ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆ ಬೋನಸ್ಸು :‘ಮನೆ ಅಳಿಯಾಗಿರು ಕಾಳಜಿ ಯಾಕೆ’ ಕರೆದಾನ ಮಾವಾ!

By Staff
|
Google Oneindia Kannada News

Fans in Arms : Author Jairaj Galagali as seen with Dr. Rajkumarಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ‘ಚೈತ್ರೋಲ್ಲಾಸ’ ದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’ ಯ ಕವಿತಾ ಸಪ್ತಾಹ ದಟ್ಸ್‌ ಕನ್ನಡದ ಓದುಗರಿಗೆ ಮೆಚ್ಚಿಗೆಯಾಗಿದೆ. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಅವರ ಹಾಸ್ಯ ಕವಿತೆಗಳನ್ನು ಓದಿ ನಕ್ಕವರ ಸಂಖ್ಯೆ ದೊಡ್ಡದು. ಮಹಿಳೆಯರ ನಡುವೆ ಕಾವ್ಯದ ಹಾಜರಿ ಹಾಕಿದ ಪುರುಷ- ಜೈ ರಾಜ್‌ ಗಲಗಲಿ!
ಅವರು ಒರ್ಯಾಕಲ್‌ ಕಂಪ್ಯೂಟರ್‌ ಕಂಪೆನಿಯಲ್ಲಿ ಕಂಪ್ಯೂಟರ್‌ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಜೈರಾಜ್‌ರ- ‘ಅವ್ವ ಅಪ್ಪ ಹೊಂಟಾರ ನೋಡ ಅಮೆರಿಕಾಕ’ ಕವಿತೆ ಹಾಸ್ಯದ ಬೋನಸ್ಸು ! ಇಷ್ಟವಾಯಿತಾ? ಬರೆಯಿರಿ..

ಅವ್ವ ಅಪ್ಪ ಹೊಂಟಾರ ನೋಡ ಅಮೆರಿಕಾಕ
*ಜೈರಾಜ್‌ ಗಲಗಲಿ, ಕುಪರ್ಟಿನೊ

ಅವ್ವ ಅಪ್ಪ ಹೊಂಟಾರ ನೋಡ ಅಮೆರಿಕಾಕ-
ಒಂಬತ್ತರಾಗಿನ ಮುದ್ದಿನ ಮಗಳ ಬಾಣಂತನಕ!

ಮೊನ್ನೆ ಇನ್ನು ಮದುವಿ ಮಾಡಿ ಕಳಿಸ್ಯಾರಲ್ಲೆನ ;
ಎಂಥಾ ಛಂದ ಅಮೆರಿಕ ವರಗ ಕೊಟ್ಟಾರಲ್ಲೆನ.
ಹರಳ ಸಂಡಿಗೆ ಉದ್ದಿನ ಹಪ್ಪಳ ಹೇಳಿ ಮಾಡಿಸ್ಯಾರ ;
ಅಳಿಯಾಗ ಮೆಂತೆ ಹಿಟ್ಟು ಉಪ್ಪಿನಕಾಯಿ ವೈದಾರ.

ಗರ್ಭಿಣಿ ಮಗಳ ಹೊಟ್ಟಿ ನೋಡಿ ಹೈರಾಣ ಮರೆತಾರ;
ಸಂತಸದಿಂದ ತಬ್ಬಿಕೊಂಡು ಹಿರಿಹಿರಿ ಹಿಗ್ಗ್ಯಾರ.
ಹೊಸ ಹೊಂನ್ಡಾ ಸವಾರಿ ಮಾಡುತ ಹೌಹಾರ್ಯಾರಲ್ಲ;
ನೋಡ ಕಾರಿನ ಜೊರೆಂದಳಿಯ ಬಡೆದಾನ ಡೌಲ!

ಗೋಲ್ಡನ್‌ ಗೇಟು ಮಿಸ್ಟ್ರಿ ಪಾಯಿಂಟು ನೋಡ್ಯಾರಲ್ಲೆನ ;
ಫ್ರೆಂಚ್‌ ಫ್ರೆೃಸು ವೆಜ್ಜಿ ಪಿಜ್ಜಾ ತಿಂದಾರಲ್ಲೆನ.
ಗೆಳೆಯರು ಕರೆದ ಊಟದ ಔತಣಕ ಹೋಗ್ಯಾರ ಶನಿವಾರ;
ಬಿಸಿ ಬಿಸಿ ಊಟ ಹೊಡೆತಾ ಹೊಡೆದು ತೇಗುತ ಹರಿಸ್ಯಾರ.

ಮಗಳಿಗೆ ಹುಟ್ಟಿತು ಗಂಡು ಕೂಸು ಬಂಗಾರದಂಗ ;
ಪುಟಾಣಿ ಪಾಪಾ ಅಮೆರಿಕ ಪ್ರಜೆಯು ಕೆನಡಿ ಹಂಗ.
ನಾಕ ದಿನದಾಗ ಮಗಳು ಹೊಂಟಳು ನೌಕರಿ ಅನಕೋತ-
ಅವ್ವ ಅಪ್ಪ ಮನ್ಯಾಗ ಇದ್ದರು ಕೂಸ ನೋಡಕೋತ.
ಡಿಷ್ಶ್‌ ವಾಶ ವ್ಯಾಕ್ಯುಮ್‌ ಕ್ಲೀನ ಮಾಡ್ಯಾರಲ್ಲೇನ ;
ಅದಕೇನ ಕರೆದರು ಮುಸರಿ ಕಸ ಹೌದಲ್ಲೆನ.

ಡಾಟ್‌ ಕಾಮ ಮ್ಯಾಲೇ ಹಾರಿ ಬಿತ್ತ ಧಂಮ್ಮಂತ!
ಮಗಳು ಅಳಿಯ ಕೆಲಸ ಕಳಕೊಂಡು ಬಂದಾರ ಅಳಕೋತ.
ಯೆಷ್ಟೋ ಹುಡಿಕ್ಯಾರ ಬ್ಯಾರೆ ನೌಕರಿ ಒಟ್ಟ ಸಿಗವಲ್ದ ;
ಕಾರಿನ ಸಾಲ ಮನಿಯ ಬಡ್ಡಿ ಮೈ ಮ್ಯಾಲ ಬಂತ ;
ಗತಿಯೇನ ಮುಂದ ಪಾಡ ಪಟ್ಟಾರ ಅಮೆರಿಕ ಬೈಕೋತ!

‘ ಅಳತೀರ್ಯಾಕ್ರಲೆ ಹೋಗೋಣ ಊರಿಗೆ ನಡಿರೆ’ ಎಂದಾಳವ್ವಾ;
‘ಮನೆ ಅಳಿಯಾಗಿರು ಕಾಳಜಿ ಯಾಕೆ’ ಎಂದು ಕರೆದಾನ ಮಾವಾ!

ಕಾವ್ಯ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X