• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಡೆದಾಡುವುದು ಕೋಳಿ ಧರ್ಮ, ಧರ್ಮಕಾಗಿ ಸಾಯಲಿ ಬಿಡಿ !

By Staff
|

Prakash Naikಗ್ರಾಮೀಣ ಸೊಗಡಿನ ‘ಕೋಳೀ ಅಂಕ’- ಯುದ್ಧ ಸ್ವರೂಪದ ಕ್ರೀಡೆ. ಹೋರಾಡುವುದು ಕೋಳಿಗಳಾದರೂ ಪ್ರತಿ ಕೋಳಿಯ ಹಿಂದೆ ಒಂದು ಬಣದ ಪ್ರತಿಷ್ಠೆ ಪಣವಾಗಿರುತ್ತದೆ. ಒಡೆಯನ ಮೋಜು- ಪ್ರತಿಷ್ಠೆಗೋಸ್ಕರ ಪಾಪದ ಕೋಳಿ ಕಾದಾಡುತ್ತದೆ. ಎರಡರಲ್ಲೊಂದು ಕೋಳಿ ಸಾಯುವವರೆಗೂ ಕಾದಾಟ ನಿಲ್ಲದು. ರುದ್ರ ಭಯಂಕರ ಆಟ. ‘ಕೋಳೀ ಅಂಕ’ ಈಗ ಮೊದಲಿನಷ್ಟು ವ್ಯಾಪಕವಾಗಿಲ್ಲ . ಜೂಜಿನ ಖದರಿನ ಈ ಕ್ರೀಡೆಯನ್ನು ನೆನಪಿಸಿಕೊಂಡಿದ್ದಾರೆ ಪ್ರಕಾಶ ನಾಯಕ. ಇಲ್ಲಿನ ಕವಿತೆಯ ಸಾಲುಗಳು ಕೇವಲ ಆಟದ ಕುರಿತು ಮಾತ್ರ ಮಾತನಾಡುತ್ತಿಲ್ಲ ; ‘ಕೋಳೀ ಅಂಕ’- ವರ್ತಮಾನದ ಮುಖವಾಡಗಳ ಕುರಿತು, ನಮ್ಮೆಲ್ಲರ ಬದುಕಿನ ತಲ್ಲಣಗಳ ಕುರಿತು ಮಾತನಾಡುತ್ತಿದೆ. ಅಪರೂಪದ ಈ ಕವಿತೆಗೆ ಸ್ವಾಗತ!

‘ಕೋಳೀ ಅಂಕ’

*ಪ್ರಕಾಶ ನಾಯಕ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Cockfight ಬನ್ರಲಾ, ನೋಡ್ರಲಾ.
ಒಮ್ಮೆ ನೋಡಿದರೆ ಮತ್ತೊಮ್ಮೆ,
ಮತ್ತೊಮ್ಮೆ ನೋಡಿದರೆ ಮಗದೊಮ್ಮೆ,
ಸಾಯುವವರೆಗೂ ನೋಡಲೇಬೇಕಾದ
ಕೋಳಿ ಅಂಕ ! ಇದಕ್ಕಿಲ್ಲ ಸುಂಕ !!



ಕೆಂಪು ಕೋಳಿ, ಹಸಿರು ಕೋಳಿ
ಎರಡೂ ನಮ್ಮವೇ, ನಿಮ್ಮವೇ !
ಕತ್ತಿ-ಗುರಾಣಿ ಎಲ್ಲ ಗೊತ್ತು,
ಕೊಟ್ಟಿದ್ದೇವೆ ಎರಡಕ್ಕೂ ಮತ್ತು.
ಕತ್ತಿ ಕಟ್ಟಿ ಬಿಟ್ಟಿದ್ದೇವೆ,
ಎತ್ತಿ ಕಟ್ಟಿ ಬಿಟ್ಟಿದ್ದೇವೆ.




