ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಂದನ*ಸುಪ್ತದೀಪ್ತಿ ಕುಪರ್ಟಿನೊ, ಕ್ಯಾಲಿಫೋರ್ನಿಯಾ

By Staff
|
Google Oneindia Kannada News

ಗುರುವಂದನ
*ಸುಪ್ತದೀಪ್ತಿ ಕುಪರ್ಟಿನೊ, ಕ್ಯಾಲಿಫೋರ್ನಿಯಾ
Jyothi mahadevವಯೋವೃದ್ಧ, ಜ್ಞಾನವೃದ್ಧ, ಪ್ರೀತಿಬದ್ಧರು,
ಕಣ್ಣ ಬೆಳಕ ಹೃದಯದೊಳಗೆ ಇಳಿಸಿ ಬಿಡುವರು.

ಮಾತೆ-ಮಮತೆ, ಅನ್ನಪೂರ್ಣೆ, ಒಲವ ಕೊಡುವರು,
ತಂದೆ-ಶಿಸ್ತು, ಮಾರ್ಗದರ್ಶಿ, ಬಲವ ಬೆಳೆವರು.

ಕೈಯ ಹಿಡಿದು, ಹೆಜ್ಜೆಯಿರಿಸಿ, ಗುರಿಯ ತೋರ್ವರು,
ಸಾಧನೆಯಲಿ ಸಂಗ ನೀಡಿ, ಗರಿಯನೀವರು

ಅಂತರಂಗ ಸಖ್ಯಕೊಂದು ಅರ್ಥವಿತ್ತರು,
ಆತ್ಮದುನ್ನತಿಯ ದಾರಿಯನ್ನು ತೆರೆದರು.

ಕನ್ನಡತನ, ಕನ್ನಡಮನ, ಕನ್ನಡವುಸಿರು,
ಕಂಡವರಿಗೆ ಸುಜ್ಞಾನವನುಣಿಸುವ ಬೇರು.

ಬಿಟ್ಟರಿಲ್ಲ ಇವರಿಗೆ ಸಮ, ಯಾವ ದೇಶ-ಊರು,
ನಂದಿನಿ ಮಿಗೆ ಸುಮನೆಯರಿಗೆ ‘ಹನಾಸುನಂ’ ತೌರು.

ಹರಿಗೆ ಲಕ್ಷ್ಮಿ, ಹರಗೆ ನಾಗ, ಈಶ ಪಂಡಿತ,
ನಮನಯೋಗ್ಯರಿವರೆ- ಜೋಡು ಶಾರದಾಂಕಿತ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X