ಪ್ರೇಮಗವನಕ್ಕೆ

ಮಳೆಯ ಆರ್ಭಟ
ನಿಂತು ತೂರಿ ಬಂದಿದೆ
ಹೊಂಗಿರಣ ನಿರ್ಮಲ ಬಾನಲಿ

ನಲ್ಲನೆದೆಯ ಮೇಲೆ
ತಲೆಯಿಟ್ಟು ದಿಟ್ಟಿಸಿದ್ದಳಾಕೆ
ಗರಿಕೆಯಂಚಿನಲಿ ನಿಂತ
ಸ್ವರ್ಗದ ನೀರ್ಹನಿಯ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X