ಯಾರಲ್ಲಿ !
ಬಂದನೇನು ಖಾಕಿಯವನು,
ಅವನಿಗೊಂದು ಕಾಫಿ ಕೊಡಿ.
ಬಂದರೇನು ಬಾಂದಿನವರು,
ಅವರಿಗಿಷ್ಟು ಬ್ರಾಂದಿ ಕೊಡಿ.
ಬೇಕು ನಮಗೆ, ಅವರು-ಇವರು,
ಎಲ್ಲರನ್ನೂ ಬದುಕ ಬಿಡಿ





ಪ್ರಾಣಿ ಹಿಂಸೆ ಮಹಾ ಪಾಪ,
ನನಗೂ ಗೊತ್ತು, ನಿಮಗೂ ಗೊತ್ತು ?
ಪಾಪಿ ಕೋಳಿಗೇನು ಗೊತ್ತು ?
ನಡೆಯಲಿ ಬಿಡಿ ಇದೊಂದು ಸಾರಿ.
ಕೋಳಿಯವನು, ಕೊಳ್ಳಿಯವನು,
ಕತ್ತಿಯವನು, ಖಾಕಿಯವನು...
ಸಂಸಾರಸ್ಥರು ಸ್ವಾಮಿ, ಬದುಕಬಿಡಿ.





ನಿಮ್ಮದಂತೂ ಪವಿತ್ರ ಆತ್ಮ,
ಕೆಸರಲೇಪವಿಲ್ಲವೆನಿತು!
ನಾನೋ! ಕೆಸರಗೀಳಿನ ಕೇಸರಿ,
ಸೂತ್ರಧಾರಿ, ಪಾತ್ರಧಾರಿ.
ನನ್ನ ನಂಬಿ, ಮಝಾ ಮಾಡಿ,
ನಿಮ್ಮ ಧರ್ಮ, ಕರ್ಮ ಮಾಡಿ,
ಅದರ ಫಲ ನನಗೆ ಬಿಡಿ





ನನ್ನ ನಂಬಿ, ಆಟ ನೋಡಿ.
ಕೆಂಪೋ, ಹಸಿರೋ ಸಾಯಲಿ ಬಿಡಿ.
ಕೋಳಿ ಜಾತಿಗಿಲ್ಲ ಸಾವು,
ಹೊಡೆದಾಡುವುದು ಜಾತಿ ಧರ್ಮ,
ಧರ್ಮಕಾಗಿ ಸಾಯಲಿ ಬಿಡಿ
ಕತ್ತು ಕೊಯ್ದರೂ ಕತ್ತಿಯೆತ್ತಿ
ಮುನ್ನುಗ್ಗುವ ಮಾಟ ನೋಡಿ.





ಯಾವ ಕೋಳಿ ?ಎಲ್ಲಿ ಗಾಯ ?
ಎಂಥ ಪಟ್ಟು ! ಎಂಥ ಮೆಟ್ಟು !!
ಉಸಿರು ಹಿಡಿದು ನೋಡುತ್ತಿರಿ,
ಭಾವನೆಗಳ ಹಿಡಿದುಕೊಳ್ಳಿ.
ಭಾವನೆಗಳ ಹಿಡಿದು ಕೊಲ್ಲಿ.
ಕೊಳ್ಳಿ ಹಿಡಿದು ನೋಡುತ್ತಿರಿ.




ಬಿಟ್ಟ ಕಣ್ಣು ಬಿಟ್ಟ ಹಾಗೆ.
ಕೋಳಿ, ಕತ್ತಿ, ಕೆಂಪು ಬಣ್ಣ !
ನೋಡುತ್ತಿರಿ, ಎಣಿಸುತ್ತಿರಿ.
ಹೊತ್ತು ಮುಳುಗುವ ತನಕ,
ಸುಸ್ತು ಹೊಡೆಯುವ ತನಕ,
ನನಗಾಗಿ ನೋಡುತ್ತಿರಿ, ನೋಡುತ್ತಿರಿ.




ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more