ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವರ್ಣ ಮಕುಟವ ಧರಿಸಿದವಗೆ, ಗೌರವರ್ಣದ ಸುಗಜವದನಗೆ...

By Staff
|
Google Oneindia Kannada News
ರಾಘವೇಂದ್ರ ಹೆಬ್ಬಳಲು ಎಂದೊಡನೆ ಉತ್ತರ ಕ್ಯಾಲಿಫೋರ್ನಿಯಾ ಸಹೃದಯರಿಗೆ ಸಂಸ್ಕೃತ ನೆನಪಾಗುತ್ತದೆ. ವೃತ್ತಿಯಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆದರೂ, ಹೆಂಡತಿ ಜೊತೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತಾಡಬಲ್ಲಷ್ಟು ಪಳಗಿರುವ ರಾಘವೇಂದ್ರ, ಬೇ ಏರಿಯಾದಲ್ಲಿ ಹೆಂಡತಿಯಾಟ್ಟಿಗೆ ಸಂಸ್ಕೃತದ ಪಾಠವನ್ನೂ ಹೇಳುತ್ತಾರೆ. ಉತ್ತರ ಕ್ಯಾಲಿಫೋರ್ನಿಯಾದಿಂದ ಪ್ರಕಟವಾಗುವ ‘ಅಪೂರ್ವ ವಾಣಿ’ ಇಂಟರ್ನೆಟ್‌ ನಿಯತಕಾಲಿಕಲ್ಲೂ ಇವರ ಹವಿಸ್ಸಿದೆ. ಈ ನಿಯತಕಾಲಿಕದ ಪ್ರಧಾನ ಸಂಪಾದಕಿ ರಾಘವೇಂದ್ರರ ಪತ್ನಿ.

ಅಷ್ಟೇ ಅಲ್ಲ, ‘ಇಂಚರ’ ಎಂಬ ಸಂಗೀತಗಾರರ ಸಮೂಹದಲ್ಲೂ ರಾಘವೇಂದ್ರ ತೊಡಗಿಕೊಂಡಿದ್ದಾರೆ. ಅರ್ಥಾತ್‌ ರಾಘವೇಂದ್ರ ಸಂಗೀತಗಾರರೂ ಹೌದು. ಹ್ಯೂಸ್ಟನ್‌ ವಿಶ್ವ ಕನ್ನಡ ಸಮ್ಮೇಳನ- 2000 ಮತ್ತು ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನ- 2002ರಲ್ಲಿ ‘ಇಂಚರ’ದ ಕಾರ್ಯಕ್ರಮಗಳಲ್ಲಿ ರಾಘವೇಂದ್ರ ತೊಡಗಿಕೊಂಡಿದ್ದರು. ನೀವು ಈವರೆಗೆ ಓದಿದ್ದು ಎಂಜಿನಿಯರ್‌, ಸಂಸ್ಕೃತ ವಾಗ್ಮಿ ಹಾಗೂ ಸಂಗೀತಗಾರ ರಾಘವೇಂದ್ರರ ಬಗ್ಗೆ. ಈಗ ಅವರೊಳಗಿನ ಕವಿ ಮಾತಾಡಿದ್ದಾನೆ. ಈ ಕವಿಯ ಆಲಾಪನೆಯನ್ನೂ ಕೇಳಿ...

ಬೆನಕ ನಮನ*ರಾಘವೇಂದ್ರ ಹೆಬ್ಬಳಲು, ಸನಿವೇಲ್‌, ಕ್ಯಾಲಿಫೋರ್ನಿಯಾ

ನಮಿಸಿ ಬೆನಕಗೆ ನಮಿಸಿ ಗಣಪಗೆ
ನಮಿಸಿ ಹಿಮದೊರೆಕುವರಿಕುವರಗೆ ।
ನಮಿಸಿ ತಡೆಗಳ ಹೊಡೆವ ಶಕ್ತಗೆ
ನಮಿಸಿ ಪರಶಿವ ಪ್ರಣವರೂಪಗೆ ।।1।।

ಸ್ವರ್ಣ ಮಕುಟವ ಧರಿಸಿ ಮೆರೆವಗೆ
ಗೌರವರ್ಣದ ಸುಗಜವದನಗೆ ।
ರತ್ನಮಣಿಮಯ ಹಾರಕಂಠಗೆ
ನಮಿಸಿ ಆತ್ಮಾರಾಮ ಹೃದಯಗೆ ।।2।।

ವಿಶ್ವವನ್ನೇ ಒಳಗೆ ಸೇರಿಸಿ
ನಾಗಸೂತ್ರದಿ ಉದರ ಕಟ್ಟಿದ ।
ವಿಧಿಸುರಾಸುರವಿನುತಪಾದಗೆ
ನಮಿಸಿ ಪಾಶಾಂಕುಶಧರನಿಗೆ ।।3।।

ಪ್ರೇಮದಿಂದಲಿ ನತರ ಪೊರೆವಗೆ
ನಿಮಿಸಿ ಷಣ್ಮುಖಸೋದರನಿಗೆ ।
ಅದ್ವೆ ೖತ ಪ್ರಿಯ ಪರಾತ್ಪರನಲಿ
ಭಕ್ತಿಯಿಂದಲಿ ಶರಣುಹೊಕ್ಕುವ ।। 4।।

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X